ಬ್ರಿಟನ್‌ನ ಅತಿ ಕೆಟ್ಟ ಪ್ರಧಾನಿ ಗೋರ್ಡನ್ ಬ್ರೌನ್!: ಸಮೀಕ್ಷೆ
ಲಂಡನ್, ಮಂಗಳವಾರ, 3 ಆಗಸ್ಟ್ 2010( 15:36 IST )
PTI
ಎರಡನೇ ಜಾಗತಿಕ ಯುದ್ಧದ ನಂತರದ ಅತಿ ಕೆಟ್ಟ ಪ್ರಧಾನಿಮಂತ್ರಿ ಯಾರೆಂದರೆ, ಅದು ಬ್ರಿಟನ್‌ನ ಗೋರ್ಡನ್ ಬ್ರೌನ್ ಎಂಬುದಾಗಿ ಹೊಸ ಸಮೀಕ್ಷೆಯೊಂದು ತಿಳಿಸಿದೆ.
ರಾಜಕೀಯ ಶಿಕ್ಷಣದ ತಜ್ಞರು ಮತ್ತು ಇತಿಹಾಸಕಾರರು 1945ರ ನಂತರ ಬ್ರಿಟನ್ ಆಳಿದವರಲ್ಲಿ ಅತ್ಯಂತ ಕೆಟ್ಟ ಪ್ರಧಾನಿ ಯಾರೆಂಬ ಬಗ್ಗೆ ನಡೆಸಿದ ಸಮೀಕ್ಷೆಯಲ್ಲಿ ಬ್ರೌನ್ ಮೂರನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ!
ಯೂನಿವರ್ಸಿಟಿ ಆಫ್ ಲೀಡ್ಸ್‌ನ ಪ್ರೊಫೆಸರ್ ಕೆವಿನ್ ಥೆಕ್ಸ್‌ಟನ್ ಹಾಗೂ ಪ್ರೊ.ಮಾರ್ಕ್ ಗಿಲ್ ನೇತೃತ್ವದ 106 ಬ್ರಿಟನ್ ಮೂಲದ ಶೈಕ್ಷಣಿಕ ತಜ್ಞರು ನಡೆಸುತ್ತಿರುವ ತಂಡ ಈ ಸಮೀಕ್ಷೆಯನ್ನು ನಡೆಸಿದೆ.
20ನೇ ಶತಮಾನದ ಪ್ರಧಾನಿಗಳಲ್ಲಿ ಗೋರ್ಡನ್ ಬ್ರೌನ್ ಕೆಟ್ಟ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ ಎಂದು ನೂತನ ಸಮೀಕ್ಷೆ ವಿವರಿಸಿದೆ. ಅದೇ ರೀತಿ ಬ್ರಿಟನ್ ಆಳಿದವರಲ್ಲಿ ಅತ್ಯಂತ ಯಶಸ್ವಿ ಪ್ರಧಾನಿಗಳ ಪಟ್ಟಿಯಲ್ಲಿ ಮಾರ್ಗರೆಟ್ ಥ್ಯಾಚರ್ (10ರಲ್ಲಿ ಶೇ.6.9) ಹಾಗೂ ಟೋನಿ ಬ್ಲೇರ್ (ಶೇ.6.4ರಷ್ಟು) ಅಂಕ ಗಳಿಸಿದ್ದಾರೆ.
ಸುಮಾರು 13 ವರ್ಷಗಳ ಕಾಲ ಲೇಬರ್ ಪಾರ್ಟಿಯ ಗೋರ್ಡನ್ ಬ್ರೌನ್ ಅವರು ಬ್ರಿಟನ್ ಪ್ರಧಾನಿ ಹುದ್ದೆ ಅಲಂಕರಿಸಿದ್ದರು. ಆದರೆ ನಾಟಕೀಯ ಬೆಳವಣಿಗೆಯಲ್ಲಿ ಸ್ವತಃ ಪಕ್ಷದ ವಿಶ್ವಾಸ ಕಳೆದುಕೊಂಡಿದ್ದ ಬ್ರೌನ್, ಪ್ರಧಾನಿಹುದ್ದೆಗೆ ರಾಜೀನಾಮೆ ನೀಡಿದ್ದರು. ನಂತರ ಡೇವಿಡ್ ಕ್ಯಾಮರೂನ್ ಪ್ರಧಾನಿ ಹುದ್ದೆ ಅಲಂಕರಿಸಿದ್ದರು.