ವಿಕಿರಣ ಶೀಲ ಕ್ರಿಪ್ಟಾನ್ ಅನಿಲ ಕೊಂಡೊಯ್ಯುತ್ತಿದ್ದ ಜಪಾನಿನ ಸೇನಾ ವಿಮಾನವೊಂದು ಪೆಸಿಫಿಕ್ ಮಹಾಸಾಗರದಲ್ಲಿ ಪತನಗೊಂಡಿದೆ.
ಈಗಾಗಲೇ ವ್ಯಾಪಕ ಪ್ರಮಾಣದಲ್ಲಿ ಸಮುದ್ರಕ್ಕೆ ತೈಲ ಸೋರಿಕೆ ಆಗುತ್ತಿರುವ ಪರಿಣಾಮ ಜಲಮಾಲಿನ್ಯವಾಗುತ್ತಿರುವ ಸಂದರ್ಭ ಈ ವಿಮಾನ ಸಾಗರದಲ್ಲಿ ಪತನಗೊಂಡು ಭಾರೀ ಪ್ರಮಾಣದಲ್ಲಿ ವಿಕಿರಣ ಮಾಲಿನ್ಯದ ಆತಂಕ ಸೃಷ್ಟಿಸಿದೆ.
ಈ ವಿಮಾನದಲ್ಲಿ 107.7 ಕಿಲೋ ಬೆಕ್ವೆರಲ್ಸ್ ತೀವ್ರತೆಯ ವಿಕರಣ ಸೂಸುವಷ್ಟು ಕ್ರಿಪ್ಟಾನ್ ಅನಿಲವಿತ್ತು. ಆದರೆ, ಅನಿಲ ತುಂಬಿದ ಗಾಜಿನ ನಳಿಗೆಗಳು ಸಮುದ್ರದ ತಳದಲ್ಲಿ ಒಡೆದು ಚೂರಾದರೂ ಮನುಷ್ಯನಿಗೆ ಏನೂ ಅಪಾಯವಾಗುವುದಿಲ್ಲ. ಇದರಲ್ಲಿ ವಿಕಿರಣ ತೀವ್ರತೆ ಅಪಾಯ ಮಟ್ಟಕ್ಕಿಂತ ಕಡಿಮೆ ಇತ್ತು ಎಂದು ಪರಮಾಣು ಸುರಕ್ಷತಾ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.