ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಉದ್ಯೋಗಿ ಬ್ರಿಟನ್ ಸ್ತ್ರೀ ತುಂಡು ಲಂಗ ಧರಿಸುವಂತಿಲ್ಲ (Brit women | wearing mini-skirts | Southampton City Council | England)
Bookmark and Share Feedback Print
 
ಮಕ್ಕಳು ಮತ್ತು ಕೌಟುಂಬಿಕ ಮೌಲ್ಯಗಳನ್ನು ಗೌರವಿಸುವ ನಿಟ್ಟಿನಲ್ಲಿ ಗ್ರಾಹಕರನ್ನು ಮುಖಾಮುಖಿಯಾಗುವ ಪಾತ್ರಗಳನ್ನು ಹೊಂದಿರುವ ಮಹಿಳಾ ಉದ್ಯೋಗಿಗಳು ಕಚೇರಿಯಲ್ಲಿ ಮಿನಿ-ಸ್ಕರ್ಟ್‌ಗಳನ್ನು ಧರಿಸುವ ಮೇಲೆ ಇಂಗ್ಲೆಂಡ್ ನಿಷೇಧ ಹೇರಿದೆ.

ಸೌತಂಪ್ಟನ್ ಸಿಟಿ ಕೌನ್ಸಿಲ್‌ನ ಮಕ್ಕಳ ಸೇವಾ ವಿಭಾಗದ ಸುಮಾರು 400 ಸಿಬ್ಬಂದಿಗಳಿಗೆ ಈ ಸಂಬಂಧ ನೋಟೀಸ್ ನೀಡಲಾಗಿದೆ. ಸಿಬ್ಬಂದಿಗಳು ತಮ್ಮ ಕೆಲಸದ ವಾತಾವರಣಕ್ಕೆ ಹೊಂದಿಕೊಳ್ಳುವ ಗೌರವಪೂರ್ವಕ ದಿರಿಸುಗಳನ್ನು ಮಾತ್ರ ಧರಿಸಬೇಕು ಎಂದು ಸೂಚನೆ ನೀಡಲಾಗಿದೆ ಎಂದು 'ಡೈಲಿ ಮೇಲ್' ಪತ್ರಿಕೆ ವರದಿ ಮಾಡಿದೆ.

ತುಂಡು ಲಂಗಗಳನ್ನು ಧರಿಸುವ ಮಹಿಳಾ ಉದ್ಯೋಗಿಗಳನ್ನು ಮನೆಗೆ ಕಳುಹಿಸಬೇಕು. ಪುರುಷರು ಕೂಡ ಕಾಲರ್ ಇರುವ ಅಂಗಿಗಳನ್ನು, ಕಾಟನ್ ಟ್ರಸರ್‌ಗಳನ್ನು ಧರಿಸಬೇಕು ಎಂದು ಕೌನ್ಸಿಲ್ ಆದೇಶ ನೀಡಿದೆ.

ಮಹಿಳೆಯರು ಟ್ರಸರುಗಳು, ಸಾಮಾನ್ಯ ದಿರಿಸುಗಳು ಮತ್ತು ಸಾಕಷ್ಟು ಉದ್ದವಿರುವ ಸ್ಕರ್ಟುಗಳನ್ನು ಧರಿಸಬಹುದು. ಆದರೆ ಮಿನಿ ಸ್ಕರ್ಟುಗಳನ್ನು ಧರಿಸಲು ಅವಕಾಶವಿಲ್ಲ ಎಂದು ಕೌನ್ಸಿಲ್ ತಿಳಿಸಿದೆ.

ದಯವಿಟ್ಟು ಇತರೆಡೆ ಉದ್ಯೋಗಿಗಳು ದೈನಂದಿನ ಕಾರ್ಯದಲ್ಲಿ ಬಳಸುವ ಸಭ್ಯ ಮತ್ತು ಪರಹಿತ ಚಿಂತನೆಯ ಬಟ್ಟೆಗಳನ್ನು ಧರಿಸಿ. ಆ ಮೂಲಕ ಮಕ್ಕಳು ಮತ್ತು ಕುಟುಂಬಗಳನ್ನು ಗೌರವಿಸಿ ಎಂದು ಸೂಚನೆ ನೀಡಲಾಗಿದೆ.

ಅದೇ ಹೊತ್ತಿಗೆ ಈ ಆದೇಶದ ವಿರುದ್ಧ ಮಹಿಳೆಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಬಂಧಪಟ್ಟವರು ನಾವು ಧರಿಸುವ ಬಟ್ಟೆಗಳನ್ನು ಅಳತೆ ಮಾಡಿ ನೋಡುತ್ತಾರೆಯೇ? ಇದು ಸರಿಯಲ್ಲ ಎಂದು ಉದ್ಯೋಗಸ್ಥ ಮಹಿಳೆಯರು ಪ್ರತಿಕ್ರಿಯಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ