ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ರಹಸ್ಯ ದಾಖಲೆ ಬಹಿರಂಗ ಕಾನೂನಿನ ಉಲ್ಲಂಘನೆ: ಅಮೆರಿಕಾ (Wikileak | White House | ISI | India)
Bookmark and Share Feedback Print
 
ಅಫಘಾನಿಸ್ತಾನದಲ್ಲಿನ ಯುದ್ಧಕ್ಕೆ ಸಂಬಂಧಪಟ್ಟ 92,000 ರಹಸ್ಯ ದಾಖಲೆಗಳನ್ನು ವೆಬ್‌ಸೈಟಲ್ಲಿ ಬಹಿರಂಗಪಡಿಸುವ 'ವೀಕಿಲೀಕ್' ನಿರ್ಧಾರ ಸಂಯುಕ್ತ ರಾಷ್ಟ್ರದ ಕಾನೂನಿನ ಉಲ್ಲಂಘಟನೆ ಎಂದಿರುವ ಅಮೆರಿಕಾ, ದಾಖಲೆ ಬಹಿರಂಗವಾಗಿರುವ ಕುರಿತು ಸಮಗ್ರ ತನಿಖೆ ನಡೆಸಲಾಗುತ್ತದೆ ಎಂದು ಪ್ರತಿಕ್ರಿಯಿಸಿದೆ.

'ವೀಕ್‌ಲೀಕ್ಸ್' ಈ ದಾಖಲೆಗಳನ್ನು ಬಿಡುಗಡೆ ಮಾಡುವ ಮೊದಲು ಸರಕಾರಕ್ಕೆ ಇದರ ಪ್ರತಿಗಳನ್ನು ಮೊದಲು ನೀಡಲಾಗಿತ್ತು. ಇದನ್ನು ಒಬಾಮಾ ಆಡಳಿತವು ತನಗೆ ಮತ್ತು ಇತರರಿಗೆ ತಿಳಿಸಿತ್ತು. ದಾಖಲೆ ಬಹಿರಂಗವಾಗಿರುವುದನ್ನು ಸರಕಾರವು ರಾಷ್ಟ್ರೀಯ ಭದ್ರತಾ ಕಳವಳವೆಂದು ಪರಿಗಣಿಸಿದ್ದು, ತನಿಖೆ ನಡೆಸಲಿದೆ ಎಂದು ಶ್ವೇತಭವನದ ವಕ್ತಾರ ರಾಬರ್ಟ್ ಗಿಬ್ಸ್ ತಿಳಿಸಿದ್ದಾರೆ.

ಈ ಸುದ್ದಿಗಳು ಪ್ರಕಟವಾಗಲಿವೆ ಎಂಬ ಕುರಿತು ಸುದ್ದಿ ಸಂಸ್ಥೆಗಳ ಜತೆಗಿನ ಸಮಾಲೋಚನೆ ನಂತರ ನಾನು ಅಧ್ಯಕ್ಷರ ಜತೆ ಮಾತನಾಡಿದ್ದೆ. ನನ್ನ ಪ್ರಕಾರ ಇಂತಹ ಸುದ್ದಿಗಳಿಗೆ ನಮ್ಮ ಪ್ರತಿಕ್ರಿಯೆ ಇದು ನಮ್ಮ ಕಾನೂನಿನ ಉಲ್ಲಂಘನೆ ಎಂಬುದು ಎಂದು ಅಭಿಪ್ರಾಯಪಟ್ಟರು.

2008ರ ಜುಲೈ ತಿಂಗಳಲ್ಲಿ ಅಫಘಾನಿಸ್ತಾನದಲ್ಲಿನ ಕಾಬೂಲ್‌ನ ಭಾರತೀಯ ರಾಯಭಾರ ಕಚೇರಿಗೆ ಬಾಂಬ್ ದಾಳಿ ನಡೆಯುವ ವಾರದ ಮೊದಲು ತಾಲಿಬಾನ್‌ನಿಂದ ದಾಳಿ ನಡೆಯುವ ಸಾಧ್ಯತೆಯಿದೆ ಮತ್ತು ಇದರ ಜತೆ ಪಾಕಿಸ್ತಾನದ ಐಎಸ್ಐ ಕೂಡ ನೇರ ಸಂಪರ್ಕ ಹೊಂದಿದೆ ಎಂದು ಪೋಲೆಂಡ್ ಬೇಹುಗಾರಿಕಾ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು ಎಂದು ಅಮೆರಿಕಾ ಮಿಲಿಟರಿಯ ಸೋರಿಕೆಯಾದ ದಾಖಲೆಗಳು ಹೇಳುತ್ತಿವೆ ಎಂದು ವರದಿಗಳು ಹೇಳಿದ್ದವು. ಇದನ್ನು 'ವೀಕಿಲೀಕ್' ವೆಬ್‌ಸೈಟ್ ಬಹಿರಂಗಪಟಿಸಿತ್ತು.

ಭಾರತ ಮತ್ತು ಅಫಘಾನಿಸ್ತಾನದ ವಿರುದ್ಧ ಕಾರ್ಯಾಚರಣೆಗಳನ್ನು ನಡೆಸಲು ಐಎಸ್ಐ ಒಂದು ಅರೆ ಸ್ವಾಯತ್ತ 'ಎಸ್-ವಿಂಗ್' ಅಸ್ತಿತ್ವಕ್ಕೆ ತಂದಿತ್ತು ಮತ್ತು ಸಂಘಟನೆಯ ಓರ್ವ ಪ್ರಭಾವಿ ಅಧಿಕಾರಿಯನ್ನು ಕಾಬೂಲ್ ಆತ್ಮಹತ್ಯಾ ದಾಳಿ ಮೇಲ್ವಿಚಾರಣೆಗೆ ಬಿಟ್ಟಿತ್ತು ಎಂದು ಸೋರಿಕೆಯಾದ ಅಮೆರಿಕಾ ದಾಖಲೆಗಳು ಹೇಳಿದ್ದವು.
ಸಂಬಂಧಿತ ಮಾಹಿತಿ ಹುಡುಕಿ