ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಗಾಂಧಿಯನ್ನು ಅನುಸರಿಸಿ: ಆಫ್ರಿಕಾ ಯುವಕರಿಗೆ ಒಬಾಮಾ (Mahatma Gandhi | Barack Obama | Africa | White House | US)
Bookmark and Share Feedback Print
 
ದಕ್ಷಿಣ ಆಫ್ರಿಕಾ ದೇಶಗಳನ್ನು ಸಮರ್ಥವಾಗಿ ಮುನ್ನಡೆಸುವ ನಿಟ್ಟಿನಲ್ಲಿ ಯುವ ಮುಖಂಡರು ಮಹಾತ್ಮ ಗಾಂಧಿ ಅವರ ತತ್ವ, ಆದರ್ಶಗಳನ್ನು ಅನುಸರಿಸಬೇಕು. ಆ ನೆಲೆಯಲ್ಲಾದರು ಬದಲಾವಣೆಯ ಹಾದಿ ಕಂಡುಕೊಳ್ಳಬೇಕಾಗಿದೆ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಕರೆ ನೀಡಿದ್ದಾರೆ.

'ನನ್ನ ಆಲೋಚನೆಯ ಪ್ರಕಾರ ಪ್ರತಿಯೊಬ್ಬರು ಈ ವಿಷಯವನ್ನು ಮನಗಾಣಬೇಕು. ಹಾಗಾಗಿ ನೀವು ಬದಲಾವಣೆಯತ್ತ ಹೆಜ್ಜೆ ಹಾಕಬೇಕು. ಆ ನಂತರ ಅದರ ಪರಿಣಾಮವನ್ನು ನೀವೇ ನೋಡುತ್ತೀರಿ. ಅದಕ್ಕಾಗಿ ಮಹಾತ್ಮಗಾಂಧಿ ನೀತಿಯನ್ನು ಅನುಸರಿಸಬೇಕು ಎಂದರು.

ಅವರು ಶ್ವೇತಭವನದಲ್ಲಿ ಆಹ್ವಾನಿತ ಸುಮಾರು 50 ಆಫ್ರಿಕನ್ ದೇಶಗಳ ಯುವ ಮುಖಂಡರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ನಂತರ ಪ್ರಶ್ನೆಯೊಂದಕ್ಕೆ ಈ ರೀತಿಯಾಗಿ ಪ್ರತಿಕ್ರಿಯಿಸಿದರು. ಅಮೆರಿಕ ಮೊದಲ ಬಾರಿಗೆ ಆಫ್ರಿಕ ದೇಶದ ಯುವ ಮುಖಂಡರ ಸಮಾವೇಶ ನಡೆಸಿದೆ. ಆ ನೆಲೆಯಲ್ಲಿ ಆಫ್ರಿಕಾದ ಭವಿಷ್ಯ ರೂಪಿಸುವಲ್ಲಿ ಯುವ ಮುಖಂಡರ ಹೊಣೆಗಾರಿಕೆ ಮಹತ್ತರದ್ದಾಗಿದೆ ಎಂದು ಬರಾಕ್ ಆಶಯ ವ್ಯಕ್ತಪಡಿಸಿದರು.

ಆಫ್ರಿಕಾದ ಭವಿಷ್ಯದ ದೃಷ್ಟಿಯಿಂದ ನಾವು ಯುವ ಮುಖಂಡರಿಗೆ ನೆರವು ನೀಡಲು ಅಮೆರಿಕ ಬದ್ದವಾಗಿದೆ. ಅದರಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ, ಅಲ್ಲಿನ ಜನರನ್ನು ಹೆಚ್ಚಿನ ಪ್ರಮಾಣದಲ್ಲಿ ಸಾಕ್ಷರರನ್ನಾಗಿ ಮಾಡಬೇಕಾಗಿದೆ. ಕೀನ್ಯಾದಲ್ಲಿಯೂ ಊಳಿಗಮಾನ್ಯ ಪದ್ದತಿಯನ್ನು ಕಿತ್ತೊಗೆದು, ಹೊಸ ಬದಲಾವಣೆಯತ್ತ ಹೆಜ್ಜೆ ಹಾಕಿದ ರೀತಿಯಲ್ಲೇ ಆಫ್ರಿಕಾದ ದೇಶಗಳು ಪ್ರಗತಿ ಸಾಧಿಸಬೇಕಾಗಿದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ