ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸೆಕ್ಸ್ ಸ್ಕ್ಯಾಂಡಲ್: ವಿಯೆಟ್ನಾಂ ರಾಜ್ಯಾಪಾಲರ ತಲೆದಂಡ (Vietnam | Communist Party | sex scandal | governor)
Bookmark and Share Feedback Print
 
ಹನೋಯ್: ಲೈಂಗಿಕ ಹಗರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಪ್ರಾಂತೀಯ ರಾಜ್ಯಪಾಲರೊಬ್ಬರನ್ನು ವಿಯೆಟ್ನಾಂನ ಆಡಳಿತಾರೂಢ ಕಮ್ಯೂನಿಷ್ಟ್ ಪಕ್ಷ ವಜಾಗೊಳಿಸಿದೆ ಎಂದು ವರದಿಯೊಂದು ಹೇಳಿದೆ.

ಉನ್ನತ ಹುದ್ದೆಯಲ್ಲಿದ್ದು ಸೂಳೆಗಾರಿಕೆಯಲ್ಲಿ ತೊಡಗಿದ್ದ ಆರೋಪದ ಮೇಲೆ ರಾಜ್ಯಪಾಲ ನಗ್ಯುಯೆನ್ ಟ್ರುಂಗ್ ಟೋ ಅವರನ್ನು ವಜಾಗೊಳಿಸಿರುವುದಾಗಿ ಕಮ್ಯೂನಿಷ್ಟ್ ಪಕ್ಷದ ದೈನಿಕ ನಾಹನ್ ಡಾನ್ ವರದಿ ತಿಳಿಸಿದೆ.

ಟೋ ಹಾ ಗಿಯಾಂಗ್ ಪ್ರಾಂತ್ಯದ ರಾಜ್ಯಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಟೋ ಅವರು ಪಕ್ಷದ ನೀತಿ ಸಂಹಿತೆಯನ್ನು ಗಾಳಿಗೆ ತೂರಿ ವೇಶ್ಯೆಯರ ಜೊತೆ ಸಂಬಂಧ ಹೊಂದಿರುವ ಗಂಭೀರ ಆರೋಪ ಎದುರಿಸುತ್ತಿದ್ದರು.

ಈ ಆರೋಪದ ಹಿನ್ನೆಲೆಯಲ್ಲಿ ರಾಜ್ಯಪಾಲರನ್ನು ಪಕ್ಷದಿಂದ ವಜಾಗೊಳಿಸಿದ್ದು, ರಾಜ್ಯಪಾಲ ಹುದ್ದೆಯಿಂದ ಅಮಾನತು ಮಾಡಲಾಗಿದೆ ಎಂದು ವರದಿ ವಿವರಿಸಿದೆ. ರಾಜ್ಯಪಾಲರು ವೇಶ್ಯೆಯರ ಜತೆ ಸಂಬಂಧ ಹೊಂದಿರುವ ಬಗಗೆ ಸೂಕ್ತ ಸಾಕ್ಷ್ಯಾಧಾರಗಳು ದೊರತಿದೆ. ಇದರಲ್ಲಿ ಫೋಟೋಗ್ರಾಫ್ಸ್ ಮತ್ತು ಸಂದೇಶಗಳು ಸೇರಿವೆ.
ಸಂಬಂಧಿತ ಮಾಹಿತಿ ಹುಡುಕಿ