ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕಿಸ್ತಾನ ಸೇನಾ ಮುಖ್ಯಸ್ಥ ಕಯಾನಿ ಅವಧಿ ವಿಸ್ತರಣೆ (Pak Army Chief | Pakistan | Ashfaq Parvez Kayani | Pervez Musharraf)
Bookmark and Share Feedback Print
 
ಪಾಕಿಸ್ತಾನ ಮಿಲಿಟರಿ ಮುಖ್ಯಸ್ಥ ಜನರಲ್ ಅಶ್ಫಕ್ ಫರ್ವೇಜ್ ಕಯಾನಿಯವರ ಅಧಿಕಾರವಧಿ ಇದೇ ವರ್ಷ ಮುಕ್ತಾಯವಾಗಲಿದೆ ಎಂಬ ಊಹಾಪೋಹಗಳಿಗೆ ತೆರೆ ಬಿದ್ದಿದೆ. ಭಯೋತ್ಪಾದನೆಯ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಅವರ ಮುಂದುವರಿಕೆ ಅಗತ್ಯವಿದ್ದು, ಮೂರು ವರ್ಷಗಳ ಕಾಲ ಅಧಿಕಾರವಧಿ ವಿಸ್ತರಿಸಲಾಗಿದೆ ಎಂದು ಸರಕಾರ ಪ್ರಕಟಿಸಿದೆ.

2007ರಲ್ಲಿ ಮಾಜಿ ಅಧ್ಯಕ್ಷ ಫರ್ವೇಜ್ ಮುಶರಫ್ ಅವರ ನಿವೃತ್ತಿಯ ನಂತರ ಮಿಲಿಟರಿ ಮುಖ್ಯಸ್ಥನಾಗಿ 58ರ ಹರೆಯದ ಕಯಾನಿ ನೇಮಕಗೊಂಡಿದ್ದರು. ಅವರು ನವೆಂಬರ್ 28ರಂದು ನಿವೃತ್ತಿಯಾಗಬೇಕಿತ್ತು.

ಆದರೆ ಕಯಾನಿಯವರನ್ನು ಇನ್ನೂ ಮೂರು ವರ್ಷಗಳ ಕಾಲ ಮುಂದುವರಿಸಲಾಗುತ್ತದೆ ಎಂದು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಪ್ರಧಾನ ಮಂತ್ರಿ ಯೂಸುಫ್ ರಾಜಾ ಗಿಲಾನಿ ಪ್ರಕಟಿಸಿದ್ದಾರೆ.

ತೀವ್ರವಾದಿಗಳು ಮತ್ತು ಭಯೋತ್ಪಾದಕರ ವಿರುದ್ಧ ಮಿಲಿಟರಿ ಕಾರ್ಯಾಚರಣೆ ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಅಧ್ಯಕ್ಷ ಆಸಿಫ್ ಆಲಿ ಜರ್ದಾರಿಯವರೊಂದಿಗೆ ಚರ್ಚಿಸಿದ ನಂತರ ಕಯಾನಿಯವರ ಅಧಿಕಾರವಧಿಯನ್ನು ವಿಸ್ತರಿಸುವ ನಿರ್ಧಾರಕ್ಕೆ ಸರಕಾರ ಬಂದಿದೆ ಎಂದು ಗಿಲಾನಿ ತಿಳಿಸಿದ್ದಾರೆ.

ವಿದೇಶಾಂಗ ನೀತಿಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿರುವ ಕಯಾನಿ 2013ರವರೆಗೆ ಮಿಲಿಟರಿ ಮುಖ್ಯಸ್ಥರಾಗಿ ಮುಂದುವರಿಯಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ