ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ತಾಯಿ, ತಂಗಿಯನ್ನೇ ಕೊಂದ ಹಾಂಕಾಂಗ್ ಹುಡುಗ! (Hong Kong | teen hacks mother | sister to death | Police)
Bookmark and Share Feedback Print
 
ಶಾಂತ ಸ್ವಭಾವದ, ಸುಸಂಸ್ಕೃತ ಮತ್ತು ಅತ್ಯುತ್ತಮ ವಿದ್ಯಾರ್ಥಿ ಎಂದು ಹೆಸರು ಪಡೆದುಕೊಂಡಿದ್ದ ಮತ್ತು ಯಾವುದೇ ರೀತಿಯಲ್ಲೂ ಮಾನಸಿಕ ಅಸ್ವಸ್ಥನಲ್ಲದ 15 ವರ್ಷದ ಹುಡುಗನೊಬ್ಬ ತನ್ನ ತಾಯಿ ಮತ್ತು ಸಹೋದರಿಯನ್ನು ಚೂರಿಯಿಂದ ಚುಚ್ಚಿ ಕೊಲೆ ಮಾಡಿದ್ದಾನೆ.

ಕೊಲೆಗೆ ಆತ ನೀಡಿರುವ ಕಾರಣವಂತೂ ವಿಚಿತ್ರವಾಗಿದೆ -- ಕಡಿಮೆ ಜನರಿದ್ದರೆ ವಿಶ್ವವು ಉತ್ತಮವಾಗಿರುತ್ತದೆ ಎನ್ನುವುದೇ ಹತ್ಯೆಯ ಹಿಂದಿನ ಕಾರಣವಂತೆ.

42ರ ಹರೆಯದ ತಾಯಿ ಮತ್ತು 12ರ ಹರೆಯದ ಸಹೋದರಿಯನ್ನು ಹರಿತವಾದ ಚೂರಿಯಿಂದ ಇರಿದು ಈತ ಹತ್ಯೆ ಮಾಡಿದ್ದಾನೆ. ಕುತ್ತಿಗೆ ಮತ್ತು ಹೊಟ್ಟೆಗೆ ಹಲವು ಗಾಯಗಳಾದ ಸ್ಥಿತಿಯಲ್ಲಿ ಅಪಾರ್ಟ್‌ಮೆಂಟ್‌ನಲ್ಲಿ ಅವರ ಶವಗಳು ಪತ್ತೆಯಾಗಿವೆ ಎಂದು ಹಾಂಕಾಂಗ್ ಪತ್ರಿಕೆಯೊಂದು ವರದಿ ಮಾಡಿದೆ.

ಮನೆಯವರನ್ನು ಕೊಂದಿರುವುದು ತಾನೇ ಎಂದು ಸ್ವತಃ ಹುಡುಗನೇ ಪೊಲೀಸರಿಗೆ ಫೋನ್ ಮಾಡಿದ ನಂತರ ಆತನನ್ನು ಬಂಧಿಸಲಾಗಿದೆ.

ಕೊಲೆಗೆ ಆತ ಯಾವುದೇ ಕಾರಣವನ್ನು ನೀಡಿಲ್ಲ. ಆತ ಮಾನಸಿಕ ಅಸ್ವಸ್ಥನೂ ಅಲ್ಲ. ಆತನೇ ಹೇಳುವ ಪ್ರಕಾರ ವಿಶ್ವದಲ್ಲಿ ಜನಸಂಖ್ಯೆ ಕಡಿಮೆಯಿದ್ದರೆ ಉತ್ತಮ ಎನ್ನುವುದಷ್ಟೇ ನಮಗೆ ಸಿಕ್ಕಿರುವ ಕಾರಣ. ಉಳಿದಂತೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕ ಶಾಲೆಯಲ್ಲೂ ಅತ್ಯುತ್ತಮ ವಿದ್ಯಾರ್ಥಿಯಾಗಿದ್ದ ಮತ್ತು ಪಕ್ಕದ ಮನೆಯವರ ಪ್ರಕಾರ ಆತ ಸುಸಂಸ್ಕೃತನೂ ಹೌದು. ಈ ಹಿಂದೆ ತನ್ನ ಹೆತ್ತವರಿಗೆ ಸೇರಿದ ರೆಸ್ಟಾರೆಂಟ್ ಒಂದರಲ್ಲಿ ಸಾಕಷ್ಟು ಸಹಾಯವನ್ನೂ ಮಾಡುತ್ತಿದ್ದ. ಯಾವುದೇ ರೀತಿಯಲ್ಲೂ ಅಪರಾಧಿ ಚಟುವಟಿಕೆ ಅಥವಾ ಡ್ರಗ್ಸ್ ತೆಗೆದಕೊಂಡ ಪ್ರಕರಣದಲ್ಲಿ ಈತನ ಹೆಸರು ಕೇಳಿ ಬಂದಿಲ್ಲ. ಯಾವತ್ತೂ ಶಾಲೆಗೂ ಚಕ್ಕರ್ ಹಾಕದವನಲ್ಲ ಎಂದು ವರದಿಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಹಾಂಕಾಂಗ್, ತಾಯಿ, ಸಹೋದರಿ, ಪೊಲೀಸ್