ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸಲಿಂಗಕಾಮಿ ಎಂದಿದ್ದಕ್ಕೆ ಪ್ರಿಯತಮನನ್ನೇ ಕೊಂದಳು! (UK | boyfriend | lesbian | British woman)
Bookmark and Share Feedback Print
 
ತನ್ನನ್ನು ಸಲಿಂಗಕಾಮಿ ಎಂದು ಕರೆದುದನ್ನೇ ಮುಂದಿಟ್ಟುಕೊಂಡ ಬ್ರಿಟೀಷ್ ಯುವತಿಯೊಬ್ಬಳು ಪ್ರಿಯಕರನ ತೊಡೆ ಸಂದಿಗೆ ಇರಿದು ಕೊಂದಿರುವ ಘಟನೆ ವರದಿಯಾಗಿದೆ.

20ರ ಹರೆಯದ ಸಮಂತಾ ಬ್ರೌನ್ ಎಂಬಾಕೆಯೇ 23ರ ಹರೆಯದ ಡೀನ್ ಡಾರ್ವಿಲ್ ಎಂಬ ತನ್ನ ಪ್ರಿಯಕರನ್ನು ಕೊಂದು ಹಾಕಿರುವುದು. ಪ್ರಿಯತಮೆ ಮತ್ತೊಬ್ಬ ಯುವತಿಯ ಜತೆ ಸಲಿಂಗ ಸಂಬಂಧ ಹೊಂದಿದ್ದಾಳೆ ಎಂದು ಆರೋಪಿಸಿದ್ದಕ್ಕೆ ಪ್ರತಿಯಾಗಿ ಕೋಪಗೊಂಡ ಯುವತಿ ಇರಿದಿದ್ದಾಳೆ ಎಂದು ವರದಿಯಾಗಿದೆ.

ಇರಿತದ ನಂತರ ರಕ್ತದ ಮಡುವಿನಲ್ಲಿ ಬಿದ್ದಿದ್ದ ಡಾರ್ವಿಲ್‌ನನ್ನು ಯುವತಿಯ ಸಹೋದರಿ 25ರ ಹರೆಯ ಟೋನಿ ಎಂಬಾಕೆ ಆಂಬುಲೆನ್ಸ್ ಕರೆಸಿ ಆಸ್ಪತ್ರೆಗೆ ಸೇರಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ತೀವ್ರ ರಕ್ತಸ್ರಾವದಿಂದ ಆತ ಸಾವನ್ನಪ್ಪಿದ್ದಾನೆ.

ಪ್ರಕರಣದ ವಿಚಾರಣೆ ನಡೆಸಿದ ಇಲ್ಲಿನ ನ್ಯಾಯಾಲಯವೊಂದು ಪ್ರಿಯತಮನಿಗೆ ಇರಿದ ಸಮಂತಾಳಿಗೆ ಐದು ವರ್ಷಗಳ ಶಿಕ್ಷೆ ನೀಡಿದರೆ, ನಿರ್ಲಕ್ಷ್ಯಕ್ಕಾಗಿ ಆಕೆಯ ಸಹೋದರಿ ಟೋನಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

ಡಾರ್ವಿಲ್ ಆರೋಪ ಮಾಡುತ್ತಿದ್ದಂತೆ ಕುಪಿತಗೊಂಡಿದ್ದ ಸಮಂತಾ ಚೂರಿಯೊಂದನ್ನು ತೆಗೆದುಕೊಂಡು ಇರಿದಿದ್ದಳು. ಈ ಹೊತ್ತಿನಲ್ಲಿ ನೆಲಕ್ಕೆ ಬಿದ್ದು ಒದ್ದಾಡುತ್ತಿದ್ದ ಡಾರ್ವಿಲ್ ಆಂಬಲೆನ್ಸ್ ತರಿಸುವಂತೆ ಟೋನಿಗೆ ಹೇಳಿದ್ದ. ಆದರೆ ಟೋನಿ ಇದಕ್ಕೆ ನಿರಾಕರಿಸಿದ್ದಳು.

ಆಗ ಮತ್ತೊಬ್ಬ ಯುವತಿ ಆಂಬುಲೆನ್ಸ್ ಕರೆಸಲು ಯತ್ನಿಸಿದ್ದಳಾದರೂ, ಆಕೆಗೆ ಟೋನಿ ಥಳಿಸಿದ್ದಳು. ಕರೆ ಮಾಡಲೂ ಬಿಟ್ಟಿರಲಿಲ್ಲ.

ತುಂಬಾ ಹೊತ್ತಾದ ನಂತರ ಆಂಬುಲೆನ್ಸ್‌ಗೆ ಟೋನಿ ಕರೆ ಮಾಡಿದ್ದಳು. ಆದರೆ ಆ ಹೊತ್ತಿಗೆ ಡಾರ್ವಿಲ್ ಸಾವನ್ನಪ್ಪಿದ್ದ.
ಸಂಬಂಧಿತ ಮಾಹಿತಿ ಹುಡುಕಿ