ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾವೀ ಪತ್ನಿಗೆ ಅಸ್ಥಿ ಉಂಗುರ ಉಡುಗೊರೆ (Man gifts shin bone ring | British | Mike Perrett | Melita)
Bookmark and Share Feedback Print
 
ಇದು ಕೇಳುವುದಕ್ಕೆ ವಿಚಿತ್ರವಾಗಿದೆ, ಆದರೂ ನಡೆದಿರುವುದಂತೂ ನಿಜ. ಅಪಘಾತವೊಂದರಲ್ಲಿ ಕಾಲನ್ನು ಕಳೆದುಕೊಂಡಿರುವ ಆತ ತನ್ನ ಪ್ರಿಯತಮೆಗೆ ಅದರ ನೆನಪಿನಲ್ಲಿ ಕಾಲಿನ ಮೂಳೆಯಿಂದ ತಯಾರಿಸಿರುವ ಉಂಗುರವನ್ನೇ ಉಡುಗೊರೆಯಾಗಿ ನೀಡಲು ನಿರ್ಧರಿಸಿದ್ದಾನೆ.

ಬ್ರಿಟನ್‌ನ ಮೈಕ್ ಪೆರೆಟ್ ಎಂಬಾತನೇ ಆ ಪುಣ್ಯಾತ್ಮ. ಈತ ಭಾರತದಲ್ಲಿರುವಾಗ ಅಪಘಾತವೊಂದರಲ್ಲಿ ತನ್ನ ಬಲಗಾಲನ್ನು ಕಳೆದುಕೊಂಡಿದ್ದ. ಇತ್ತೀಚೆಗಷ್ಟೇ ತನ್ನ ಪ್ರಿಯತಮೆ ಮೆಲಿಟಾ ಜತೆಗೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿರುವ ಈತ, ತನ್ನದೇ ಕಾಲಿನ ಅಸ್ಥಿಯನ್ನೊಳಗೊಂಡ ಉಂಗುರವನ್ನು ಆಕೆಯ ಬೆರಳಿಗೆ ತೊಡಿಸಿದ್ದಾನೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಕಾಲನ್ನು ಕಳೆದುಕೊಂಡಿರುವ ನನಗೆ ಭಾವೀ ಪತ್ನಿಗೆ ಏನಾದರೂ ವಿಶೇಷವಾದುದನ್ನು ನೀಡಬೇಕೆಂದು ಅನ್ನಿಸಿತ್ತು. ಹಾಗಾಗಿ ನಿಶ್ಚಿತಾರ್ಥಕ್ಕೆ ನನ್ನ ಕಾಲಿನ ಮೂಳೆಯನ್ನು ಬಳಸಿದ ಉಂಗುರವನ್ನು ನೀಡಲು ಬಯಸಿದ್ದೆ. ಇದನ್ನು ಆಕೆಯಲ್ಲಿ ಪ್ರಸ್ತಾಪಿಸಿದಾಗ ಒಪ್ಪಿಕೊಂಡಳು. ಇದಕ್ಕೆ ಪ್ರತಿಯಾಗಿ ಮದುವೆಯ ದಿನ ನಾನು ಕೈಯನ್ನು ನೀಡುತ್ತೇನೆ ಎಂದು ಹೇಳಿದ್ದಾಳೆ ಎಂದು 25ರ ಹರೆಯದ ಮೈಕ್ ವಿವರಣೆ ನೀಡಿದ್ದಾನೆ.
ಸಂಬಂಧಿತ ಮಾಹಿತಿ ಹುಡುಕಿ