ಇಲ್ಲಿನ ಖಾಸಗಿ ಟೆಲಿವಿಷನ್ ಸ್ಟೇಷನ್ ಮೇಲೆ ದಾಳಿ ನಡೆಸಿದ ಸುಮಾರು 12 ಮಂದಿ ಅಪರಿಚಿತರ ತಂಡವೊಂದು ಸ್ಟುಡಿಯೋ ಒಳಗೆ ಬೆಂಕಿ ಹಚ್ಚಿದ ಪರಿಣಾಮ ಪೀಠೋಪಕರಣ, ಕಂಪ್ಯೂಟರ್‌ಗಳೆಲ್ಲ ಬೆಂಕಿಗೆ ಆಹುತಿಯಾಗಿರುವ ಘಟನೆ ಶುಕ್ರವಾರ ನಡೆದಿದೆ.
ಆಗಂತುಕರ ಗುಂಪು ಸಿಯಾಂಫ್ ಟೆಲಿವಿಷನ್ ಸ್ಟುಡಿಯೋಕ್ಕೆ ನುಗ್ಗಿ ದಾಂಧಲೆ ನಡೆಸಿದ ನಂತರ ಪೆಟ್ರೋಲ್ ಬಾಂಬ್ ಸ್ಫೋಟಿಸಿದ ಪರಿಣಾಮ ನ್ಯೂಸ್ ರೂಂ ಒಳಗಿನ ಸಾಮಗ್ರಿಗಳು ಸುಟ್ಟು ಭಸ್ಮವಾಗಿವೆ ಎಂದು ಸಿಯಾಂಫ್ ರೇಡಿಯೋ ಮತ್ತು ಟಿವಿ ಚಾನೆಲ್ ಸಂಪಾದಕ ಜೊಯ್ ಬೆನ್ಸೆ ತಿಳಿಸಿದ್ದಾರೆ.
ಅಪರಿಚಿತ ವ್ಯಕ್ತಿಗಳು ಏಕಾಏಕಿಯಾಗಿ ನಡೆಸಿದ ದಾಳಿಯಿಂದಾಗಿ ವರದಿಗಾರರಾದ ಲೆನಿನ್ ರಾಜ್ ಮತ್ತು ರಜನಿಕಾಂತನ್ ಗಾಯಗೊಂಡಿದ್ದಾರೆ ಎಂದು ಬೆನ್ಸೆ ತಿಳಿಸಿದ್ದು, ಅದರಲ್ಲಿ ಒಬ್ಬನ ತಲೆಗೆ ಗಂಭೀರವಾದ ಗಾಯಗಳಾಗಿದೆ ಎಂದು ವಿವರಿಸಿದ್ದಾರೆ.
ಘಟನೆ ಕುರಿತಂತೆ ತನಿಖೆ ನಡೆಸಲು ಮೂರು ಸದಸ್ಯರ ಸಮಿತಿಯೊಂದನ್ನು ರಚಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪರಿಸ್ಥಿತಿ ಈಗ ಹತೋಟಿಯಲ್ಲಿದ್ದು, ಘಟನೆಯನ್ನು ಇಲಾಖೆ ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.ಸಿಯಾಂಫ್ ಸಂಸ್ಥೆ ತಮಿಳ್ ವೆಟ್ರಿ ಎಫ್‌ಎಂ ರೇಡಿಯೋ ಸಂಸ್ಥೆಯನ್ನೂ ನಡೆಸುತ್ತಿದೆ.