ಎರಡು ತಲೆ, ಮೂರು ಕೈ, ಒಂದು ಕಣ್ಣಿನ ಮಗು ಜನಿಸಿರುವುದನ್ನು ಕೇಳಿದ್ದೀರಿ. ಆದರೆ ಪಾಕಿಸ್ತಾನದ ಕರಾಚಿಯಲ್ಲಿ ಮಹಿಳೆಯೊಬ್ಬಳು ಆರು ಕಾಲಿನ ಗಂಡು ಮಗುವೊಂದಕ್ಕೆ ಜನ್ಮ ನೀಡಿರುವ ಅಪರೂಪದ ಘಟನೆ ನಡೆದಿದೆ.
ಇಲ್ಲಿನ ಸ್ಟಾರ್ ಗೇಟ್ ಸಮೀಪದ ಹೆರಿಗೆ ಆಸ್ಪತ್ರೆಯಲ್ಲಿ ಈ ಗಂಡು ಮಗು ಜನಿಸಿದೆ. ಆದರೆ ಮಗು ಜನಿಸಿದ ಸಂದರ್ಭದಲ್ಲಿ ದೊಡ್ಡ ಕರುಳು ಮಗುವಿನ ಹೊಟ್ಟೆಯ ಹೊರ ಭಾಗವನ್ನು ಸುತ್ತಿಕೊಂಡಿರುವುದರಿಂದ ಸರ್ಜರಿ ಮಾಡುವ ನಿಟ್ಟಿನಲ್ಲಿ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಚೈಲ್ಡ್ ಹೆಲ್ತ್ (ಎನ್ಐಸಿಎಚ್)ಗೆ ಸೇರಿಸಲಾಗಿದೆ ಎಂದು ಡೈಲಿ ಸ್ಟಾರ್ ವರದಿ ತಿಳಿಸಿದೆ.
ಅಲ್ಲದೇ ವಿಶೇಷ ಪರಿಣತ ವೈದ್ಯರೊಂದಿಗೆ ಚರ್ಚಿಸಿ ಮಗುವಿಗೆ ಸರ್ಜರಿ ಮಾಡಲಾಗುವುದು, ಇದೀಗ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಎನ್ಐಸಿಎಚ್ ಸಹಾಯಕ ನಿರ್ದೇಶಕ ಅರ್ಷಾದ್ ಅಲಿ ಡೋಮಿಕಿ ಹೇಳಿದ್ದಾರೆ. ಅಷ್ಟೇ ಅಲ್ಲ ಆರು ಕಾಲುಳ್ಳ ಮಗು ಜನಿಸಿರುವ ಪ್ರಕರಣ ದೇಶದಲ್ಲಿ ತುಂಬಾ ಅಪರೂಪವಾದದ್ದು ಎಂದು ಅಲಿ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.