ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸಿಯಾಚಿನ್‌ ರಕ್ಷಣೆಗೆ ಭಾರತ-ಪಾಕ್ ದುಂದುವೆಚ್ಚ: ಜರ್ದಾರಿ (Indo-Pak troops | Siachen | Pakistan | Asif Ali Zardari)
Bookmark and Share Feedback Print
 
ಸಿಯಾಚಿನ್ ನೀರ್ಗಲ್ಲ ಪ್ರದೇಶದಿಂದ ಭಾರತ ಮತ್ತು ಪಾಕಿಸ್ತಾನಗಳು ಭದ್ರತಾ ಪಡೆಗಳನ್ನು ಹಿಂದಕ್ಕೆ ಪಡೆದುಕೊಳ್ಳಬೇಕು ಎಂದಿರುವ ಪಾಕ್ ಅಧ್ಯಕ್ಷ ಆಸಿಫ್ ಆಲಿ ಜರ್ದಾರಿ, ಉಭಯ ರಾಷ್ಟ್ರಗಳು ಗಡಿ ವಿವಾದವನ್ನು ಸೌಹಾರ್ದಯುತವಾಗಿ ಪರಿಹರಿಸಬೇಕು ಎಂದು ಕರೆ ನೀಡಿದ್ದಾರೆ.

ಭಾರತವು ಸಿಯಾಚಿನ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿ ಯೋಧನ ಮೇಲೆ ದಿನಕ್ಕೆ 50 ಅಮೆರಿಕನ್ ಡಾಲರುಗಳನ್ನು (2,350 ರೂಪಾಯಿ) ವ್ಯಯಿಸುತ್ತಿದ್ದರೆ, ಪಾಕಿಸ್ತಾನ ತನ್ನ ಯೋಧನೊಬ್ಬನಿಗೆ 50 ರೂಪಾಯಿಗಳನ್ನು ವ್ಯಯಿಸುತ್ತಿದೆ. ಇದರ ಬದಲು ಉಭಯ ರಾಷ್ಟ್ರಗಳು ಆ ಹಣವನ್ನು ಇತರ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಬಹುದು ಎಂದು ಜರ್ದಾರಿ ಸಲಹೆ ನೀಡಿದ್ದಾರೆ.

ಪಾಕಿಸ್ತಾನಕ್ಕಿಂತ ಭಾರೀ ಪ್ರಮಾಣದಲ್ಲಿ ಸಿಯಾಚಿನ್‌ನಲ್ಲಿ ಭಾರತವು ಹಣವನ್ನು ವ್ಯಯಿಸುತ್ತಿರುವ ಹೊರತಾಗಿಯೂ ನಾವು ಈ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಬೇಕು, ಮಾತುಕತೆಯ ಮೂಲಕ ಪರಿಹರಿಸಬೇಕು ಎಂದು ಬಯಸುತ್ತಿದ್ದೇವೆ. ಅದಕ್ಕಾಗಿ ಬಳಸುತ್ತಿರುವ ಹಣವನ್ನು ಎರಡೂ ದೇಶಗಳು ಜನೋಪಯೋಗಿ ಕಾರ್ಯಗಳಿಗೆ ಬಳಸಬಹುದು ಎಂದು ಜರ್ದಾರಿ ಹೇಳಿದ್ದಾರೆಂದು ಪತ್ರಿಕೆಯೊಂದು ವರದಿ ಮಾಡಿದೆ.

ಸಿಯಾಚಿನ್ ಗ್ಲೇಸಿಯರ್ ಪ್ರದೇಶವು ಭೂಮಿಯಲ್ಲೇ ಅತೀ ಎತ್ತರದಲ್ಲಿನ ಯುದ್ಧ ಭೂಮಿ ಎಂದು ಪರಿಗಣನೆಯಾಗುತ್ತಿದ್ದು, ಉಭಯ ದೇಶಗಳು 1984ರ ಏಪ್ರಿಲ್ ತಿಂಗಳಿಂದ ಇಲ್ಲಿ ಗಡಿ ಕುರಿತು ಹೋರಾಡುತ್ತಿವೆ.

ಭಾರತ ಮತ್ತು ಪಾಕಿಸ್ತಾನಗಳು ಸಿಯಾಚಿನ್ ಗಡಿ ಪ್ರದೇಶದಿಂದ ಮಿಲಿಟರಿ ಪಡೆಗಳನ್ನು ವಾಪಸ್ ಪಡೆಯಲು ನಿರ್ಧರಿಸಿದ್ದವಾದರೂ, 1999ರ ಕಾರ್ಗಿಲ್ ಯುದ್ಧದ ನಂತರ ಭಾರತವು ತನ್ನ ಯೋಜನೆಯನ್ನು ರದ್ದುಪಡಿಸಿತ್ತು. ಪಾಕಿಸ್ತಾನವು ನಿಯಂತ್ರಣಾ ರೇಖೆಯನ್ನು ಅಧಿಕೃತವಾಗಿ ಗುರುತಿಸದ ಹೊರತು ಅದು ಸಾಧ್ಯವಿಲ್ಲ ಎಂದು ಭಾರತ ಹೇಳುತ್ತಾ ಬಂದಿದೆ.

2005ರಲ್ಲಿ ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಈ ಪ್ರದೇಶಕ್ಕೆ ಭೇಟಿ ನೀಡಿ, ಈ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸುವಂತೆ ಕರೆ ನೀಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ