ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪೇಶಾವರ: ವರುಣನ ಆರ್ಭಟ, ಪ್ರವಾಹಕ್ಕೆ 50 ಬಲಿ (Heavy monsoon | Peshawar | Pakistan | army | floods)
Bookmark and Share Feedback Print
 
ಪಾಕಿಸ್ತಾನ ವಾಯುವ್ಯ ಪ್ರದೇಶದ ಕೈಬೆರ್-ಪುಕ್ತುನ್‌ಕ್ವಾವಾದಲ್ಲಿ ಧಾರಾಕಾರವಾಗಿ ಸುರಿದ ಮಳೆ ಮತ್ತು ಪ್ರವಾಹದಿಂದಾಗಿ ಸುಮಾರು 50 ಜನರು ಸಾವನ್ನಪ್ಪಿದ್ದು, ಹಲವಾರು ಮನೆ, ಬೆಳೆಗಳು ಹಾನಿಗೊಳಗಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರವಾಹ ಪೀಡಿತ ಪ್ರದೇಶಕ್ಕೆ ಎರಡು ಆರ್ಮಿ ಬೆಟಾಲಿಯನ್ ತೆರಳಿದ್ದು, ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುತ್ತಿರುವುದಾಗಿ ಮಿಲಿಟರಿ ವಕ್ತಾರ ಪಿಟಿಐಗೆ ವಿವರಿಸಿದ್ದಾರೆ.

ಪೇಶಾವರದಾದ್ಯಂತ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಲಕ್ಷಾಂತರ ಹೆಕ್ಟೇರ್ ಬೆಳೆ ನಾಶವಾಗಿದೆ. ಸೋಮವಾರದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹಲವು ಗ್ರಾಮಗಳು ಪ್ರವಾಹದಿಂತ ತತ್ತರಿಸಿದೆ. ಇದರಲ್ಲಿ ಶಾಂಗಾಲಾ, ಸ್ವಾತ್ ಮತ್ತು ಕೋಹಟ್ ಜಿಲ್ಲೆ ಸೇರಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರವಾಹದಿಂದ ಮನೆ ಕುಸಿತ ಉಂಟಾಗಿ ಸುಮಾರು ಐವತ್ತು ಮಂದಿ ಸಾವನ್ನಪ್ಪಿದ್ದಾರೆ. ಸಾಕಷ್ಟು ಭೂಕುಸಿತ ಕೂಡ ಉಂಟಾಗಿದೆ. ಶಾಂಗಾಲಾ ಜಿಲ್ಲೆಯೊಂದರಲ್ಲೇ 21 ಮಂದಿ ಬಲಿಯಾಗಿದ್ದಾರೆ. ಧೇರೈ ಗ್ರಾಮದಲ್ಲಿ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ