ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮಧ್ಯಪ್ರಾಚ್ಯದ ಮೇಲೆ ಶೀಘ್ರದಲ್ಲೇ ಅಮೆರಿಕಾ ದಾಳಿ: ಇರಾನ್ (Middle East | Iran | United States | Mahmoud Ahmadinejad)
Bookmark and Share Feedback Print
 
ಮುಂದಿನ ಮೂರು ತಿಂಗಳುಗಳ ಅವಧಿಯಲ್ಲಿ ಮಧ್ಯಪ್ರಾಚ್ಯದ ಕನಿಷ್ಠ ಮೂರು ರಾಷ್ಟ್ರಗಳ ಮೇಲೆ ಅಮೆರಿಕಾ ಮಿಲಿಟರಿ ದಾಳಿಗಳನ್ನು ನಡೆಸಲಿದೆ ಎಂದು ಇರಾನ್ ನಿರೀಕ್ಷಿಸುತ್ತಿದೆ ಎಂದು ಇರಾನ್ ಅಧ್ಯಕ್ಷ ಮೊಹಮ್ಮದ್ ಅಹ್ಮದಿನೇಜಾದ್ ಹೇಳಿದ್ದಾರೆ.

ಇದರಲ್ಲಿ ಇರಾನ್ ಕೂಡ ಸೇರಿದೆಯೇ ಅಥವಾ ಯಾವ ಬೇಹುಗಾರಿಕಾ ಮಾಹಿತಿ ಇಂತಹ ಹೇಳಿಕೆಗೆ ಪೂರಕವಾಗಿದೆ ಎಂಬುದನ್ನು ಅವರು ಸ್ಪಷ್ಟವಾಗಿ ಹೇಳಿಲ್ಲ. ಸೋಮವಾರ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಅವರು ಈ ಹೇಳಿಕೆ ನೀಡಿದ್ದಾರೆ.

ಪರಮಾಣು ಕಾರ್ಯಕ್ರಮದಲ್ಲಿರುವ ಇರಾನ್ ಅಣು ಬಾಂಬ್ ತಯಾರಿಯಲ್ಲಿ ತೊಡಗಬಹುದು ಎಂಬ ಭೀತಿಯಲ್ಲಿರುವ ಅಮೆರಿಕಾ ಮತ್ತು ಇಸ್ರೇಲ್‌ಗಳು ಇರಾನ್ ಮೇಲಿನ ಮಿಲಿಟರಿ ಕ್ರಮವನ್ನು ಇದುವರೆಗೂ ತಳ್ಳಿ ಹಾಕಿರದ ಕಾರಣ ದಿನದಿಂದ ದಿನಕ್ಕೆ ಜಾಗತಿಕ ಆತಂಕ ಹೆಚ್ಚುತ್ತಿದೆ.

ಅವರು ಮುಂದಿನ ಮೂರು ತಿಂಗಳುಗಳೊಳಗೆ ಈ ಪ್ರಾಂತ್ಯದ ಕನಿಷ್ಠ ಎರಡು ದೇಶಗಳ ಮೇಲೆ ದಾಳಿ ಮಾಡಲು ನಿರ್ಧರಿಸಿದ್ದಾರೆ. ಅಮೆರಿಕನ್ನರು ಈ ಸಂಚನ್ನು ರೂಪಿಸಿರುವ ಬಗ್ಗೆ ಇರಾನ್‌ಗೆ ನಂಬಲರ್ಹ ಮಾಹಿತಿಗಳು ಲಭಿಸಿವೆ ಎಂದು ಸುದ್ದಿವಾಹಿನಿಗೆ ಅಹ್ಮದಿನೇಜಾದ್ ತಿಳಿಸಿದ್ದಾರೆ.

ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಪಟ್ಟಂತೆ ಟೆಹ್ರಾನ್ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ಅಮೆರಿಕಾ ನೇತೃತ್ವದ ರಾಷ್ಟ್ರಗಳು ಜಾಗತಿಕ ನಿರ್ಬಂಧಗಳನ್ನು ಹೇರುತ್ತಿರುವುದನ್ನೂ ಇರಾನ್ ಅಧ್ಯಕ್ಷರು ತೀವ್ರವಾಗಿ ಟೀಕಿಸಿದ್ದಾರೆ.

ಅವರು ನಮ್ಮ ಮೇಲೆ ಒತ್ತಡ ಹೇರುವ ಸಲುವಾಗಿ ಇಂತಹ ತಂತ್ರವನ್ನು ಬಳಸುತ್ತಿದ್ದಾರೆ. ಆದರೆ ಅವರು ಖಂಡಿತಾ ವಿಫಲವಾಗಲಿವೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ