ತಾಲಿಬಾನ್ ಉಗ್ರಗಾಮಿ ಸಂಘಟನೆ ಮತ್ತು ಪಾಕಿಸ್ತಾನ ಇಂಟರ್ ಸರ್ವಿಸ್ ಇಂಟೆಲಿಜೆನ್ಸ್ (ಐಎಸ್ಐ) ನಡುವಿನ ಸಂಬಂಧದ ಬಗ್ಗೆ ಅಚ್ಚರಿ ಪಡುವಂತಾದ್ದು ಏನೂ ಇಲ್ಲ ಎಂದು ಅಮೆರಿಕ ಸೆಂಟ್ರಲ್ ಕಮಾಂಡ್ ಮುಖ್ಯಸ್ಥ ಜನರಲ್ ಜೇಮ್ಸ್ ಮಾಟ್ಟಿಸ್ ಅಭಿಪ್ರಾಯವ್ಯಕ್ತಪಡಿಸಿದ್ದು, ಈ ವಿಷಯ ಈಗಾಗಲೇ ಎಲ್ಲರಿಗೂ ತಿಳಿದಿರುವುದಾಗಿದೆ ಎಂದರು.
ತಾಲಿಬಾನ್ ಮತ್ತು ಐಎಸ್ಐ ಸಂಬಂಧ ಹೊಸ ವಿಚಾರವೇನೂ ಅಲ್ಲ, ಅದು ಈಗಾಗಲೇ ಜಗಜ್ಜಾಹೀರಾದ ಸಂಗತಿ ಎಂಬುದು ನನ್ನ ಅನಿಸಿಕೆ. ಐಎಸ್ಐನ ಹಲವು ಅಧಿಕಾರಿಗಳು ತಾಲಿಬಾನ್ ಜೊತೆ ಕೈಜೋಡಿಸಿರುವ ಸಂಗತಿ ಬೆಳಕಿಗೆ ಬಂದಿದೆ. ಆದರೆ ಇದು ತುಂಬಾ ವರ್ಷದವರೆಗೆ ಮುಂದುವರಿಯಲು ಸಾಧ್ಯವಿಲ್ಲ ಎಂದು ಜೇಮ್ಸ್ ತಿಳಿಸಿರುವುದಾಗಿ ಡೈಲಿ ಟೈಮ್ಸ್ ತಿಳಿಸಿದೆ.
ಅಷ್ಟೇ ಅಲ್ಲ, ಭಯೋತ್ಪಾದಕರ ವಿರುದ್ಧದ ಹೋರಾಟಕ್ಕೆ ಪಾಕಿಸ್ತಾನಕ್ಕೆ ಅಮೆರಿಕ ಪೂರ್ಣ ಪ್ರಮಾಣದಲ್ಲಿ ಸಹಕರಾ ನೀಡುವುದನ್ನು ಮುಂದುವರಿಸಲಿದೆ ಎಂದರು. ಹಾಗಾಗಿ ಉಭಯ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳಬೇಕು. ಅಲ್ಲದೇ ಸರಿಯಾದ ದಿಕ್ಕಿನತ್ತ ಸಾಗುವ ಅವಶ್ಯಕತೆ ಇದೆ ಎಂದು ಹೇಳಿದರು.