ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ರಾಜಕುಮಾರಿ ಡಯಾನಾ ಸಾವು ಕೊಲೆಯಿಂದಾಯಿತೇ? (Princess Diana | Paris crash | Michael Mansfield | Dodi Fayed)
Bookmark and Share Feedback Print
 
ಪ್ಯಾರಿಸ್ ರಸ್ತೆ ಅಪಘಾತದ ಕುರಿತು ಹಲವು ಸಂಶಯಗಳಿಗೆ ಉತ್ತರ ಸಿಕ್ಕಿಲ್ಲ ಎಂದು ಉಲ್ಲೇಖಿಸಿರುವ ಬ್ರಿಟೀಷ್ ಹಿರಿಯ ವಕೀಲರೊಬ್ಬರು, ರಾಜಕುಮಾರಿ ಡಯಾನಾ ಹತ್ಯೆಯಾಗಿರುವ ಸಾಧ್ಯತೆಗಳಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಜ ಕುಟುಂಬ ಮತ್ತು ವ್ಯವಸ್ಥೆಗೆ ವೇಲ್ಸ್ ರಾಜಕುಮಾರಿ ಬೆದರಿಕೆಯಾಗಿ ಪರಿಣಮಿಸಿದ್ದರಿಂದ ಆಕೆಯ ಕುರಿತು ಬೇಹುಗಾರಿಕೆ ನಡೆಸುತ್ತಿರುವ ಭಯ ಸ್ವತಃ ಆಕೆಯ ಅನುಭವಕ್ಕೆ ಬಂದಿತ್ತು ಎಂದು ಪ್ರಕರಣದ ವಕೀಲ ಮೈಕೆಲ್ ಮ್ಯಾನ್ಸ್‌ಫೀಲ್ಡ್ ಹೇಳಿದ್ದಾರೆ.

ನನ್ನ ಪ್ರಕಾರ ಸಾವುಗಳು ಸಂಭವಿಸಿರುವುದು ಹತ್ಯೆಯಿಂದಾಗಿ ಎಂದು ಡಯಾನಾ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೋಡಿಯ ತಂದೆ ಮೊಹಮ್ಮದ್ ಅಲ್ ಪಾಯೆದ್ ಅವರನ್ನು ಪ್ರತಿನಿಧಿಸುತ್ತಿರುವ 68ರ ಹರೆಯದ ವಕೀಲ ಮ್ಯಾನ್‌ಫೀಲ್ಡ್ ಅಭಿಪ್ರಾಯಪಟ್ಟಿದ್ದಾರೆ.

ರಾಜಕುಮಾರಿ ಡಯಾನಾ ಮತ್ತು ಆಕೆಯ ಪ್ರಿಯಕರ ದೋಡಿ ಅಲ್ ಫಾಯೆದ್‌ ಸಾಯಬೇಕೆಂದು ಬಯಸುತ್ತಿದ್ದ ಮೂಲಗಳ ಬಗ್ಗೆ ಮೊಹಮ್ಮದ್ ಅಲ್ ಫಾಯೆದ್ ಈ ಹಿಂದೆ ಹಲವು ಬಾರಿ ಹೇಳಿಕೊಂಡಿದ್ದಾರೆ ಎಂದೂ ವಕೀಲರು ವಿವರಣೆ ನೀಡಿದ್ದಾರೆ.

1997ರ ಆಗಸ್ಟ್ 31ರಂದು ನಡೆದ ಅಪಘಾತದಲ್ಲಿ ಡಯಾನಾ ಮತ್ತು ಫಾಯೆದ್ ಸಾವನ್ನಪ್ಪಿರುವುದರ ಹಿಂದೆ ಪಿತೂರಿಗಳು ನಡೆದಿರುವ ಸಾಧ್ಯತೆಗಳಿವೆ ಎಂದು ಸಾರ್ವಜನಿಕ ಅಭಿಪ್ರಾಯವೂ ಇದೆ ಎಂದು ಮ್ಯಾನ್ಸ್‌ಫೀಲ್ಡ್ ಬರೆದಿರುವ ಆತ್ಮಕತೆಯಲ್ಲಿ ತಿಳಿಸಿದ್ದಾರೆ.

ಈ ಅಪಘಾತದಲ್ಲಿ ಡಯಾನಾ ಪ್ರಿಯಕರ ಎಂದು ಹೇಳಲಾಗಿರುವ ದೋಡಿ ಕೂಡ ಮೃತರಾಗಿದ್ದರು. ಇದಕ್ಕೂ ಕೆಲವು ಸಮಯದ ಮುಂಚೆ ಬ್ರಿಟನ್ ರಾಜಕುಮಾರ ಚಾರ್ಲ್ಸ್ ಅವರಿಂದ ಡಯಾನಾ ವಿಚ್ಛೇದನ ಪಡೆದಿದ್ದರು.

ಅಕೆಯನ್ನು ಯಾರಾದರೂ ಸಾವಿನಲ್ಲಿ ನೋಡಲು ಬಯಸಿದ್ದರೆಂಬ ಮಾತಿನಲ್ಲಿ ನನಗೆ ನಂಬಿಕೆಯಿಲ್ಲ. ನನ್ನ ಪ್ರಕಾರ ದೋಡಿಯ ಜತೆಗಿನ ಆಕೆಯ ಸಂಬಂಧವನ್ನು ಕೊನೆಗೊಳಿಸಿ, ಆಕೆಯ ಜೀವನವನ್ನು ಬದಲಾಯಿಸುವ ಮತ್ತು ಆಕೆಯ ಇತರ ಚಟುವಟಿಕೆಗಳನ್ನು ತಡೆಯಲು ಯತ್ನಿಸುವ ಯೋಜನೆಯಿತ್ತು. ಆದರೆ ಈ ಯೋಜನೆ ತೀರಾ ಕೆಟ್ಟದಾಗಿ ಪರಿಣಿಸಿ ಆಕೆಯ ಸಾವಿನೊಂದಿಗೆ ಅಂತ್ಯವಾಯಿತು ಎಂದು ಮ್ಯಾನ್‌ಫೀಲ್ಡ್ ಈ ಹಿಂದೆ ಹೇಳಿಕೆ ನೀಡಿರುವುದನ್ನು ಸ್ಮರಿಸಬಹುದಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ