ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಲ್‌ಖೈದಾ ವಿರುದ್ಧ ಫ್ರಾನ್ಸ್ ಹೋರಾಡುತ್ತಿದೆ: ಪ್ರಧಾನಿ (France | al Qaeda | Francois Fillon | Nicolas Sarkozy)
Bookmark and Share Feedback Print
 
ತನ್ನ ಪ್ರಜೆಯೊಬ್ಬನನ್ನು ಒತ್ತೆಯಾಳಾಗಿಟ್ಟುಕೊಂಡು ನಂತರ ಕೊಂದು ಹಾಕಿದ್ದ ಭಯೋತ್ಪಾದಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಫ್ರಾನ್ಸ್ ಪ್ರಧಾನ ಮಂತ್ರಿ ಫ್ರಾನ್ಕೋಯಿಸ್ ಫಿಲ್ಲನ್, ಪ್ಯಾರಿಸ್ ಭಯೋತ್ಪಾದಕ ಸಂಘಟನೆ ಅಲ್‌ಖೈದಾದ ಜತೆ ಯುದ್ಧದಲ್ಲಿದ್ದು, ತನ್ನ ಉತ್ತರ ಆಫ್ರಿಕಾದ ಮಗ್ಗುಲಿನಲ್ಲಿರುವ ಭೂ ಪ್ರದೇಶದಲ್ಲಿ ಹೋರಾಟವನ್ನು ತೀವ್ರಗೊಳಿಸಲಿದೆ ಎಂದು ತಿಳಿಸಿದ್ದಾರೆ.

78ರ ಹರೆಯ ಒತ್ತೆಯಾಳು ಮೈಕೆಲ್ ಜರ್ಮನ್ಯೂ ಅವರನ್ನು ಬಿಡಿಸಿಕೊಳ್ಳುವ ಸಲುವಾಗಿ ಕೊನೆ ಕ್ಷಣದಲ್ಲಿ ಫ್ರಾನ್ಸ್ ನಡೆಸಿದ ದಾಳಿಗೂ ಮೊದಲು ಅವರನ್ನು ಭಯೋತ್ಪಾದಕ ಗುಂಪು ಕೊಂದು ಹಾಕಿರಬಹುದು ಎಂದು ಫಿಲ್ಲರ್ ಇದೇ ಸಂದರ್ಭದಲ್ಲಿ ಶಂಕೆ ವ್ಯಕ್ತಪಡಿಸಿದರು.

ಮೌರಿಟೇನಿಯನ್ ಮತ್ತು ಫ್ರೆಂಚ್ ಭದ್ರತಾ ಪಡೆಗಳು ಅಲ್‌ಖೈದಾದ ಕನಿಷ್ಠ ಆರು ಭಯೋತ್ಪಾದಕರನ್ನು ಕೊಂದು ಹಾಕಿದ್ದಕ್ಕೆ ಪ್ರತಿಯಾಗಿ ತಾವು ಮೈಕೆಲ್ ಅವರನ್ನು ಕೊಂದು ಹಾಕಿರುವುದಾಗಿ ಇಸ್ಲಾಮಿಕ್ ಮಗರೆಬ್‌ನಲ್ಲಿನ ಅಲ್‌ಖೈದಾ ಆಡಿಯೋ ಸಂದೇಶವೊಂದರಲ್ಲಿ ಭಾನುವಾರ ಹೇಳಿತ್ತು.

ಮೈಕೆಲ್ ಅವರನ್ನು ಉಗ್ರರು ಕೊಂದು ಹಾಕಿರುವುದನ್ನು ಖಚಿತಪಡಿಸಿರುವ ಫ್ರೆಂಚ್ ಅಧ್ಯಕ್ಷ ನಿಕೋಲಾಸ್ ಸರ್ಕೋಜಿ, ಇತರ ಹಿಂದಿನ ರೂವಾರಿಗಳನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿದ್ದರು.

ವಾಯುವ್ಯ ಆಫ್ರಿಕಾದಲ್ಲಿನ ಹಲವು ದೇಶಗಳ ಜತೆ ತಾನು ಮತ್ತೆ ಮಾತುಕತೆ ನಡೆಸಿ ಭಯೋತ್ಪಾದಕರ ವಿರುದ್ಧದ ಹೋರಾಟವನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಮುಂದೆ ಸಾಗಲಿರುವುದಾಗಿ ಫ್ರಾನ್ಸ್ ಹೇಳಿಕೊಂಡಿದೆ.

ನಾವು ಅಲ್‌ಖೈದಾ ವಿರುದ್ಧ ಹೋರಾಡುತ್ತಿದ್ದೇವೆ. ಫ್ರಾನ್ಸ್ ಪ್ರತಿವರ್ಷ ಸಾಕಷ್ಟು ದಾಳಿಗಳನ್ನು ವಿಫಲಗೊಳಿಸುತ್ತಾ ಬಂದಿದೆ ಎಂದು ಹೆಚ್ಚು ವಿವರಗಳನ್ನು ಬಹಿರಂಗಪಡಿಸದೆ ಫಿಲ್ಲನ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ