ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕಿಸ್ತಾನ ವಿಮಾನ ಪತನ; ಎಲ್ಲಾ 152 ಮಂದಿ ಸಾವು (Plane crash | Margalla Hills | Islamabad | Air Blue plane)
Bookmark and Share Feedback Print
 
152 ಮಂದಿಯನ್ನು ಹೊತ್ತುಕೊಂಡು ಕರಾಚಿಯಿಂದ ಇಸ್ಲಾಮಾಬಾದ್‌ಗೆ ಬರುತ್ತಿದ್ದ 'ಏರ್ ಬ್ಲೂ' ಖಾಸಗಿ ಪ್ರಯಾಣಿಕರ ವಿಮಾನ ಭಾರೀ ಮಳೆ ಮತ್ತು ಮಂಜಿನ ಕಾರಣದಿಂದ ರಾಜಧಾನಿ ಸಮೀಪದ ಮರ್ಗಲ್ಲಾ ಬೆಟ್ಟ ಪ್ರದೇಶದಲ್ಲಿ ಪತನಗೊಂಡಿದ್ದು, ವಿಮಾನದಲ್ಲಿದ್ದ ಎಲ್ಲರೂ ಸಾವನ್ನಪ್ಪಿದ್ದಾರೆ.

ವಿಮಾನದಲ್ಲಿದ್ದ ಯಾರೊಬ್ಬರೂ ಬದುಕಿಲ್ಲ ಎಂದು ಪಾಕ್ ಆಂತರಿಕ ಸಚಿವ ರೆಹಮಾನ್ ಮಲಿಕ್ ಸ್ಪಷ್ಟಪಡಿಸಿದ್ದಾರೆ.

ಅಪಘಾತಕ್ಕೊಳಗಾದ ವಿಮಾನದಲ್ಲಿದ್ದ ಕೆಲವರು ಬದುಕುಳಿದಿದ್ದಾರೆ ಎಂದು ಪ್ರಾಥಮಿಕ ವರದಿಗಳು ಹೇಳಿದ್ದವು. ಆದರೆ ಅದನ್ನು ತಳ್ಳಿ ಹಾಕಿರುವ ಸಚಿವರು, ಎಲ್ಲಾ 152 ಮಂದಿಯೂ ಅಸುನೀಗಿದ್ದಾರೆ ಎಂದರು.

ಅದೇ ಹೊತ್ತಿಗೆ ವಿಮಾನದಲ್ಲಿದ್ದ ಪ್ರಯಾಣಿಕರ ಸಂಖ್ಯೆಯ ಕುರಿತು ಭಿನ್ನ ಹೇಳಿಕೆಗಳು ಬಂದಿವೆ. ನಾಗರಿಕ ವಾಯುಯಾನ ಪ್ರಾಧಿಕಾರವು 152 ಎಂದು ಹೇಳುತ್ತಿದ್ದರೆ, ಪೊಲೀಸರು 149 ಎಂದು ಹೇಳುತ್ತಿದ್ದಾರೆ.

ಎಲ್ಲಾ ಕಳೇಬರಗಳನ್ನೂ ಘಟನಾ ಸ್ಥಳದಿಂದ ಹೊರಗೆ ತೆಗೆದಿದ್ದೇವೆ. ನಿರ್ದಿಷ್ಟ ಸಂಖ್ಯೆಯನ್ನು ನಾನು ಈಗ ನಿಮಗೆ ನೀಡಲು ಸಾಧ್ಯವಿಲ್ಲ. ಯಾಕೆಂದರೆ ದೇಹಗಳು ಗುರುತು ಹಿಡಿಯಲಾಗದಂತೆ ಚಿಪ್ಪಾಚೂರಾಗಿವೆ ಎಂದು ಇಸ್ಲಾಮಾಬಾದ್ ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.

'ಏರ್‌ಬ್ಲೂ' ಖಾಸಗಿ ವಿಮಾನಯಾನ ಸಂಸ್ಥೆಗೆ ಸೇರಿದ ಏರ್‌ಬಸ್ 321 ವಿಮಾನವು ಕರಾಚಿಯಿಂದ ರಾಜಧಾನಿ ಇಸ್ಲಾಮಾಬಾದ್‌ಗೆ ತೆರಳುತ್ತಿದ್ದ ವೇಳೆ ಮರ್ಗಲ್ಲಾ ಬೆಟ್ಟದಲ್ಲಿ ಬೆಳಿಗ್ಗೆ 9.45ಕ್ಕೆ ಪತನಗೊಂಡಿತ್ತು. ಇದು ಇಸ್ಲಾಮಾಬಾದ್‌ನ ಬೆನಜೀರ್ ಭುಟ್ಟೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು.

ಪತನಕ್ಕೆ ನಿರ್ದಿಷ್ಟ ಕಾರಣಗಳು ತಿಳಿದು ಬಂದಿಲ್ಲವಾದರೂ, ಭಾರೀ ಮಳೆಯಿಂದಾಗಿ ಹೀಗಾಯಿತು ಎಂದು ಹೇಳಲಾಗಿದೆ. ಈ ಕುರಿತು ತನಿಖೆಗಳು ನಡೆಯುತ್ತಿವೆ.

ಮಾರ್ಗಲ್ಲಾ ಬೆಟ್ಟ ಪ್ರದೇಶ ದುರ್ಗಮವಾಗಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ಭಾರೀ ಅಡ್ಡಿಯಾಗಿತ್ತು. ಅಲ್ಲಿಗೆ ಸರಿಯಾದ ರಸ್ತೆ ಸಂಪರ್ಕವೂ ಇರಲಿಲ್ಲ. ಜತೆಗೆ ಭಾರೀ ಮಳೆ ಬರುತ್ತಿದ್ದುದರಿಂದ ಹೆಲಿಕಾಫ್ಟರುಗಳ ಹಾರಾಟಕ್ಕೂ ಅಡಚಣೆ ಉಂಟಾಗಿತ್ತು.

ಘಟನೆ ನಡೆಯುತ್ತಿದ್ದಂತೆ ಇಸ್ಲಾಮಾಬಾದ್ ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ