ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕೊಹಿನೂರ್ ವಾಪಸಾತಿ ಚರ್ಚಿಸಿ: ಕ್ಯಾಮರೂನ್‌ಗೆ ಮನವಿ (Keith Vaz | India | Kohinoor diamond | David Cameron)
Bookmark and Share Feedback Print
 
ಮುಂದಿನ ವಾರ ಭಾರತ ಪ್ರವಾಸ ಮಾಡಲಿರುವ ಬ್ರಿಟನ್ ಪ್ರಧಾನ ಮಂತ್ರಿ ಡೇವಿಡ್ ಕ್ಯಾಮರೂನ್ ಅವರು ಕೊಹಿನೂರ್ ವಜ್ರವನ್ನು ವಾಪಸ್ ಮಾಡುವ ಬಗ್ಗೆ ಮಾತುಕತೆ ನಡೆಸುವಂತೆ ಭಾರತೀಯ ಮೂಲದ ಇಂಗ್ಲೆಂಡ್ ಸಂಸದ ಕೀತ್ ವಾಜ್ ಒತ್ತಾಯಿಸಿದ್ದಾರೆ.

ನನ್ನ ಪ್ರಕಾರ ಪ್ರಧಾನ ಮಂತ್ರಿಯವರಿಗೆ ಕೊಹಿನೂರ್ ವಜ್ರದ ಕುರಿತು ಚರ್ಚಿಸಲು ಇದು ಅತ್ಯುತ್ತಮ ಅವಕಾಶ. ಭಾರತಕ್ಕೆ ಸೇರಿದ ಕೊಹಿನೂರ್ ವಜ್ರವನ್ನು ಆ ದೇಶಕ್ಕೆ ಸೇರುವಂತಾಗಲು ವ್ಯವಸ್ಥೆ ಮಾಡಬೇಕೆನ್ನುವುದರಲ್ಲಿ ನಾನು ಹೆಚ್ಚು ಆಸಕ್ತನಾಗಿದ್ದೇನೆ. ಭಾರತದಿಂದ ಕೊಹಿನೂರ್ ವಜ್ರವನ್ನು ಬ್ರಿಟನ್‌ಗೆ ತಂದ 161 ವರ್ಷಗಳ ನಂತರ ಮತ್ತು ಭಾರತದ ಪ್ರಜಾಪ್ರಭುತ್ವವು ವಜ್ರ ಮಹೋತ್ಸವವನ್ನು ಆಚರಿಸಿದ ನಂತರ ಅದನ್ನು ಮರಳಿಸುವ ಕುರಿತು ಚಿಂತನೆ ನಡೆಯಬೇಕಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

1849ರಲ್ಲಿ ಪಂಜಾಬ್ ಪ್ರಾಂತ್ಯದ ಆಡಳಿತಗಾರ ದುಲ್ದೀಪ್ ಸಿಂಗ್‌ರನ್ನು ಬ್ರಿಟೀಷರು ಸೋಲಿಸಿದ ನಂತರ ಕೊಹಿನೂರ್ ವಜ್ರವನ್ನು ಇಂಗ್ಲೆಂಡ್‌‍ಗೆ ಕೊಂಡೊಯ್ದಿದ್ದರು. ಲಾಹೋರ್ ಒಪ್ಪಂದದ ಪ್ರಕಾರ ಈ ಅಮೂಲ್ಯ ವಜ್ರವನ್ನು ರಾಣಿ ವಿಕ್ಟೋರಿಯಾಗೆ ಒಪ್ಪಿಸಲಾಗಿತ್ತು.

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ನಂತರ ಕೊಹಿನೂರ್ ವಾಪಸ್ ಮಾಡಬೇಕೆಂದು ಹಲವಾರು ಬಾರಿ ಮನವಿಗಳನ್ನು ಮಾಡಲಾಗಿದ್ದರೂ, ಇದರ ಕುರಿತು ಇಂಗ್ಲೆಂಡ್ ಹೆಚ್ಚಿನ ಪರಿಗಣನೆ ನಡೆಸಿಲ್ಲ. ಇತ್ತೀಚೆಗಷ್ಟೇ ಭಾರತದ ಪುರಾತತ್ವ ಇಲಾಖೆಯು ಕೂಡ ಮನವಿ ಮಾಡಿಕೊಂಡಿತ್ತು. ಈ ಬಗ್ಗೆ ಮುಂದಿನ ದಿನಗಳಲ್ಲಿ ಯುನೆಸ್ಕೋ ಇತರ ರಾಷ್ಟ್ರಗಳ ಜತೆ ಸೇರಿ ಆಂದೋಲನವನ್ನು ನಡೆಸಲಿದೆ.
ಸಂಬಂಧಿತ ಮಾಹಿತಿ ಹುಡುಕಿ