ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮಿತ್ರ ಪಡೆ ಪಾಕ್ ಉಗ್ರರನ್ನು ಯಾಕೆ ಮಟ್ಟ ಹಾಕುತ್ತಿಲ್ಲ:ಅಫ್ಘಾನ್ (Pakistan | Hamid Karzai | Afghan | Taliban | terrorism)
Bookmark and Share Feedback Print
 
ಅಫ್ಘಾನಿಸ್ತಾನದಲ್ಲಿ ಅಟ್ಟಹಾಸಗೈಯುತ್ತಿರುವ ತಾಲಿಬಾನ್ ಉಗ್ರರ ವಿರುದ್ಧ ಕಿಡಿಕಾರಿರುವ ಅಧ್ಯಕ್ಷ ಹಮೀದ್ ಕರ್ಜಾಯ್, ಪಾಕಿಸ್ತಾನದಲ್ಲಿರುವ ತಾಲಿಬಾನ್ ನೆಲೆಗಳ ಮೇಲೆ ಮಿತ್ರ ರಾಷ್ಟ್ರದ ಮಿಲಿಟರಿ ಪಡೆಗಳು ಯಾಕೆ ದಾಳಿ ನಡೆಸುತ್ತಿಲ್ಲ ಎಂದು ಪ್ರಶಿಸಿದ್ದು, ಅದಕ್ಕೆ ಇಚ್ಛಾಶಕ್ತಿ ಬೇಕಾಗಿದೆ ಎಂದು ತಿಳಿಸಿದ್ದಾರೆ.

ಭಯೋತ್ಪಾದನೆ ವಿರುದ್ಧದ ಹೋರಾಟ ಕೇವಲ ಗ್ರಾಮ ಮತ್ತು ಮನೆಗಳಿಗೆ ಮಾತ್ರ ಸೀಮಿತವಾಗಿಲ್ಲ, ಅದೊಂದು ಪವಿತ್ರ ಕೆಲಸವಾಗಿದೆ. ಭಯೋತ್ಪಾದನೆಗೆ ಆರ್ಥಿಕ ನೆರವು ಮತ್ತು ತರಬೇತಿ ನೀಡುವುದು ಎಲ್ಲರಿಗೂ ತಿಳಿದ ವಿಚಾರವೇ. ಆದರೂ ಎಲ್ಲೆಡೆ ಸುಳ್ಳೇ ಪ್ರಚಾರ ಮಾಡಲಾಗುತ್ತಿದೆ ಎಂದು ಹಮೀದ್ ಕರ್ಜಾಯ್ ಪಾಕ್ ವಿರುದ್ಧ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದರು.

ಭಯೋತ್ಪಾದನೆಯನ್ನು ಮಟ್ಟ ಹಾಕಲು ಅಫ್ಘಾನಿಸ್ತಾನ ಸಾಮರ್ಥ್ಯ ಹೊಂದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ್ದ ಅವರು, ತಾಲಿಬಾನ್ ಸಂಘಟನೆಗೆ ಪಾಕಿಸ್ತಾನ ಬೆಂಬಲ ನೀಡುತ್ತಿದೆ. ಆದರೂ ಈ ವಿಷಯವನ್ನು ಯಾಕೆ ಅನಾವಶ್ಯಕವಾಗಿ ಎಳೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆದರೆ ಉಗ್ರರನ್ನು ಮಟ್ಟ ಹಾಕಲು ನಮ್ಮ ಮೈತ್ರಿಕೂಟದ ಮಿತ್ರ ಪಡೆಗಳು ಸಮರ್ಥವಾಗಿವೆ. ವಿಪರ್ಯಾಸವೆಂದರೆ, ಆದರೂ ಅವು ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದೇ ಪ್ರಶ್ನೆಯಾಗಿದೆ ಎಂದರು. ಅಫ್ಘಾನಿಸ್ತಾನದಲ್ಲಿರುವ ತಾಲಿಬಾನ್ ಉಗ್ರರಿಗೆ ಪಾಕಿಸ್ತಾನ ನೆರವು ನೀಡುತ್ತಿದೆ ಎಂಬುದು ವಿಕಿಲೀಕ್ಸ್ ವರದಿಯಿಂದ ಜಗಜ್ಜಾಹೀರಾಗಿದೆ. ಇದರಲ್ಲಿ ಪಾಕ್ ಮತ್ತು ಐಎಸ್ಐ ಸಂಬಂಧ ಕೂಡ ಬಯಲುಗೊಂಡಿದೆ.

ವಿಕಿಲೀಕ್ಸ್ ವರದಿ ಬಹಿರಂಗಗೊಂಡ ಬೆನ್ನಲ್ಲೇ, ಕಳೆದ ಒಂಬತ್ತು ವರ್ಷಗಳಿಂದ ಉಗ್ರರ ವಿರುದ್ಧ ಸಮರ ಸಾರಿರುವ ಅಮೆರಿಕಕ್ಕೆ ಪಾಕಿಸ್ತಾನದಲ್ಲಿರುವ ಉಗ್ರರ ಅಡಗು ತಾಣಗಳ ಮೇಲೆ ದಾಳಿ ನಡೆಸಲು ಯಶಸ್ವಿಯಾಗಿಲ್ಲ ಎಂದು ಅಫ್ಘಾನಿಸ್ತಾನ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್ ಪ್ರತಿಕ್ರಿಯೆ ವ್ಯಕ್ತಪಡಿಸಿದೆ.

ಬಹಿರಂಗಗೊಂಡಿರುವ ವಿಕಿಲೀಕ್ಸ್ ವರದಿಯಲ್ಲಿ, ಅಫ್ಘಾನಿಸ್ತಾನದಲ್ಲಿ ಸಂಭವಿಸಿರುವ ದಾಳಿಯ ಸಂಚಿನ ಹಿಂದೆ ಐಎಸ್ಐ ಮಾಜಿ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡಿರುವುದು ಬಯಲಾಗಿದೆ. ಆದರೂ ವಿದೇಶಿ ರಾಷ್ಟ್ರಗಳೂ ಕೂಡ ಉಗ್ರರ ಅಡಗು ತಾಣಗಳ ಮೇಲೆ ದಾಳಿ ನಡೆಸಲು ಹಿಂದೇಟು ಹಾಕುತ್ತಿರುವುದು ಯಾಕೆ ಎಂದು ಹಮೀದ್ ಕರ್ಜಾಯ್ ಗಂಭೀರವಾಗಿ ಪ್ರಶ್ನಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ