ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪ್ರಧಾನಿ ಚುನಾವಣೆ-ಭಾರತ ಮೂಗುತೂರಿಸಲ್ಲ: ಶ್ಯಾಮ್ ಅಭಯ (Manmohan Singh | Nepal Maoists | Shyam Saran | Prachanda | election)
Bookmark and Share Feedback Print
 
ನೇಪಾಳದಲ್ಲಿ ನೂತನ ಪ್ರಧಾನಿ ಆಯ್ಕೆ ಕಸರತ್ತು ಮುಂದುವರಿಯುತ್ತಿರುವ ನಡುವೆಯೇ ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಅವರ ವಿಶೇಷ ಪ್ರತಿನಿಧಿ ಶ್ಯಾಮ್ ಶರಣ್ ಅವರು ಮಾವೋ ಪಕ್ಷದ ಮುಖಂಡರ ಜೊತೆ ಮಾತುಕತೆ ನಡೆಸಿದ್ದಾರೆ.

ಭಾರತದ ವಿದೇಶಾಂಗ ಮಾಜಿ ಕಾರ್ಯದರ್ಶಿಯಾಗಿರುವ ಶ್ಯಾಮ್ ಅವರು ನೇಪಾಳದ ರಾಯಭಾರಿಯಾಗಿಯೂ ಕಾರ್ಯನಿರ್ವಹಿಸಿದ್ದರು. ನೇಪಾಳ ಮಾಜಿ ಪ್ರಧಾನಿ ಪುಷ್ಪ ಕಮಲ್ ದಹಾಲ್ ಅಲಿಯಾಸ್ ಪ್ರಚಂಡ ಅವರ ಜೊತೆ ಸುಮಾರು ಒಂದು ಗಂಟೆಗಳ ಕಾಲ ಚರ್ಚೆ ನಡೆಸಿದರು.

ಶುಕ್ರವಾರ ನಡೆಯಲಿರುವ ಜಿದ್ದಾಜಿದ್ದಿನ ಪ್ರಧಾನಮಂತ್ರಿ ಆಯ್ಕೆಯ ಚುನಾವಣೆ ಹಾಗೂ ನೂತನ ಸರಕಾರ ರಚನೆ ಪ್ರಕ್ರಿಯೆಯಲ್ಲಿ ಭಾರತ ಸರಕಾರ ಯಾವುದೇ ಕಾರಣಕ್ಕೂ ಮೂಗು ತೂರಿಸುವುದಿಲ್ಲ ಎಂದು ಶರಣ್ ಈ ಸಂದರ್ಭದಲ್ಲಿ ಮಾವೋ ಪಕ್ಷಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಪ್ರಚಂಡ ಅವರೊಂದಿಗೆ ಪಕ್ಷದ ಬಾಬುರಾಮ್ ಭಟ್ಟಾರೈ, ನಾರಾಯಣ್ ಕಾಜಿ ಮತ್ತು ಮೋಹನ್ ವೈದ್ಯ ಅವರು ಜತೆಗಿದ್ದು, ಶ್ಯಾಮ್ ಅವರೊಂದಿಗೆ ನೇಪಾಳದ ರಾಜಕೀಯ ಸ್ಥಿತಿಗತಿ ಕುರಿತು ಮಾತುಕತೆ ನಡೆಸಿದರು.

ಪ್ರಚಂಡ ಅವರ ನಿವಾಸದಲ್ಲಿ ಗುರುವಾರ ನಡೆದ ಚರ್ಚೆಯ ಸಂದರ್ಭದಲ್ಲಿ ಭಾರತದ ಹಾಲಿ ರಾಯಭಾರಿ ರಾಕೇಶ್ ಸೂಡ್ ಕೂಡ ಹಾಜರಿದ್ದರು. ಅಲ್ಲದೇ ಶ್ಯಾಮ್ ಅವರು ಮಾಧವ್ ಕುಮಾರ್ ನೇಪಾಳ್, ಸುಶೀಲ್ ಕೊಯಿರಾಲಾ ಅವರೊಂದಿಗೆ ನಾಳೆ ನೇಪಾಳ ಪ್ರಧಾನಿ ಆಯ್ಕೆಗಾಗಿ ನಡೆಯಲಿರುವ ಚುನಾವಣೆ ಕುರಿತು ಮಾಹಿತಿ ವಿನಿಮಯ ಮಾಡಿಕೊಂಡರು.

ನೇಪಾಳದಲ್ಲಿ ಶಾಂತಿ ಮತ್ತೆ ನೆಲೆಸಬೇಕು ಹಾಗೂ ನೂತನ ಸಂವಿಧಾನ ರಚನೆ ಶೀಘ್ರವೇ ಆಗಬೇಕು. ಅದಕ್ಕೆ ಬೇಕಾದ ನೆರವು ನೀಡುವುದಾಗಿ ಭಾರತ ತಿಳಿಸಿದೆ ಎಂದು ಮಾವೋ ಪಕ್ಷದ ಸಹಾಯಕ ವರಿಷ್ಠ ಶ್ರೇಷ್ಠಾ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ ಸ್ಪಷ್ಟಪಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ