ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಫ್ಘಾನ್‌ನಲ್ಲಿ ಉಗ್ರರಿಗೆ ಪಾಕ್ ಕೃಪಾಕಟಾಕ್ಷ: ಅಮೆರಿಕ (Afghanistan | Kabul | Pakistan | Taliban | ISI | WikiLeaks,)
Bookmark and Share Feedback Print
 
ಅಫ್ಘಾನಿಸ್ತಾನದಲ್ಲಿ ಉಗ್ರರ ವಿರುದ್ಧ ಹೋರಾಟ ನಡೆಸುತ್ತಿರುವ ನ್ಯಾಟೋ ಸಿಬ್ಬಂದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಮೆರಿಕದ ಮಿಲಿಟರಿ ಅಧಿಕಾರಿಯೊಬ್ಬರು ತಿಳಿಸಿದ್ದು, ಪಾಕಿಸ್ತಾನ ಉಗ್ರರ ಜೊತೆ ಕೈಜೋಡಿಸಿದೆ. ಅಷ್ಟೇ ಅಲ್ಲ ಅಮೆರಿಕ ಆರ್ಥಿಕ ನೆರವನ್ನು ದುರ್ಬಳಕೆ ಮಾಡಿಕೊಂಡಿದೆ ಎಂಬುದಾಗಿಯೂ ಅವರು ಈ ಸಂದರ್ಭದಲ್ಲಿ ಒಪ್ಪಿಕೊಂಡಿದ್ದಾರೆ.

ಪಾಕಿಸ್ತಾನದ ಐಎಸ್ಐ ಏಜೆಂಟರು ತಾಲಿಬಾನ್ ಮುಖಂಡರನ್ನು ನೇರವಾಗಿ ಭೇಟಿಯಾಗಿ ರಹಸ್ಯ ಮಾತುಕತೆ ನಡೆಸುತ್ತಿದ್ದಾರೆ. ಅಲ್ಲದೇ, ಅಮೆರಿಕದ ಸೈನಿಕರ ವಿರುದ್ಧ ಹೋರಾಡಲು ಉಗ್ರರನ್ನು ಸಂಘಟಿಸುತ್ತಿದ್ದಾರೆಂದು ಅಧಿಕಾರಿ ಆರೋಪಿಸಿರುವುದಾಗಿ ದಿ ನ್ಯೂಯಾರ್ಕ್ ಟೈಮ್ಸ್ ವರದಿ ತಿಳಿಸಿದೆ.

ಪಾಕಿಸ್ತಾನದ ಐಎಸ್ಐ ಅಫ್ಘಾನಿಸ್ತಾನ ಮುಖಂಡರನ್ನು ಹತ್ಯೆಗೈಯುವ ಸಂಚಿನಲ್ಲಿಯೂ ಭಾಗಿಯಾಗಿದೆ ಎಂದು ತಿಳಿಸಿರುವ ಟೈಮ್ಸ್ ವರದಿ, ಈ ಬಗ್ಗೆ ವಿಕ್ಲ್‌ಲೀಕ್ಸ್ ವರದಿ ಸುಮಾರು 91ಸಾವಿರ ದಾಖಲೆಯನ್ನು ಸಂಗ್ರಹಿಸಿದೆ ಎಂದು ಹೇಳಿದೆ.

ಆದರೆ ಈ ವರದಿ ಬಹಿರಂಗವಾಗಿರುವುದಕ್ಕೆ ಅಮೆರಿಕ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದೆ. ಇದರಿಂದಾಗಿ ದೇಶದ ಭದ್ರತೆಗೆ ಧಕ್ಕೆಯಾಗಲಿದೆ. ಅಮೆರಿಕನ್ನರಿಗೂ ಇದರಿಂದ ಅಪಾಯ ಎಂದು ಅಸಮಾಧಾನವ್ಯಕ್ತಪಡಿಸಿದೆ. ಅಮೆರಿಕದಿಂದ ಈ ವರದಿ ಬಹಿರಂಗಗೊಂಡಿರುವುದಕ್ಕೆ ಪಾಕಿಸ್ತಾನ ಕೂಡ ಬೇಜವಾಬ್ದಾರಿಯ ಪರಮಾವಧಿ ಎಂದು ಕಿಡಿಕಾರಿದೆ.
ಸಂಬಂಧಿತ ಮಾಹಿತಿ ಹುಡುಕಿ