ಮಕ್ಕಳಿಗೆ ವಿಷ ಕುಡಿಸಿ ಆತ್ಮಹತ್ಯೆ ಮಾಡಿಕೊಳ್ಳುವ ತಾಯಿ, ತಂದೆ, ಮಕ್ಕಳೊಂದಿಗೆ ಬಾವಿಗೆ ಹಾರಿ ಸಾವನ್ನಪ್ಪುವ ಘಟನೆ ನಡೆಯುತ್ತಿರುವುದು ಸಾಮಾನ್ಯ, ಆದರೆ ತಾನೇ ಹೆತ್ತ ಎಂಟು ನವಜಾತ ಶಿಶುಗಳನ್ನು ಹತ್ಯೆಗೈದಿರುವ ಪಾತಕಿ ತಾಯಿ, ಕೊನೆಗೂ ತನ್ನ ತಪ್ಪನ್ನು ಒಪ್ಪಿಕೊಂಡಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಡೋಮಿನಿಖ್ ಕೋಟ್ರೆಜ್ (45) ಎಂಬಾಕೆ ಜನ್ಮತಳೆದ ಎಂಟು ಶಿಶುಗಳನ್ನು ಪ್ಲ್ಯಾಸ್ಟಿಕ್ ಚೀಲದೊಳಗೆ ಹಾಕಿ ಮನೆಯ ಗಾರ್ಡನ್ ಹಾಗೂ ಗ್ಯಾರೇಜ್‌ನಲ್ಲಿ ಅಡಗಿಸಿಟ್ಟಿರುವುದನ್ನು ಪೊಲೀಸರು ಪತ್ತೆ ಹಚ್ಚಿದ ನಂತರ, ಇದೀಗ ಆಕೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆಕೆಗೆ ಮಕ್ಕಳಾಗುವುದು ಇಷ್ಟವಿರಲಿಲ್ಲ, ಹಾಗಾಗಿ ಆಕೆ ಜನ್ಮತಳೆದ ನವಜಾತ ಶಿಶುಗಳನ್ನು ಪ್ಲ್ಯಾಸ್ಟಿಕ್ ಚೀಲದೊಳಗೆ ಹಾಕಿ ಹತ್ಯೆಗೈದಿರುವುದಾಗಿ ಆಕೆಯ ವಕೀಲರಾದ ಫ್ರಾಂಕ್ ಬೆರ್‌ಟೋನ್ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ಆದರೆ ಆಕೆಯ ಎಳೆಯ ಹಸುಗೂಸುಗಳನ್ನು ಅಮಾನವೀಯವಾಗಿ ಹತ್ಯೆಗೈದಿರುವ ಪ್ರಕರಣದಲ್ಲಿ ಆಕೆಯೇ ಸಂಪೂರ್ಣವಾಗಿ ಜವಾಬ್ದಾರಳೇ ಎಂಬ ಬಗ್ಗೆ ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಕೋಟ್ರೆಜ್‌ಳನ್ನು ಮಾನಸಿಕ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ವಿವರಿಸಿದ್ದಾರೆ. ಅಲ್ಲದೆ, ತಾನು ಮಾಡಿರುವ ಅಪರಾಧದ ಬಗ್ಗೆ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿರುವುದಾಗಿ ಹೇಳಿದರು.
ಎರಡು ಮಕ್ಕಳ ಶವಗಳನ್ನು ಹೊಸ ಮಾಲೀಕರ ಮನೆಯ ಗಾರ್ಡ್‌ನಲ್ಲಿ ಹಾಗೂ ಉಳಿದ ಆರು ಶಿಶುಗಳ ಶವ ಪ್ಲ್ಯಾಸ್ಟಿಕ್ ಬ್ಯಾಗ್‌ನಲ್ಲಿ ಹಾಕಿ ಮನೆಯ ಗಾರ್ಡ್‌ನಲ್ಲಿ ಇಟ್ಟಿರುವುದಾಗಿ ಕೋಟ್ರೆಜ್ ತನಿಖಾಧಿಕಾರಿಗಳ ಮುಂದೆ ಬಾಯ್ಬಿಟ್ಟಿದ್ದಾಳೆ.