ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಇರಾಕ್‌ ಬಾಂಬ್ ದಾಳಿಗೆ 40 ಶಿಯಾ ಯಾತ್ರಿಕರು ಬಲಿ (Shia pilgrims | Iraq | bomb attacks | Karbala)
Bookmark and Share Feedback Print
 
ಶಿಯಾಗಳ ಪವಿತ್ರ ನಗರ ಕರ್ಬಾಲಾದಲ್ಲಿ ಸೇರಿದ್ದ ಭಾರೀ ಸಂಖ್ಯೆಯ ಯಾತ್ರಾರ್ಥಿಗಳ ಮೇಲೆ ಸೋಮವಾರ ನಡೆದ ಎರಡು ಬಾಂಬ್ ದಾಳಿಗಳಿಂದ ಕನಿಷ್ಠ 40 ಮಂದಿ ಸಾವನ್ನಪ್ಪಿದ್ದು, 68ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಮತ್ತು ವೈದ್ಯರು ತಿಳಿಸಿದ್ದಾರೆ.

ಮೊದಲ ಬಾಂಬ್ ಸ್ಫೋಟದಲ್ಲಿ 18 ಮಂದಿ ಸಾವನ್ನಪ್ಪಿದ್ದಾರೆ. ಭಾರೀ ಜನಸ್ತೋಮದ ನಡುವೆ ಆತ್ಮಹತ್ಯಾ ಬಾಂಬರ್ ಒಬ್ಬ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದ. ಇದಾದ ನಿಮಿಷದ ನಂತರ ಇಲ್ಲಿಂದ 300 ಮೀಟರ್ ದೂರದಲ್ಲಿ ನಡೆದ ಕಾರ್ ಬಾಂಬ್ ಸ್ಫೋಟದಲ್ಲಿ 22 ಮಂದಿ ಸಾವನ್ನಪ್ಪಿದರು.

ಇರಾಕ್ ರಾಜಧಾನಿ ಬಾಗ್ದಾದ್‌ನಿಂದ 118 ಕಿಲೋ ಮೀಟರ್ ದೂರದಲ್ಲಿರುವ ಕರ್ಬಾಲಾ ನಗರದಿಂದ ನಾಲ್ಕು ಕಿಲೋ ಮೀಟರ್ ಅಂತರದಲ್ಲಿ ಈ ಎರಡೂ ಸ್ಫೋಟಗಳು ಸಂಭವಿಸಿವೆ.

ಇಮಾಮ್ ಅಲ್ ಮಹ್ದಿ ಪವಿತ್ರ ದಿನದ ಕಾರಣದಿಂದ ರಜಾದಿನವಾಗಿದ್ದರಿಂದ ಕರ್ಬಾಲಾದಲ್ಲಿ ಲಕ್ಷಾಂತರ ಶಿಯಾ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಲು ಆಗಮಿಸಿದ್ದರು. ಇವರಿಗೆ ಭದ್ರತೆ ನೀಡಲು ಸುಮಾರು 30,000 ರಕ್ಷಣಾ ಸಿಬ್ಬಂದಿಗಳನ್ನೂ ಸರಕಾರ ನೇಮಿಸಿತ್ತು. ಆದರೂ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದಕ್ಕೂ ಮೊದಲು ಅಲ್-ಅರೇಬಿಯಾ ಟೀವಿ ಬಾಗ್ದಾದ್ ಕಚೇರಿಯ ಹೊರಗಡೆ ನಡೆದ ಆತ್ಮಹತ್ಯಾ ಬಾಂಬ್ ಸ್ಫೋಟದಲ್ಲಿ ನಾಲ್ಕು ಮಂದಿ ಸಾವನ್ನಪ್ಪಿ, 16 ಮಂದಿ ಗಾಯಗೊಂಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ