ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರತೀಯರ ಹತ್ಯೆಗೆ ಆದೇಶ ನೀಡಿಲ್ಲ: ಐಎಸ್ಐ ಮಾಜಿ (ISI | Gen Hamid Gul | US military documents | India)
Bookmark and Share Feedback Print
 
ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್ಐ ಮತ್ತು ತಾಲಿಬಾನ್ ಭಯೋತ್ಪಾದಕರ ನಡುವೆ ಸಂಬಂಧವಿದೆ ಹಾಗೂ ಭಾರತೀಯರನ್ನು ಕೊಂದು ಹಾಕಲು ತಾನು ಆದೇಶ ನೀಡಿದ್ದೆ ಎಂಬ ಬಹಿರಂಗಗೊಂಡಿರುವ ಅಮೆರಿಕಾ ಮಿಲಿಟರಿ ದಾಖಲೆಗಳು ಕೇವಲ ಕಾಲ್ಪನಿಕ ಎಂದು ಐಎಸ್ಐ ಮಾಜಿ ಮುಖ್ಯಸ್ಥ ಜನರಲ್ ಹಮೀದ್ ಗುಲ್ ಬಣ್ಣಿಸಿದ್ದಾರೆ.

1987ರಿಂದ 1989ರವರೆಗೆ ಐಎಸ್ಐ ಡಿಜಿಯಾಗಿದ್ದ ಗುಲ್ ಪ್ರಕಾರ ಇದರಲ್ಲಿ ತೊಡಗಿಕೊಂಡಿರುವುದು ಪಾಕಿಸ್ತಾನದ ಮಿಲಿಟರಿ. ಅದು ಪರೋಕ್ಷವಾಗಿ ಸಹಕರಿಸಿ ಐಎಸ್ಐ ಮೇಲೆ ಆರೋಪ ಹೊರಿಸಲಾಗುತ್ತಿದೆ ಎಂದು ಪ್ರಸಕ್ತ ಮಿಲಿಟರಿ ಮುಖ್ಯಸ್ಥ ಅಶ್ಫಕ್ ಕಯಾನಿಯತ್ತ ಬೆಟ್ಟು ತೋರಿಸಿದ್ದಾರೆ.

ಅಫಘಾನಿಸ್ತಾನದಲ್ಲಿ ಸೋವಿಯತ್ ವಿರುದ್ಧದ ಕಾರ್ಯಾಚರಣೆ ಸಂದರ್ಭದಲ್ಲಿ ಭಯೋತ್ಪಾದಕರನ್ನು ಪಾಕಿಸ್ತಾನ ಮತ್ತು ಅಮೆರಿಕಾ ಬೆಂಬಲಿಸುತ್ತಿದ್ದ ಹೊತ್ತಿನಲ್ಲಿ ಐಎಸ್ಐ ಮುಖ್ಯಸ್ಥರಾಗಿದ್ದ ಗುಲ್ ಹೆಸರು ಇದೀಗ ಬಹಿರಂಗಗೊಂಡಿರುವ ಅಮೆರಿಕಾ ಮಿಲಿಟರಿ ವರದಿಯುದ್ದಕ್ಕೂ ಕಾಣಿಸಿಕೊಂಡಿದೆ. ತಾಲಿಬಾನ್ ಭಯೋತ್ಪಾದಕ ಸಂಘಟನೆಯನ್ನು ಬಹಿರಂಗವಾಗಿಯೇ ಬೆಂಬಲಿಸುತ್ತಿದ್ದ ಗುಲ್, 2006ರ ಡಿಸೆಂಬರ್‌ನಲ್ಲಿ ಅಫ್ಘಾನ್ ರಾಜಧಾನಿಯ ಮೇಲೆ ದಾಳಿ ಮಾಡಲು ಮೂವರು ವ್ಯಕ್ತಿಗಳನ್ನು ನಿಯೋಜಿಸಿದ್ದರು ಎಂದೂ ಆರೋಪಿಸಲಾಗಿದೆ.

ಈ ಬಗ್ಗೆ ರಾವಲ್ಪಿಂಡಿಯಲ್ಲಿ ಪ್ರತಿಕ್ರಿಯೆ ನೀಡಿರುವ ಗುಲ್, ಆರೋಪಗಳು ಕೇವಲ ಕಲ್ಪನೆಯ ಚಿತ್ರಣ ಎಂದಿದ್ದಾರೆ.

ಯುದ್ಧ ದಾಖಲೆಗಳು ಬಹಿರಂಗವಾದ ನಂತರ ಪಾಕಿಸ್ತಾನದತ್ತ ನೇರವಾಗಿ ಬೆಟ್ಟು ಮಾಡಿ ತೋರಿಸಿರುವ ಅಫಘಾನಿಸ್ತಾನ ಸರಕಾರ, ತಾನು ಈ ಹಿಂದಿಂದ ಹೇಳುತ್ತಾ ಬಂದಿರುವಂತೆ ಪಕ್ಕದ ರಾಷ್ಟ್ರದಲ್ಲಿನ ಭಯೋತ್ಪಾದಕರ ಅಡಗುದಾಣಗಳನ್ನು ಮತ್ತು ವ್ಯವಸ್ಥೆಗಳನ್ನು ಮಟ್ಟ ಹಾಕದ ಹೊರತು ಯುದ್ಧ ಮುಕ್ತಾಯವಾಗದು ಎಂದಿದೆ.
ಸಂಬಂಧಿತ ಮಾಹಿತಿ ಹುಡುಕಿ