ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್ ಮೊದ್ಲು 'ಡಬ್ಬಲ್ ಗೇಮ್' ಕೈಬಿಡಬೇಕು: ಡೈಲಿ ಟೈಮ್ಸ್ (Pakistan | India | editorial | Daily Times | terrorists | Balochistan,)
ಭಯೋತ್ಪಾದನೆ ಕುರಿತಂತೆ ಪಾಕಿಸ್ತಾನ ಇನ್ಮುಂದೆ ಭಾರತ ಸೇರಿದಂತೆ ಯಾವುದೇ ವಿದೇಶದ ಕೈವಾಡ ಎಂಬ ಆರೋಪವನ್ನು ಮೊದಲು ಕೈಬಿಡಬೇಕು. ಅಲ್ಲದೇ ದೇಶದ ನೆಲದಲ್ಲಿಯೇ ಠಿಕಾಣಿ ಹೂಡಿ ಅಟ್ಟಹಾಸಗೈಯುತ್ತಿರುವ ಉಗ್ರರನ್ನು ಮಟ್ಟಹಾಕಲು ಮುಂದಾಗಬೇಕು ಎಂದು ಪಾಕಿಸ್ತಾನದ ಪ್ರಮುಖ ದೈನಿಕವೊಂದರ ಸಂಪಾದಕೀಯದಲ್ಲಿ ತಿಳಿಸಲಾಗಿದೆ.
ಪಾಕಿಸ್ತಾನದ ದ್ವಿಮುಖ ನೀತಿಯನ್ನು ಖಂಡಿಸಿರುವ ದಿ ಡೈಲಿ ಟೈಮ್ಸ್ ಸಂಪಾದಕೀಯದಲ್ಲಿ, ಪಾಕಿಸ್ತಾನದ ಬುಡಕಟ್ಟು ಪ್ರದೇಶದಲ್ಲಿಯೇ ಉಗ್ರರು ಠಿಕಾಣಿ ಹೂಡಿ, ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಒಪ್ಪಿಕೊಂಡಿದೆ. ಅಲ್ಲದೇ, ದೇಶ ಹಾಗೂ ನೆರೆಯ ದೇಶಗಳಲ್ಲಿ ಭಯೋತ್ಪಾದನಾ ಕೃತ್ಯ ಎಸಗುತ್ತಿರುವುದಾಗಿ ಹೇಳಿದೆ.
ಭಯೋತ್ಪಾದನೆ ಸೇರಿದಂತೆ ಪ್ರತಿಯೊಂದಕ್ಕೂ ವಿದೇಶಿ ಶಕ್ತಿಗಳ ಕೈವಾಡ ಎಂಬ ಹಳೆಯ ಡೈಲಾಗ್ ಅನ್ನೇ ಪಾಕಿಸ್ತಾನ ಪುನರುಚ್ಚರಿಸುವುದರಲ್ಲಿ ಯಾವುದೇ ಅರ್ಥ ಇಲ್ಲ. ಕಳೆದ ಕೆಲವು ವರ್ಷಗಳಿಂದ ಉಗ್ರರು ಪಾಕಿಸ್ತಾನದಲ್ಲಿಯೇ ಠಿಕಾಣಿ ಹೂಡಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಅನಾವಶ್ಯಕವಾಗಿ ಭಾರತ ಸೇರಿದಂತೆ ವಿದೇಶಗಳತ್ತ ಪಾಕ್ ಬೊಟ್ಟು ಮಾಡುತ್ತಿದೆ ಎಂದು ಸಂಪಾದಕೀಯದಲ್ಲಿ ದೂರಲಾಗಿದೆ.
ಅದೇ ರೀತಿ ಅಫ್ಘಾನಿಸ್ತಾನದ ಬಲೂಚಿಸ್ತಾನದ ಬಗ್ಗೆಯೂ ಕೂಡ ಪಾಕಿಸ್ತಾನ ಕಳೆದ ಆರು ದಶಕಗಳಿಂದ ನೆರವು, ಉಗ್ರರ ನಿರ್ಮಾಮ ಅಂತ ಬೊಗಳೆ ಬಿಡುತ್ತಲೇ ಇದೆ. ಪಾಕಿಸ್ತಾನ ಪ್ರತಿ ಬಾರಿಯೂ ರಾಷ್ಟ್ರೀಯ ಭಾವನೆ ಉದ್ದೀಪನದ ಹೇಳಿಕೆ ನೀಡುತ್ತದೆ. ಆದರೆ ಉಗ್ರರನ್ನು ಮಟ್ಟಹಾಕುವುದಾಗಲಿ, ಅಫ್ಘಾನ್ ಅಭಿವೃದ್ದಿ ಬಗ್ಗೆ ಪಾಕಿಸ್ತಾನ ಭವಿಷ್ಯದ ದೃಷ್ಟಿಕೋನ ಇಟ್ಟುಕೊಂಡು ಯಾವುದೇ ಕಾರ್ಯ ಮಾಡಿಲ್ಲ ಎಂದು ಸಂಪಾದಕೀಯದಲ್ಲಿ ತರಾಟೆಗೆ ತೆಗೆದುಕೊಳ್ಳಲಾಗಿದೆ.
ಹಾಗಾಗಿ ಬಲೂಚಿಸ್ತಾನ, ಭಯೋತ್ಪಾದನೆಯಂತಹ ವಿಷಯದಲ್ಲಿ ಪಾಕಿಸ್ತಾನದ ಆಂತರಿಕ ಸಚಿವ ರೆಹಮಾನ್ ಮಲಿಕ್ ಡಬಲ್ ಗೇಮ್ ಅನ್ನು ಮೊದಲು ಕೈಬಿಡಬೇಕು. ಭಯೋತ್ಪಾದಕರ ವಿರುದ್ಧ ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸಂಪಾದಕೀಯದಲ್ಲಿ ಸಲಹೆ ನೀಡಿದೆ.