ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಇಂಡೋನೇಷಿಯಾ ಸಂಸತ್ತಿನಲ್ಲಿ ಅಶ್ಲೀಲ ಚಿತ್ರ ಪ್ರಸಾರ (Porn | Indonesian Parliament | Jakarta | Computer)
Bookmark and Share Feedback Print
 
ಇಂಡೋನೇಷಿಯಾ ಸಂಸತ್ತಿನ ಕಂಪ್ಯೂಟರ್ ಪರದೆಗಳಲ್ಲಿ ಬೆತ್ತಲೆ ಚಿತ್ರಗಳನ್ನು ಪ್ರಸಾರ ಮಾಡಿದ ಘಟನೆ ವರದಿಯಾಗಿದ್ದು, ಪತ್ರಕರ್ತರು ಮತ್ತು ಶಾಸನ ಸಭೆಯ ಸದಸ್ಯರು ಇದರಿಂದ ತೀವ್ರ ಮುಜುಗರ ಅನುಭವಿಸಿದ್ದಾರೆ ಎಂದು ವರದಿಗಳು ಹೇಳಿವೆ.

ಸಂಸದೀಯ ವೇಳಾಪಟ್ಟಿಯನ್ನು ಪರಿಶೀಲಿಸಲೆಂದು ಪತ್ರಕರ್ತರು ಯತ್ನಿಸಿದಾಗ ಸಂಸತ್ತಿನಲ್ಲಿನ ಮಾಧ್ಯಮ ಕೊಠಡಿಯಲ್ಲಿಟ್ಟಿದ್ದ ಎರಡು ಟಚ್ ಸ್ಕ್ರೀನ್ ಟರ್ಮಿನಲ್‌ಗಳಲ್ಲಿ ಹದಿಹರೆಯದವರು ಸೇರಿದಂತೆ ಬೆತ್ತಲೆ ಚಿತ್ರಗಳನ್ನು ಕಂಪ್ಯೂಟರ್ ಪ್ರದರ್ಶಿಸುತ್ತಿತ್ತು ಎಂದು 'ಜಕಾರ್ತಾ ಗ್ಲೋಬ್' ಪತ್ರಿಕೆ ವರದಿ ಮಾಡಿದೆ.

ಸುಮಾರು 15 ನಿಮಿಷಗಳ ಕಾಲ ಈ ಅಶ್ಲೀಲ ಚಿತ್ರಗಳು ಕಂಪ್ಯೂಟರ್ ಪರದೆಯಲ್ಲಿದ್ದವು. ನಂತರ ಪರದೆಗಳನ್ನು ಅಧಿಕಾರಿಗಳು ಆಫ್ ಮಾಡಿದ್ದಾರೆ.

ಇದೊಂದು ತಮಾಷೆಯ ಪ್ರಸಂಗವಲ್ಲ. ಖಂಡಿತಾ ಇದರ ಹೊಣೆಯನ್ನು ಯಾರಾದರೂ ಒಪ್ಪಿಕೊಳ್ಳಲೇ ಬೇಕು ಎಂದು ಡೆಮಾಕ್ರಟಿಕ್ ಪಕ್ಷದ ಶಾಸಕ ರಾಯ್ ಸೂರ್ಯೋ ತಿಳಿಸಿದ್ದಾರೆ.

ಯಾರೋ ಸೆಕ್ಸ್ ಸೈಟೊಂದರಿಂದ ಅಶ್ಲೀಲ ಚಿತ್ರಗಳನ್ನು ಕಾಪಿ ಮಾಡಿ ಅದನ್ನು ಸಂಸತ್ ಕಂಪ್ಯೂಟರಿನಲ್ಲಿ ಸೇವ್ ಮಾಡಿರಬೇಕು. ನಂತರ ಅದನ್ನು ಪಾರ್ಲಿಮೆಂಟ್ ವೆಬ್‌ಸೈಟಿಗೆ ಅಪ್‌‍ಲೋಡ್ ಮಾಡಿರಬೇಕು. ಹಾಗಾಗಿ ಇಂತಹ ಅಚಾತುರ್ಯ ಸಂಭವಿಸಿದೆ. ಇದರ ತನಿಖೆ ನಡೆಯಬೇಕು ಎಂದು ರಾಯ್ ಆಗ್ರಹಿಸಿದ್ದಾರೆ.

ಸರಕಾರವು ಅಶ್ಲೀಲ ವೆಬ್‌ಸೈಟ್‌ಗಳ ವಿರುದ್ಧ ಹೋರಾಟ ಆರಂಭಿಸಿರುವ ಹೊತ್ತಿನಲ್ಲೇ ಇಂತಹ ಅಪಮಾನಕಾರಿ ಘಟನೆ ಇಂಡೋನೇಷಿಯಾದಲ್ಲಿ ನಡೆದಿದೆ.
ಸಂಬಂಧಿತ ಮಾಹಿತಿ ಹುಡುಕಿ