ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮುಂಬೈ ದಾಳಿ ರೂವಾರಿಗಳನ್ನು ಶಿಕ್ಷಿಸಿ: ಪಾಕ್‌ಗೆ ಅಮೆರಿಕಾ (US military | Pakistan | India | Mumbai attack)
Bookmark and Share Feedback Print
 
ಪಾಕಿಸ್ತಾನವು ಭಯೋತ್ಪಾದನೆಯನ್ನು ಬೆಂಬಲಿಸುತ್ತಿದೆ ಎಂಬ ಪೂರಕ ದಾಖಲೆಗಳನ್ನು ಅಮೆರಿಕಾ ಮಿಲಿಟರಿಯು ಒಪ್ಪಿಸಿದ ನಂತರ ಕಠಿಣವಾಗಿರುವ ಒಬಾಮಾ ಆಡಳಿತ, ಭಾರತವು ಬಯಸುತ್ತಿರುವಂತೆ ಮುಂಬೈ ದಾಳಿಗೆ ಕಾರಣರಾಗಿರುವವರನ್ನು ನ್ಯಾಯಾಂಗದ ಕಟಕಟೆಗೆ ತನ್ನಿ ಎಂದು ಇಸ್ಲಾಮಾಬಾದ್‌ಗೆ ಸೂಚನೆ ನೀಡಿದ್ದಾರೆ.

ಅದೇ ಹೊತ್ತಿಗೆ ಪಾಕಿಸ್ತಾನವು ಭಯೋತ್ಪಾದನೆಯ ವಿರುದ್ಧ ಯಥಾಸ್ಥಿತಿ ಕಾಯ್ದುಕೊಳ್ಳುವುದಷ್ಟೇ ಸಾಲದು, ಇನ್ನಷ್ಟು ತೀವ್ರವಾದ ಹೋರಾಟವನ್ನು ನಡೆಸಬೇಕು ಎಂದು ಶ್ವೇತಭವನ ತಿಳಿಸಿದೆ.

ಈ ಹಿಂದಿನಂತೆ ನಡೆದುಕೊಂಡು ಬಂದಿರುವಂತೆ ಪಾಕಿಸ್ತಾನದ ಆಡಳಿತ ವ್ಯವಸ್ಥೆಯೊಳಗೆ ಭಯೋತ್ಪಾದನಾ ಗುಂಪುಗಳಿಗೆ ಬೆಂಬಲ ದೊರಕುತ್ತಿಲ್ಲ ಎಂಬುದನ್ನು ಇಸ್ಲಾಮಾಬಾದ್ ಖಚಿತಪಡಿಸಬೇಕು ಎಂದು ಇತ್ತೀಚೆಗಷ್ಟೇ ಭಯೋತ್ಪಾದನಾ ಪೀಡಿತ ರಾಷ್ಟ್ರಕ್ಕೆ ಭೇಟಿ ನೀಡಿದ್ದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅಲ್ಲಿನ ನಾಯಕರಿಗೆ ಮನದಟ್ಟು ಮಾಡಿದ್ದಾರೆ ಎಂದು ಇತ್ತ ಅಮೆರಿಕಾದ ಸ್ಟೇಟ್ ಇಲಾಖೆ ತಿಳಿಸಿದೆ.

ಇತ್ತ ಭಾರತದ ದೃಷ್ಟಿಕೋನದಿಂದ ನೋಡಿದಾಗ, ಭಾರತವು ನೀವೆಲ್ಲ ತಿಳಿದಿರುವಂತೆ ಪಕ್ಕದ ರಾಷ್ಟ್ರಗಳಿಗೆ ಬೆದರಿಕೆಯಾಗಿರುವ ಪಾಕಿಸ್ತಾನದೊಳಗಿನ ವ್ಯಕ್ತಿಗಳನ್ನು ಕಾನೂನಿನ ಕಟಕಟೆಗೆ ತರಬೇಕೆಂದು ಬಯಸುತ್ತಿದೆ ಎಂದು ದೈನಂದಿನ ಸುದ್ದಿ ವಿವರಣೆ ಸಂದರ್ಭದಲ್ಲಿ ನಿನ್ನೆ ಸ್ಟೇಟ್ ಇಲಾಖೆಯ ವಕ್ತಾರ ಪಿ.ಜೆ. ಕ್ರೋಲಿ ತಿಳಿಸಿದ್ದಾರೆ.

ಹಾಗಾಗಿ ನಾವು ಈ ಹಿಂದಿನಿಂದ ಹೇಳಿಕೊಂಡು ಬಂದಿರುವಂತೆ ಪಾಕಿಸ್ತಾನವು ಭಾರತದ ಮನ ಒಲಿಸಲು ಯತ್ನಿಸುವುದಾದಲ್ಲಿ ಅದು ಮೂಲಭೂತ ಬದಲಾವಣೆಗಳನ್ನು ಮಾಡಬೇಕು, ಮುಂಬೈ ದಾಳಿಯ ರೂವಾರಿಗಳನ್ನು ನ್ಯಾಯಾಂಗದ ಕಟಕಟೆಗೆ ತರಬೇಕು. ಇದು ಪ್ರಗತಿಗೆ ಸಹಕಾರಿಯಾಗಲಿದೆ ಮತ್ತು ಪ್ರಮುಖ ಹೆಜ್ಜೆಯಾಗಲಿದೆ ಎಂಬುದನ್ನು ನಾವು ಸ್ಪಷ್ಟಪಡಿಸಿದ್ದೇವೆ ಎಂದು ಅವರು ಅಭಿಪ್ರಾಯಪಟ್ಟರು.

ಪಾಕಿಸ್ತಾನದ ಬೇಹುಗಾರಿಕಾ ವಿಭಾಗ ಐಎಸ್ಐ ಮತ್ತು ಭಯೋತ್ಪಾದಕ ಸಂಘಟನೆಗಳಿಗೆ ಸಂಬಂಧವಿರುವ ದಾಖಲೆಯು ಬಹಿರಂಗವಾದ ನಂತರ ಶ್ವೇತಭವನ ಮತ್ತು ಸ್ಟೇಟ್ ಇಲಾಖೆಯು ಈ ಹೇಳಿಕೆಯನ್ನು ನೀಡಿದೆ.
ಸಂಬಂಧಿತ ಮಾಹಿತಿ ಹುಡುಕಿ