ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಫ್ಘಾನ್ ನಾಗರಿಕರ ಹತ್ಯೆ ತನಿಖೆಗೆ ಹಮೀದ್ ಆದೇಶ (Hamid Karzai | Afghan | civilian deaths | NATO | Kabul)
Bookmark and Share Feedback Print
 
ದಕ್ಷಿಣ ಅಫ್ಘಾನಿಸ್ತಾನದಲ್ಲಿ ರಾಕೆಟ್ ದಾಳಿಯಿಂದ ಸಂಭವಿಸಿರುವ ನೂರಾರು ನಾಗರಿಕರ ಹತ್ಯೆಯ ತನಿಖೆಯ ನಡೆಸಲು ಅಫ್ಘಾನ್ ಅಧ್ಯಕ್ಷ ಹಮೀದ್ ಕರ್ಜಾಯ್ ಅವರು ಆದೇಶಿಸಿರುವುದಾಗಿ ಅಧ್ಯಕ್ಷರ ವಕ್ತಾರ ಸೋಮವಾರ ತಿಳಿಸಿದ್ದಾರೆ.

ಹೆಲ್ಮಾಂಡ್ ಪ್ರಾಂತ್ಯದ ಸಾಂಗಿನ್ ಗ್ರಾಮದಲ್ಲಿ ಶುಕ್ರವಾರ ನಡೆದ ರಾಕೆಟ್ ದಾಳಿಯಲ್ಲಿ ಹೆಚ್ಚಿನ ನಾಗರಿಕರು ಸಾವನ್ನಪ್ಪಿದ್ದರು ಎಂದು ಸಿದ್ದಿಕಿ ಸಿದ್ದಿಕಿ ಹೇಳಿದ್ದಾರೆ. ಆದರೆ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಬಹುತೇಕ ನಾಗರಿಕರು ರಾಕೆಟ್ ದಾಳಿಯಲ್ಲಿ ಸಾವನ್ನಪ್ಪಿರುವುದಾಗಿ ವಿವರಿಸಿದರು.

ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದಿಲ್ಲ ಎಂದ ಅವರು, ಘಟನೆ ಕುರಿತಂತೆ ತನಿಖೆಗೆ ಆದೇಶಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ಅಫ್ಘಾನಿಸ್ತಾನದಲ್ಲಿ ಕಾರ್ಯಾಚರಿಸುತ್ತಿರುವ ನ್ಯಾಟೋ ಇಂಟರ್‌ನ್ಯಾಶನಲ್ ಸೆಕ್ಯುರಿಟಿ ಅಸಿಸ್ಟೆನ್ಸ್ ಫೋರ್ಸ್ (ಐಎಸ್ಎಎಫ್) ರಾಕೆಟ್ ದಾಳಿಯಲ್ಲಿ ಸಾಂಗಿ ಗ್ರಾಮದ ಸುಮಾರು 40ಮಂದಿ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ತನಿಖೆಗೆ ಆದೇಶಿಸಲಾಗಿದೆ ಎಂದರು.

ರಾಕೆಟ್ ದಾಳಿಯಲ್ಲಿ ಸಾವನ್ನಪ್ಪಿದವರ ಬಗ್ಗೆ ನಿಖರ ಸಂಖ್ಯೆ ಅಥವಾ ದಾಳಿಯಲ್ಲಿ ಐಎನ್ಎಎಫ್ ಪಡೆ ಶಾಮೀಲಾಗಿದೆಯೇ ಎಂಬ ಬಗ್ಗೆಯೂ ಸಿದ್ದಿಕಿ ಹೆಚ್ಚಿನ ವಿವರ ನೀಡಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ