ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಡ್ರಗ್ಸ್ ಹಿಂಸಾಚಾರಕ್ಕೆ ಮೆಕ್ಸಿಕೋದಲ್ಲಿ 28,000 ಸಾವು (Mexico | drug violence | Felipe Calderon | Guillermo Valdes)
Bookmark and Share Feedback Print
 
ದೇಶದಲ್ಲಿ 2006ರಿಂದೀಚೆಗೆ ಡ್ರಗ್ಸ್ ಹಿಂಸಾಚಾರದಲ್ಲಿ ಸಾವನ್ನಪ್ಪಿದವರ ಸಂಖ್ಯೆ 28,000ಕ್ಕೇರಿದೆ ಎಂದು ಮೆಕ್ಸಿಕೋ ಸರಕಾರ ಪ್ರಕಟಿಸಿದ್ದು, ಮಾದಕ ದ್ರವ್ಯವನ್ನು ಕಾನೂನು ಬದ್ಧವಾಗಿಸುವ ಕುರಿತು ತಾನು ಚರ್ಚೆ ಆರಂಭಿಸಲಿರುವುದಾಗಿ ಅಧ್ಯಕ್ಷ ಫಿಲಿಫ್ ಕಾಲ್ಡೆರಾನ್ ತಿಳಿಸಿದ್ದಾರೆ.

ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 84,000 ಶಸ್ತ್ರಾಸ್ತ್ರಗಳು, 411 ಮಿಲಿಯನ್ ಅಮೆರಿಕಾ ಡಾಲರ್ ನಗದು ಹಣ ಹಾಗೂ 26 ಮಿಲಿಯನ್ ಡಾಲರ್ ಮೊತ್ತದ ಸ್ಥಳೀಯ ಕರೆನ್ಸಿ ಪೆಸೋಸ್ ವಶಪಡಿಸಿಕೊಳ್ಳಲಾಗಿದೆ ಎಂದು ಇಲ್ಲಿನ ಬೇಹುಗಾರಿಕಾ ಏಜೆನ್ಸಿ ನಿರ್ದೇಶಕ ಗೆಲ್ಲೆರ್ಮೋ ವಾಲ್ಡೆಸ್ ವಿವರಣೆ ನೀಡಿದ್ದಾರೆ.

ಮೆಕ್ಸಿಕೋದ ಡ್ರಗ್ಸ್ ವಿರೋಧಿ ಕಾರ್ಯಾಚರಣೆಯನ್ನು ಇನ್ನಷ್ಟು ಬಲಪಡಿಸಲು ಸಲಹೆ ಮತ್ತು ಇದನ್ನು ಕಾನೂನು ಬದ್ಧಗೊಳಿಸಲು ಚರ್ಚೆಗೆ ಚಾಲನೆ ನೀಡುವ ಕುರಿತು ಅಧ್ಯಕ್ಷ ಕಾಲ್ಡೆರಾನ್ ಕರೆದಿದ್ದ ಉದ್ಯಮ ಮತ್ತು ನಾಗರಿಕ ಸಂಘಟನೆಗಳ ಪ್ರತಿನಿಧಿಗಳ ಸಭೆಯಲ್ಲಿ ವಾಲ್ಡೆಸ್ ಈ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದ್ದಾರೆ.

ಮಾದಕ ದ್ರವ್ಯವನ್ನು ಕಾನೂನು ಬದ್ಧಗೊಳಿಸುವ ಮೂಲಕ ನಿಯಂತ್ರಣಕ್ಕೊಳಪಡಿಸುವ ಕುರಿತಾಗಿನ ಪ್ರಸ್ತಾಪವನ್ನು ತಾನು ಪರಿಗಣನೆಗೆ ತೆಗೆದುಕೊಳ್ಳಲಿದ್ದೇನೆ ಎಂದು ಕಾಲ್ಡೆರಾನ್ ತಿಳಿಸಿದ್ದಾರೆ.

ಈ ಕುರಿತು ಸಾಕಷ್ಟು ಚರ್ಚೆಯ ಅಗತ್ಯವಿದ್ದು, ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬೇಕಾಗಿದೆ. ಉಭಯ ಬಣಗಳಿಂದ ವ್ಯಕ್ತವಾಗುವ ಪರ ಮತ್ತು ವಿರೋಧ ಅಭಿಪ್ರಾಯಗಳನ್ನು ನೀವು ವಿಶ್ಲೇಷಿಸುವ ಅಗತ್ಯವಿದೆ ಎಂದು ಅಧ್ಯಕ್ಷರು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ