ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕಾಶ್ಮೀರ ಕುರಿತು ವಿಶ್ವಸಂಸ್ಥೆ ಕಳವಳ - ನಿರಾಕರಣೆ (Ban Ki-Moon | Kashmir remark | Pakistan | India)
Bookmark and Share Feedback Print
 
ಕಳೆದ ತಿಂಗಳು 17 ಮಂದಿಯ ಸಾವಿಗೆ ಕಾರಣವಾದ ಹಿಂಸಾಚಾರದ ಕುರಿತು ಉಲ್ಲೇಖಿಸಿರುವ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಾನ್ ಕಿ-ಮೂನ್, ಕಾಶ್ಮೀರದಲ್ಲಿನ ಅಶಾಂತಿಗೆ ತೀವ್ರ ಕಳವಳ ವ್ಯಕ್ತಪಡಿಸಿದ ಬೆನ್ನಿಗೆ ವರದಿಗಳನ್ನು ನಿರಾಕರಿಸಿರುವ ವಿಶ್ವಸಂಸ್ಥೆ, ಅಂತಹ ಯಾವುದೇ ಹೇಳಿಕೆಯನ್ನು ತಾನು ನೀಡಿಲ್ಲ ಎಂದಿದೆ.

ಬಾನ್ ಕೀ-ಮೂನ್ ಇಂತಹ ಯಾವುದೇ ಪತ್ರಿಕಾ ಹೇಳಿಕೆಯನ್ನು ನೀಡಿಲ್ಲ. ಆದರೆ ಇದರ ಹಿಂದೆ ಪಾಕಿಸ್ತಾನ ಮೂಲದ ವಿಶ್ವಸಂಸ್ಥೆ ವಕ್ತಾರ ಫರ್ಹಾನ್ ಹಕ್ ಕೈವಾಡವಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ವರದಿಗಳು ಹೇಳಿವೆ.

ಭಾರತ ವಶದಲ್ಲಿರುವ ಕಾಶ್ಮೀರದಲ್ಲಿನ ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿಯ ಬಗ್ಗೆ ಬಾನ್ ತೀವ್ರ ಕಳವಳವನ್ನು ವ್ಯಕ್ತಪಡಿಸಿದ್ದಾರೆ ಎಂದು ಕಳೆದ ವಾರವಷ್ಟೇ ನ್ಯೂಯಾರ್ಕ್‌ನಲ್ಲಿನ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಿಂದ ಫರ್ಹಾನ್ ಅವರು ಇ-ಮೇಲ್ ಹೇಳಿಕೆಯನ್ನು ಪತ್ರಕರ್ತರಿಗೆ ಕಳುಹಿಸಿದ್ದರು.

ಕಳೆದ ಕೆಲವು ತಿಂಗಳುಗಳಿಂದ ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳು ಮತ್ತು ಪಾಕ್ ಮೂಲದ ಭಯೋತ್ಪಾದಕರ ಪ್ರಚೋದನೆಯಿಂದ ನಡೆಯುತ್ತಿರುವ ಹಿಂಸಾಚಾರವನ್ನು ಉಲ್ಲೇಖಿಸಿ ವಿಶ್ವಸಂಸ್ಥೆ ಕಾರ್ಯದರ್ಶಿ ಈ ಹೇಳಿಕೆಯನ್ನು ನೀಡಿದ್ದಾರೆ ಎಂದು ಉಲ್ಲೇಖಿಸಲಾಗಿತ್ತು.

ಕಾಶ್ಮೀರದಲ್ಲಿನ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕು ಮತ್ತು ಸಮಸ್ಯೆಗಳನ್ನು ಶಾಂತಿಯುತವಾಗಿ ಪರಿಹರಿಸಬೇಕು ಎಂದು ಪ್ರಧಾನ ಕಾರ್ಯದರ್ಶಿಯವರು ಕರೆ ನೀಡಿದ್ದಾರೆ ಎಂದು ಹಕ್ ತನ್ನ ಹೇಳಿಕೆಯಲ್ಲಿ ತಿಳಿಸಿದ್ದರು.

ರಾಜತಾಂತ್ರಿಕ ನಿಯಮಗಳಿಗೆ ಧಕ್ಕೆ ತರುವ ರೀತಿಯ ವಿಶ್ವಸಂಸ್ಥೆಯ ಹೇಳಿಕೆಯ ಕುರಿತು ಭಾರತ ವಿಶ್ವಸಂಸ್ಥೆಯಲ್ಲಿ ಸ್ಪಷ್ಟನೆ ಕೇಳಿತ್ತು.

ಈ ಕುರಿತು ವಿವರಣೆ ನೀಡಿರುವ ಭಾರತೀಯ ವಿದೇಶಾಂಗ ಸಚಿವಾಲಯವು, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯವರಾಗಲೀ ಅಥವಾ ಬಾನ್ ಅವರ ಕಚೇರಿಯಾಗಲೀ ಕಾಶ್ಮೀರ ಕುರಿತು ಪತ್ರಿಕಾ ಹೇಳಿಕೆಯಲ್ಲಿ ಯಾವುದೇ ಪ್ರಶ್ನೆಯನ್ನೆತ್ತಿಲ್ಲ ಅಥವಾ ಕಳವಳ ವ್ಯಕ್ತಪಡಿಸಿಲ್ಲ ಎಂದು ವಿಶ್ವಸಂಸ್ಥೆ ಖಚಿತಪಡಿಸಿದೆ ಎಂದಿದೆ.

ರಾಜತಾಂತ್ರಿಕ ವಿಶ್ಲೇಷಕರ ಪ್ರಕಾರ ವಕ್ತಾರ ಹಕ್ ಅನಧಿಕೃತವಾಗಿ ಅಥವಾ ಮೂನ್ ಅವರ ಕಚೇರಿಯ ಗಮನಕ್ಕೆ ಬರದಂತೆ ಈ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ