ಹಾಂಗ್‌ಕಾಂಗ್‌ಗೆ ಪ್ರಯಾಣಿಸುವ ಧೂಮಪಾನಿಗಳಿಗೆ ಇಲ್ಲಿನ ಸರಕಾರ ಹೊಸ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಮೂಗುದಾರ ಹಾಕಿದೆ. ಹಾಂಗ್‌ಕಾಂಗ್‌ಗೆ ಆಗಮಿಸುವ ಪ್ರಯಾಣಿಕರು ಕೇವಲ 19 ಸಿಗರೇಟ್‌ಗಳನ್ನು ಮಾತ್ರ ತರಬಹುದು ಎಂದು ತಿಳಿಸಿದೆ.
ಈ ಮೊದಲು ವಿಮಾನದಲ್ಲಿ ಹಾಂಗ್‌ಕಾಂಗ್ ಪ್ರವೇಶಿಸುವ ಪ್ರಯಾಣಿಕರಿಗೆ ಮೂರು ಸಿಗರೇಟ್ ಪ್ಯಾಕೆಟ್ ಅಥವಾ 60 ಸಿಗರೇಟ್‌ಗಳನ್ನು ಯಾವುದೇ ಸುಂಕವಿಲ್ಲದೆ ತರಲು ಅನುಮತಿ ನೀಡಿತ್ತು.
ಆದರೆ ಇದೀಗ ನೂತನ ತಂಬಾಕು ಕಾಯ್ದೆಯನ್ನು ಜಾರಿಗೆ ತಂದಿರುವ ಸಿಂಗಾಪುರ್ ಸರಕಾರ ಆಗೋಸ್ಟ್ 1ರಿಂದ ಅನ್ವಯವಾಗುವಂತೆ, ಹಾಂಗ್‌ಕಾಂಗ್‌ಗೆ ಭೇಟಿ ನೀಡುವ ಪ್ರಯಾಣಿಕರು ಕೇವಲ 19 ಸಿಗರೇಟ್ ತರಲು ಮಾತ್ರ ಅನುಮತಿ ನೀಡಿದೆ ಎಂದು ಚೀನಾ ದೈನಿಕದ ವರದಿಯೊಂದು ತಿಳಿಸಿದೆ.
ಪ್ರಯಾಣಿಕರು ಒಂದು ಪ್ಯಾಕೆಟ್ ಸಿಗರೇಟ್ ಖರೀದಿಸಿದರೆ ಅದರಲ್ಲಿ 20 ಸಿಗರೇಟ್‌ಗಳಿರುತ್ತದೆ. ಆದರೆ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ತಪಾಸಣೆಗೂ ಮುನ್ನ ಪ್ಯಾಕೆಟ್‌ನಲ್ಲಿ 19 ಸಿಗರೇಟ್‌ಗಳು ಮಾತ್ರ ಇರಬೇಕು. ಒಂದು ವೇಳೆ 20 ಸಿಗರೇಟ್ ಇದ್ದರೆ, 3.2 ಯುವಾನ್ ದಂಡ ಪಾವತಿಸಬೇಕಾಗುತ್ತದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.