ಸ್ಪೇನ್‌ನಾದ್ಯಂತ ಭಾರೀ ಪ್ರಚಾರ ಗಿಟ್ಟಿಸಿಕೊಂಡಿರುವ ಗೂಳಿ ಕಾಳಗಕ್ಕೆ ಇದೀಗ ಹೊಡೆತ ಬಿದ್ದಿದ್ದು, ದೇಶದ ಈಶಾನ್ಯ ಭಾಗದಲ್ಲಿ ಗೂಳಿ ಕಾಳಗಕ್ಕೆ ನಿಷೇಧ ಹೇರಲು ಕಾಟಾಲೋನಿಯಾ ಸಂಸತ್ ಅನುಮತಿ ನೀಡಿದೆ.
ಗೂಳಿ ಕಾಳಗ ಅಮಾನವೀಯ ಎಂದು ಪ್ರಾಣಿದಯಾ ಹಕ್ಕುಗಳ ಕಾರ್ಯಕರ್ತರು ಕಾಟಾಲನ್ ಭಾಷೆಯಲ್ಲೇ ತೀವ್ರ ವಿರೋಧ ವ್ಯಕ್ತಪಡಿಸಿದರು. ಅಷ್ಟೇ ಅಲ್ಲ, ಗೂಳಿ ಕಾಳಗವನ್ನು ನಿಷೇಧಿಸಲು ಅಸೆಂಬ್ಲಿಯಲ್ಲಿ ನಿರ್ಧಾರ ಕೈಗೊಳ್ಳಬೇಕೆಂದು ಒತ್ತಾಯಿಸಿ ಸುಮಾರು 180,000 ಸಹಿಯುಳ್ಳ ಮನವಿಯನ್ನು ಸಲ್ಲಿಸಿದ್ದರು.
ಆ ನಿಟ್ಟಿನಲ್ಲಿ ಕಾಟಾಲೋನಿಯಾ ಸಂಸತ್ ಗೂಳಿ ಕಾಳಗ ನಿಷೇಧಿಸುವ ಕ್ರಮಕ್ಕೆ ಮುಂದಾಗಿದೆ. ಗೂಳಿ ಕಾಳಗ ನಿಷೇಧ ಗೊತ್ತುವಳಿ ಪರವಾಗಿ ಸುಮಾರು 135 ಸಚಿವರು ಪರವಾಗಿ ಮತ ಚಲಾಯಿಸಿದ್ದರು. ಇನ್ನು ಮುಂದೆ ಗೂಳಿ ಕಾಳಗ ನಡೆಸುವುದಾಗಲಿ, ಗೂಳಿ ಹತ್ಯೆ ಹಾಗೂ ಪ್ರಾಣಿಗಳನ್ನು ಅಮಾನವೀಯವಾಗಿ ನಡೆಸಿಕೊಳ್ಳುವುದರಿಂದ ರಕ್ಷಿಸಲು ಕಾನೂನಿಗೆ ತಿದ್ದುಪಡಿ ತರಲಾಗಿದೆ.
ಕಾಟಾಲೋನಿಯಾ ಸ್ಪೇಯ್ನನ ಎರಡನೇ ದೊಡ್ಡ ನಗರವಾಗಿದೆ, ಕಾಟಾಲೋನಿಯಾದ ರಾಜಧಾನಿ ಬಾರ್ಸಿಲೋನಾ. ಆ ಹಿನ್ನೆಲೆಯಲ್ಲಿ ಗೂಳಿ ಕಾಳಗವನ್ನು ನಿಷೇಧಿಸಿದ ದೇಶದ ಹೊರವಲಯದ ಮೊದಲ ದ್ವೀಪ ಪ್ರದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇನ್ನುಳಿದ ಪ್ರದೇಶಗಳಲ್ಲಿಯೂ ನಿಷೇಧ ಮುಂದುವರಿಸುವ ಸಾಧ್ಯತೆ ಇದೆ ಎಂದು ಸಂಸತ್ ಮೂಲಗಳು ತಿಳಿಸಿವೆ.