ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ನೇಪಾಳ ಪ್ರಧಾನಿ ಗದ್ದುಗೆ 2ನೇ ಬಾರಿಯೂ 'ಪ್ರಚಂಡ ಸೋಲು' (Prachanda | PM post | Nepal | Maoist | election | Poudyal)
Bookmark and Share Feedback Print
 
ನೇಪಾಳ ನೂತನ ಪ್ರಧಾನಮಂತ್ರಿ ಆಯ್ಕೆಯ ಬಿಕ್ಕಟ್ಟು ಮತ್ತೆ ಮುಂದುವರಿದಿದ್ದು, ಮಾವೋವಾದಿ ವರಿಷ್ಠ ಪ್ರಚಂಡ ಎರಡನೇ ಬಾರಿಯೂ ಸಂಸದರ ಪೂರ್ಣ ಬೆಂಬಲ ಗಳಿಸುವಲ್ಲಿ ವಿಫಲರಾಗಿದ್ದು, ಇದೀಗ ಪ್ರತಿಸ್ಪರ್ಧಿ ನ್ಯಾಷನಲ್ ಕಾಂಗ್ರೆಸ್‌ನ ರಾಮ್ ಚಂದ್ರಾ ಪೌಡ್ಯಾಲ್ ಪ್ರಧಾನಿ ಹುದ್ದೆಯ ಸ್ಪರ್ಧೆಯ ಅಖಾಡದಲ್ಲಿ ಅದೃಷ್ಟಪರೀಕ್ಷೆಗೆ ನಿಂತಿದ್ದಾರೆ.

ಪ್ರಧಾನಿ ಆಯ್ಕೆಗಾಗಿ ಎರಡು ಬಾರಿ ನಡೆದ ಚುನಾವಣೆಯಲ್ಲಿಯೂ ಯಾರಿಗೂ ಸ್ಪಷ್ಟ ಬಹುಮತ ದೊರೆಯದ ಹಿನ್ನೆಲೆಯಲ್ಲಿ 601ಸದಸ್ಯ ಬಲ ಹೊಂದಿರುವ ಸಂಸತ್ ಪ್ರಧಾನಿ ಆಯ್ಕೆಗೆ ಮತ್ತೆ ಆಗೋಸ್ಟ್ 2ರಂದು ಚುನಾವಣೆ ನಡೆಸಲು ನಿರ್ಧರಿಸಿದೆ.

ಮಾವೋ ಪಕ್ಷದ ತೀವ್ರ ಒತ್ತಡದ ನಂತರ ಸಿಪಿಎನ್-ಯುಎಂಎಲ್‌ ಮೈತ್ರಿಕೂಟದ ಪ್ರಧಾನಿಯಾಗಿದ್ದ ಮಾಧವ್ ಕುಮಾರ್ ನೇಪಾಳ್ ರಾಜೀನಾಮೆ ನೀಡಿದ ನಂತರ ನೇಪಾಳ ರಾಜಕೀಯದಲ್ಲಿ ಬಿಕ್ಕಟ್ಟು ತಲೆದೋರಿತ್ತು.

ಪ್ರಧಾನಿಗಾದಿಗಾಗಿ ನಡೆದ ಚುನಾವಣೆಯಲ್ಲಿ 58ರ ಹರೆಯದ ಮಾಜಿ ಪ್ರಧಾನಿ ಪ್ರಚಂಡ 241 ಮತ ಪಡೆದಿದ್ದರೆ, 113 ಮತ ವಿರೋಧವಾಗಿ ಬಿದ್ದಿತ್ತು. ಆ ನಿಟ್ಟಿನಲ್ಲಿ ಪ್ರಧಾನಿ ಹುದ್ದೆಯ ಚುನಾವಣೆಯಲ್ಲಿ ಸೋಲನ್ನನುಭವಿಸಿದ್ದರು. ಆ ಸಂದರ್ಭದಲ್ಲಿ ಸಂಸದರು ಮತ್ತೆ ಚುನಾವಣೆಗೆ ಆಗ್ರಹಿಸಿದ ಹಿನ್ನೆಲೆಯಲ್ಲಿ ಎರಡನೇ ಬಾರಿ ನಡೆದ ಚುನಾವಣೆಯಲ್ಲಿ ಪ್ರಚಂಡ 242 ಮತ ಪಡೆದಿದ್ದರೆ, 114 ವಿರೋಧವಾಗಿ ಚಲಾವಣೆಯಾಗಿದ್ದವು. ಆ ನೆಲೆಯಲ್ಲಿ ಪ್ರಧಾನಿ ಹುದ್ದೆ ಗಿಟ್ಟಿಸಲು ಬೇಕಾದ ಮ್ಯಾಜಿಕ್ ನಂಬರ್ 301 ಮತ ಗಳಿಸಲು ವಿಫಲರಾಗಿದ್ದರು.

ಪ್ರಧಾನಿ ಹುದ್ದೆಗೆ ಪ್ರತಿಸ್ಪರ್ಧಿಯಾಗಿದ್ದ ನೇಪಾಳಿ ಕಾಂಗ್ರೆಸ್ಸಿನ ಉಪಾಧ್ಯಕ್ಷ ಪೌಡ್ಯಾಲ್(65) ಕೇವಲ 123 ಮತ ಗಳಿಸಿದ್ದರೆ, ವಿರೋಧವಾಗಿ 243 ಮತ ಚಲಾಯಿಸಿದ್ದರು. ಎರಡನೇ ಬಾರಿಯೂ ಪೌಡ್ಯಾಲ್ 124-235 ಮತಗಳಿಸಿ ಸೋಲನ್ನನುಭವಿಸಿದ್ದರು.

ಪ್ರಧಾನಿ ಆಯ್ಕೆಯ ಚುನಾವಣೆಯಲ್ಲಿ ಮೂರನೇ ದೊಡ್ಡ ಪಕ್ಷವಾಗಿದ್ದ ಸಿಪಿಎನ್-ಯುಎಂಎಲ್, ಮಾಧೇಶಿ ಮೈತ್ರಿಕೂಟ ಮತ್ತು ಸಿಪಿಎನ್-ಎಂಲ್ ಮತದಾನದಲ್ಲಿ ಗೈರುಹಾಜರಾಗಿದ್ದವು. ಜುಲೈ 7 ಮತ್ತು ಜು.12ರೊಳಗೆ ಪ್ರಧಾನಿಯನ್ನು ಆಯ್ಕೆ ಮಾಡಬೇಕೆಂದು ರಾಷ್ಟ್ರಪತಿ ರಾಮ್ ಭರಣ್ ಯಾದವ್ ಅವರು ನೀಡಿದ್ದ ಅಂತಿಮ ಗಡುವು ಮುಕ್ತಾಯಗೊಂಡಿದೆ. ಒಟ್ಟಾರೆ ರಾಜಕೀಯ ತಿಕ್ಕಾಟದಲ್ಲಿ ಪ್ರಧಾನಿ ಆಯ್ಕೆ ತ್ರಿಶಂಕು ಸ್ಥಿತಿ ತಲುಪಿದೆ.

ಸಿಪಿಎನ್ ಮಾವೋವಾದಿ 238 ಸಂಸದರನ್ನು ಹೊಂದಿದ್ದರೆ, ನೇಪಾಳಿ ಕಾಂಗ್ರೆಸ್ 114, ಸಿಪಿಎನ್-ಯುಎಂಎಲ್ 109 ಸಂಸದರನ್ನು ಹೊಂದಿದೆ. 601 ಸದಸ್ಯ ಬಲದ ಸಂಸತ್‌ನಲ್ಲಿ ಪ್ರಧಾನಿಯಾಗಿ ಆಯ್ಕೆಯಾಗಲು 301 ಸಂಸದರ ಬೆಂಬಲ ಅಗತ್ಯವಿದೆ. ಆ ನಿಟ್ಟಿನಲ್ಲಿ ನೇಪಾಳದ ಪ್ರಧಾನಿ ಹುದ್ದೆ ಯಾರಿಗೆ ಒಲಿಯಲಿದೆ ಎಂಬ ಕುತೂಹಲ ಮೂಡಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ