ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಲಂಡನ್: ಸೆಕ್ಸ್ ಸ್ವಾಮಿ ಮೋಹನ್ ಸಿಂಗ್‌ಗೆ ಜೈಲುಶಿಕ್ಷೆ (Mohan Singh | Spiritual guru jailed | rape | India)
Bookmark and Share Feedback Print
 
ಭಾರತದಲ್ಲಿನ ಕೆಲವು ಸ್ವಾಮಿಗಳ ರಾಸಲೀಲೆ, ಜೈಲುವಾಸ ಪ್ರಕರಣದ ಬೆನ್ನಲ್ಲೇ, ಇದೀಗ ಬ್ರಿಟನ್‌ನಲ್ಲಿ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ಆರೋಪದ ಮೇಲೆ ಮೋಹನ್ ಸಿಂಗ್ ಎಂಬ ಸ್ವಯಂಘೋಷಿತ ಸ್ವಾಮೀಜಿಯೊಬ್ಬ ತಪ್ಪಿತಸ್ಥ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಜೈಲುಕಂಬಿ ಎಣಿಸುತ್ತಿದ್ದಾನೆ.

ತಾನೊಬ್ಬ ಹೀಲರ್ ಎಂದು ಮೈಕೇಲ್ ಲೈಯೋನ್ಸ್ ಅಲಿಯಾಸ್ ಮೋಹನ್ ಸಿಂಗ್ (52) ತನ್ನನ್ನು ತಾನು ಧಾರ್ಮಿಕ ಗುರು ಎಂಬದಾಗಿ ಘೋಷಿಸಿಕೊಂಡಿರುವುದಾಗಿ ಡೈಲಿ ಎಕ್ಸ್‌ಪ್ರೆಸ್ ವರದಿ ತಿಳಿಸಿದೆ.

ಧಾರ್ಮಿಕ ಗುರು ಎಂದು ಹೇಳಿಕೊಂಡಿರುವ ಈತ ಐಶಾರಾಮಿ ಜೀವನ ನಡೆಸುತ್ತಿದ್ದ. ಲಂಡನ್, ಲಾಸ್ ಏಂಜಲೀಸ್ ಮತ್ತು ಮಿಯಾಮಿಯಲ್ಲಿ ಸ್ವಂತದ ಫ್ಲ್ಯಾಟ್ಸ್ ಹೊಂದಿದ್ದ. ಅಷ್ಟೇ ಅಲ್ಲ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಬೆಂಟ್ಲೆಸ್, ಜಾಗ್ವಾರ್ ಕಾರುಗಳಲ್ಲಿಯೇ ಓಡಾಟ. ಅಲ್ಲದೆ, ತಾನು ಬೌದ್ದ ಗುರು ದಲೈಲಾಮಾ ಅವರ ಅಪರಾವತಾರ ಎಂದು ಬೊಗಳೆ ಬಿಡುತ್ತಿದ್ದ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಕಾಟ್‌ಲ್ಯಾಂಡ್ ಯಾರ್ಡ್ ಮತ್ತು ಎಫ್‌ಬಿಐ ಅಧಿಕಾರಿಗಳ ತನಿಖೆಯ ನಂತರ ಮೋಹನ್ ಸಿಂಗ್‌ನನ್ನು ವಿಚಾರಣೆಗೆ ಕರೆ ತರಲಾಗಿತ್ತು. ಈತ ಮಿಲಿಟರಿ ಕಮ್ಯೂನಿಟಿ ಮಾದರಿಯಲ್ಲಿ ಧಾರ್ಮಿಕ ಸಂಸ್ಥೆಯನ್ನು ನಡೆಸುತ್ತಿದ್ದ ಎಂದು ಸೋಮವಾರ ಪೊಲೀಸರು ತಿಳಿಸಿದ್ದರು. ಈತನ ಭಕ್ತರು ಪ್ರತಿವರ್ಷ ಸಾವಿರ ಡಾಲರ್‌ನ್ನು ಪಾವತಿಸಬೇಕಾಗಿತ್ತು.

ಜಮೈಕ ಸಂಜಾತ ಸಿಂಗ್‌ನ ಕಾಮಪುರಾಣದ ಬಗ್ಗೆ ಬ್ರಿಟನ್, ಅಮೆರಿಕ, ನ್ಯೂಜಿಲ್ಯಾಂಡ್‌ನ 11 ಮಹಿಳೆಯರು ಲಂಡನ್‌ನ ವುಡ್ ಗ್ರೀನ್ ಕ್ರೌನ್ ಕೋರ್ಟ್‌ಗೆ ದಾಖಲೆ ನೀಡಿದ್ದರು.ಈತನ ವಿರುದ್ಧ ಅತ್ಯಾಚಾರ, ಲೈಂಗಿಕ ಕಿರುಕುಳ ಸೇರಿದಂತೆ ಹಲವಾರು ಆರೋಪಗಳು ಇದ್ದಿರುವುದಾಗಿ ಡಿಟೆಕ್ಟಿವ್ ಸಾರ್ಜೆಂಟ್ ನಿಕ್ ಗಿಲ್ಸೆ ತಿಳಿಸಿದ್ದಾರೆ.

2002ರ ಜೂನ್‌ನಲ್ಲಿ ನಟಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ದೋಷಿ ಎಂದು ಕೋರ್ಟ್ ತೀರ್ಪು ನೀಡಿತ್ತು. 2005ರಲ್ಲಿ ಮತ್ತೊಬ್ಬ ಮಹಿಳೆಗೂ ಲೈಂಗಿಕ ಕಿರುಕುಳ ನೀಡಿದ್ದ. ಸಿಂಗ್ ವಿರುದ್ಧದ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್, ಅತ್ಯಾಚಾರ ಪ್ರಕರಣದಲ್ಲಿ ಏಳು ವರ್ಷ ಹಾಗೂ ಲೈಂಗಿಕ ಕಿರುಕುಳಕ್ಕಾಗಿ ಮೂರು ವರ್ಷಗಳ ಕಾಲ ಜೈಲುಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಸಂಬಂಧಿತ ಮಾಹಿತಿ ಹುಡುಕಿ