ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಮಿಗ್ರೇಷನ್ ಇಲಾಖೆಯ ಅಧಿಕಾರಿಗಳು 20 ಮಂದಿ ಅಫ್ಘಾನಿಸ್ತಾನ ಪ್ರಜೆಗಳನ್ನು ಸೆರೆ ಹಿಡಿದು ಜೈಲಿನಲ್ಲಿಟ್ಟಿದ್ದು, ಅವರೆಲ್ಲ ಪರಾರಿಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಜೈಲಿನಿಂದ 20 ಅಫ್ಘಾನಿಯರು ಪರಾರಿಯಾಗಿರುವ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಉಪ ಪ್ರಧಾನಿ ಮುಯಿದ್ದೀನ್ ಯಾಸಿನ್ ಪೊಲೀಸರ ಬೇಜಬ್ದಾರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. 20 ಮಂದಿಯನ್ನು ಭಾನುವಾರ ಇಮಿಗ್ರೇಷನ್ ಅಧಿಕಾರಿಗಳು ಬಂಧಿಸಿದ್ದರು.
ಬಂಧಿತರು ಜೈಲಿನಿಂದ ತಪ್ಪಿಸಿಕೊಂಡು ಹೋಗುತ್ತಿರುವ ಘಟನೆ ಕಳೆದ ಎರಡು ತಿಂಗಳಿನಲ್ಲಿ ನಡೆದ ಎರಡನೇ ಘಟನೆ ಇದಾಗಿದೆ. ಜೈಲಿನಿಂದ ತಪ್ಪಿಸಿಕೊಂಡು ಹೋಗಿರುವ ಈ ಘಟನೆ ಗಂಭೀರವಾದದ್ದು. ಇದು ಮತ್ತೆ ಪುನಾರಾವರ್ತನೆ ಆಗಬಾರದು ಎಂದರು.
ಈ ಮೊದಲು ಏಪ್ರಿಲ್ 27ರಂದು 12 ಮಂದಿ ಅಫ್ಘಾನಿಸ್ತಾನಿಯರು ಹಾಗೂ ನಾಲ್ಕು ಮಯನ್ಮಾರ್ ಪ್ರಜೆಗಳು ಜೈಲಿನಿಂದ ತಪ್ಪಿಸಿಕೊಂಡು ಹೋಗಿದ್ದರು ಎಂದು ಮಾಧ್ಯಮದ ವರದಿಯೊಂದು ತಿಳಿಸಿದೆ. ಇದೀಗ ಎರಡನೇ ಬಾರಿ 20 ಮಂದಿ ಅಫ್ಘಾನಿಸ್ತಾನಿಯರು ಜೈಲಿನಿಂದ ತಪ್ಪಿಸಿಕೊಂಡು ಹೋಗಿದ್ದರು.