ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಲಾಡೆನ್ ಪಾಕ್ ಬುಡಕಟ್ಟು ಪ್ರದೇಶದಲ್ಲಿ ಅಡಗಿದ್ದಾನೆ: ಅಮೆರಿಕಾ (Pakistan | al-Qaida | Mike Mullen | Osama bin Laden)
Bookmark and Share Feedback Print
 
ಅಫಘಾನಿಸ್ತಾನ ಗಡಿ ಪ್ರದೇಶ ಸಮೀಪದ ಪಾಕಿಸ್ತಾನ ಬುಡಕಟ್ಟು ಪ್ರದೇಶವು ಅಲ್‌ಖೈದಾದ ಜಾಗತಿಕ ಪ್ರಧಾನ ಕಚೇರಿ ಎಂದು ಬಣ್ಣಿಸಿರುವ ಅಮೆರಿಕಾ ಮಿಲಿಟರಿ ಕಮಾಂಡರ್ ಮೈಕ್ ಮುಲ್ಲನ್, ಅದರ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಇದೇ ಪ್ರದೇಶದಲ್ಲಿ ಅಡಗಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕಾಕ್ಕೆ ಸಿಕ್ಕಿರುವ ಮಾಹಿತಿಗಳ ಪ್ರಕಾರ ಭಯೋತ್ಪಾದಕ ಮುಖಂಡ ಒಸಾಮಾ ಬಿನ್ ಲಾಡೆನ್ ಮತ್ತು ಆತನ ನಂತರದ ಸ್ಥಾನದಲ್ಲಿರುವ ಐಮಾನ್ ಅಲ್ ಜವಾಹರಿ ಪಾಕಿಸ್ತಾನದ ಬುಡಕಟ್ಟು ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ.

ಇಂತಹ ಭಯೋತ್ಪಾದಕರು ಅಫ್ಗಾನ್-ಪಾಕಿಸ್ತಾನ ಪ್ರಾಂತ್ಯದಲ್ಲಿ ಅಡಗಿಕೊಂಡಿರುವ ಕಾರಣದಿಂದಲೇ ಅವರ ಪ್ರಮುಖ ಅಡಗುದಾಣಗಳನ್ನು ಧ್ವಂಸಗೊಳಿಸುವ ಕಾರ್ಯಾಚರಣೆಗೆ ರಕ್ಷಣಾ ಪಡೆಗಳು ಮುಂದಾಗುತ್ತಿವೆ ಎಂದು ಕಮಾಂಡರ್ ಮುಲ್ಲನ್ ವಿವರಣೆ ನೀಡಿದ್ದಾರೆ.

ಪಾಕಿಸ್ತಾನದ 19ನೇ ಭೇಟಿಯಲ್ಲಿರುವ ಮುಲ್ಲನ್ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಅಲ್‌ಖೈದಾ ನಾಯಕರು ತುಂಬಾ ಸುರಕ್ಷಿತ ತಾಣಗಳಲ್ಲಿ ಅಡಗಿಕೊಂಡಿರುವುದರಿಂದ ಅವರನ್ನು ಪತ್ತೆ ಹಚ್ಚಲು ಕಷ್ಟವಾಗುತ್ತಿದೆ ಎಂದರು.

ಅದೇ ಹೊತ್ತಿಗೆ ಭಯೋತ್ಪಾದಕರ ವಿರುದ್ಧ ಹೋರಾಡುತ್ತಿರುವ ಪಾಕಿಸ್ತಾನವನ್ನು ಅವರು ಶ್ಲಾಘಿಸಿದ್ದಾರೆ. ಆದರೆ ಇನ್ನೂ ಕಠಿಣ ಕ್ರಮಗಳಿಗೆ ಮುಂದಾಗಬೇಕಾದ ಅಗತ್ಯವಿದೆ. ಪಾಕಿಸ್ತಾನದಲ್ಲಿರುವ ತಾಲಿಬಾನ್‌ನ ಹಖಾನಿ ಜಾಲದಿಂದಾಗಿ ಅಫಘಾನಿಸ್ತಾನದ ಶಾಂತಿಯ ಮೇಲೆ ದುಷ್ಪರಿಣಾಮ ಉಂಟಾಗುತ್ತಿದ್ದು, ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಮುಲ್ಲರ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ