ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ದಾಖಲೆ ಸೋರಿಕೆಯ ಮೂಲ ನಮಗ್ಗೊತ್ತಿಲ್ಲ: ವೀಕಿಲೀಕ್ಸ್ (WikiLeaks | US military documents | Afghanistan | Barack Obama)
Bookmark and Share Feedback Print
 
ಅಮೆರಿಕಾದ ಬಹಿರಂಗಗೊಂಡ ಮಿಲಿಟರಿ ದಾಖಲೆಗಳ ಮೂಲ ಯಾವುದೆಂದು ತಮಗೆ ತಿಳಿದಿಲ್ಲ ಎಂದಿರುವ 'ವೀಕಿಲೀಕ್ಸ್' ಸಂಪಾದಕರು, ದಾಖಲೆಗಳನ್ನು ಸ್ವೀಕರಿಸುವಾಗ ಮೂಲ ಬಯಲಾಗದಂತೆ ಕಾರ್ಯಾಚರಣೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

ಅಫಘಾನಿಸ್ತಾನಕ್ಕೆ ಸಂಬಂಧಪಟ್ಟ ಯುದ್ಧ ದಾಖಲೆಗಳನ್ನು ಬಹಿರಂಗಪಡಿಸಿರುವುದು ಯಾರು ಅಥವಾ ಸಂಸ್ಥೆಗೆ ಇದರ ಬಗ್ಗೆ ಖಚಿತತೆ ಇಲ್ಲವೋ ಎಂಬುದರ ಬಗ್ಗೆ ನನಗೇನೂ ತಿಳಿದಿಲ್ಲ ಎಂದು ಸಂಪಾದಕ ಜೂಲಿಯನ್ ಅಸಾಂಜ್ ತಿಳಿಸಿದ್ದಾರೆ.

ಆದರೆ ನಮಗೆ ದಾಖಲೆಗಳನ್ನು ನೀಡುವ ಮೂಲಗಳನ್ನು ಬಹಿರಂಗಪಡಿಸದೇ ಇರುವುದರಿಂದ ಬೇಹುಗಾರಿಕಾ ದಳಗಳು ಮತ್ತು ಎದುರಾಳಿ ಸಂಸ್ಥೆಗಳಿಂದ ಅವುಗಳನ್ನು ರಕ್ಷಿಸಲು ಸಾಧ್ಯವಾಗುತ್ತದೆ. ಹಾಗಾಗಿ ನಾವು ನಮಗೆ ಸೋರಿಕೆಯಾಗುವ ಮಾಹಿತಿಗಳ ಮೂಲವನ್ನು ಬಹಿರಂಗಪಡಿಸುವುದಿಲ್ಲ ಅಥವಾ ಅದು ಸ್ವತಃ ನಮಗೇ ತಿಳಿದಿರುವುದಿಲ್ಲ ಎಂದು ಅವರು ವಿವರಣೆ ನೀಡಿದರು.

ಲಂಡನ್‌ನ 'ಫ್ರಂಟ್‌ಲೈನ್ ಕ್ಲಬ್'ನಲ್ಲಿ ಮಾತನಾಡುತ್ತಿದ್ದ ಅವರು, ನಮ್ಮಲ್ಲಿ ಯಾವುದೇ ರಹಸ್ಯಗಳು ದಾಖಲಾಗದಂತೆ, ದಾಖಲೆಗಳನ್ನು ನೀಡುವ ಮೂಲದ ಬಗ್ಗೆ ಸ್ವತಃ ನಮಗೇ ತಿಳಿಯದಂತೆ ಸಂಪೂರ್ಣ ವ್ಯವಸ್ಥೆಯನ್ನು ನಾವು ರೂಪಿಸಿದ್ದೇವೆ ಎಂದರು.

ಅಫಘಾನಿಸ್ತಾನ ಕುರಿತು ಪಾಕಿಸ್ತಾನದ ಡಬ್ಬಲ್ ಗೇಮ್ ಸೇರಿದಂತೆ ಅಮೆರಿಕಾ ಕಾರ್ಯತಂತ್ರಗಳನ್ನೊಳಗೊಂಡ 90,000 ರಹಸ್ಯ ಮಿಲಿಟರಿ ದಾಖಲೆಗಳು 'ವೀಕಿಲೀಕ್' ವೆಬ್‌ಸೈಟ್ ಮೂಲಕ ಇತ್ತೀಚೆಗಷ್ಟೇ ಬಹಿರಂಗವಾಗಿತ್ತು.

ಅಮೆರಿಕಾ ಅಧಿಕಾರಿಗಳ ಪ್ರಕಾರ ಭಾರೀ ಪ್ರಮಾಣದ ದಾಖಲೆಗಳು ಬಹಿರಂಗವಾಗಿರುವುದರಿಂದ ಅಫಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿರುವ ಅಮೆರಿಕಾದ ಪ್ರತಿನಿಧಿಗಳಿಗೆ ಇದರಿಂದ ಭಾರೀ ಅಪಾಯವಾಗುವ ಸಾಧ್ಯತೆಗಳಿವೆ.
ಸಂಬಂಧಿತ ಮಾಹಿತಿ ಹುಡುಕಿ