ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 2050ರಲ್ಲಿ ಭಾರತದ ಜನಸಂಖ್ಯೆ 170 ಕೋಟಿಯಾಗತ್ತೆ! (India | US experts | population of india | China)
Bookmark and Share Feedback Print
 
2025ರ ಹೊತ್ತಿಗೆ ವಿಶ್ವದ ಜನಸಂಖ್ಯೆ 800 ಕೋಟಿಯನ್ನು ತಲುಪಲಿದೆ ಮತ್ತು ನಂತರದ 40 ವರ್ಷಗಳಲ್ಲಿ ಇದು 940 ಕೋಟಿಯನ್ನು ಮುಟ್ಟಲಿದೆ. 2050ಕ್ಕಾಗುವಾಗ ಭಾರತದ ಜನಸಂಖ್ಯೆ 170 ಕೋಟಿಯನ್ನು ತಲುಪಲಿದೆ ಎಂದು ಅಮೆರಿಕಾದ ತಜ್ಞರು ಹೇಳಿದ್ದಾರೆ.

ಪ್ರಸಕ್ತ ವಿಶ್ವದ ಜನಸಂಖ್ಯೆ 680 ಕೋಟಿ. ಇದರಲ್ಲಿ ಚೀನಾ ಅತೀ ಹೆಚ್ಚು ಜನಸಂಖ್ಯೆ 130 ಕೋಟಿಯನ್ನು ಹೊಂದಿದ್ದರೆ, ನಂತರದ ಸ್ಥಾನದಲ್ಲಿ ಭಾರತ 120 ಕೋಟಿ ಜನಸಂಖ್ಯೆಯನ್ನು ದಾಖಲಿಸಿದೆ.

ಅಮೆರಿಕಾ ಜನಸಂಖ್ಯಾ ವಿಭಾಗದ ಪ್ರಕಾರ ಆಫ್ರಿಕಾದ ಜನಸಂಖ್ಯೆ ಶೀಘ್ರದಲ್ಲೇ ಭಾರೀ ಏರಿಕೆ ಕಾಣಲಿದೆ. ಈ ಖಂಡದ ಜನಸಂಖ್ಯೆ 2050ರ ಹೊತ್ತಿಗೆ 210 ಕೋಟಿಗೆ ತಲುಪಲಿದೆ ಎಂದು ಅವರು ಅಂದಾಜಿಸಿದ್ದಾರೆ.

ಏಷಿಯಾ ಪ್ರಸಕ್ತ ಹೊಂದಿರುವ ಜನಸಂಖ್ಯೆ 420 ಕೋಟಿ. ಆದರೆ 2050ರ ಹೊತ್ತಿಗೆ ಇದಕ್ಕೆ 130 ಕೋಟಿ ಸೇರ್ಪಡೆಯಾಗಲಿದೆ. ಆದರೆ ಇವೆಲ್ಲವೂ ಭಾರತ ಮತ್ತು ಚೀನಾದ ಜನಸಂಖ್ಯಾ ಅಂದಾಜುಗಳನ್ನು ಆಧರಿಸಿದೆ ಎಂದು ಅಮೆರಿಕಾ ತಿಳಿಸಿದೆ.

ಕಡಿಮೆ ಜನನ ಪ್ರಮಾಣದಿಂದ ಜನಸಂಖ್ಯೆಯಲ್ಲಿ ಸುದೀರ್ಘಾವಧಿ ಕುಸಿತ ಕಾಣುವ ಮೊದಲ ಖಂಡ ಯೂರೋಪ್ ಎನಿಸಿಕೊಳ್ಳುವ ಎಲ್ಲಾ ಸಾಧ್ಯತೆಗಳಿವೆ. ಪ್ರಸಕ್ತ ಈ ಪ್ರಾಂತ್ಯವು 738 ಮಿಲಿಯನ್ ಜನಸಂಖ್ಯೆಯನ್ನು ಹೊಂದಿದ್ದು, 2050ರ ಹೊತ್ತಿಗೆ ಇದು 702 ಮಿಲಿಯನ್‌ಗೆ ಸೀಮಿತವಾಗಲಿದೆ.

ಅದೇ ಹೊತ್ತಿಗೆ ರಷ್ಯಾದ ಜನಸಂಖ್ಯೆ 2050ರ ಹೊತ್ತಿಗೆ 117 ಮಿಲಿಯನ್‌ಗೆ ಕುಸಿಯಲಿದೆ. ಪ್ರಸಕ್ತ ಅದು ಹೊಂದಿರುವ ಜನಸಂಖ್ಯಾ ಮಟ್ಟ 142 ಮಿಲಿಯನ್.

ಆದರೆ ಅಮೆರಿಕಾ ಜನಸಂಖ್ಯೆ ಪ್ರಸಕ್ತ ಹೊಂದಿರುವ 310 ಮಿಲಿಯನ್‌ನಿಂದ 2050ರ ಹೊತ್ತಿಗೆ 399 ಮಿಲಿಯನ್‌ವರೆಗೆ ಅಥವಾ 458 ಮಿಲಿಯನ್‌ವರೆಗೆ ಏರಿಕೆ ಕಾಣುವ ಸಾಧ್ಯತೆಗಳಿವೆ. ಆದರೆ ಇದೆಲ್ಲ ವಲಸೆಯನ್ನು ಆಧರಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಭಾರತ, ಅಮೆರಿಕಾ, ಚೀನಾ, ಜನಸಂಖ್ಯೆ