ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮೂವರು ಹುಡುಗಿಯರ ಜತೆ ಪಲ್ಲಂಗದಲ್ಲಿ ಇಟಲಿ ಪ್ರಧಾನಿ! (Italian PM | Silvio Berlusconi | sex session | Maria Teresa De Nicolo)
Bookmark and Share Feedback Print
 
ಇಟಲಿ ಪ್ರಧಾನ ಮಂತ್ರಿ ಸಿಲ್ವಿಯೋ ಬೆರ್ಲೂಸ್ಕೋನಿ ಮೂವರು ವೇಶ್ಯೆಯರ ಜತೆ ಹಾಸಿಗೆ ಹಂಚಿಕೊಂಡಿದ್ದಾರೆ ಎಂದು ಸ್ವತಃ ವೇಶ್ಯೆಯೊಬ್ಬಳು ಬಹಿರಂಗಪಡಿಸುವುದರೊಂದಿಗೆ ಭಾರೀ ವಿವಾದ ಸೃಷ್ಟಿಯಾಗಿದೆ.

ಮರಿಯಾ ತೆರೇಸಾ ಡೆ ನಿಕೊಲೊ ಎಂಬಾಕೆಯೇ ತಾನು 73ರ ಹರೆಯದ ಪ್ರಧಾನಿ ಬೆರ್ಲೂಸ್ಕೋನಿಯವರಿಗೆ ಕಳೆದ ವರ್ಷ ದೈಹಿಕ ಸುಖ ನೀಡಿದ್ದೆ ಎಂದು ಬಹಿರಂಗಪಡಿಸಿರುವವಳು. ತನ್ನ ಜತೆ ಇನ್ನೂ ಇಬ್ಬರು ಯುವತಿಯರಿದ್ದರು ಎಂದು ಆಕೆ ತಿಳಿಸಿದ್ದಾಳೆ.

ಈ ಸಂಬಂಧ ಪ್ರಾಸಿಕ್ಯೂಟರುಗಳಿಗೆ 38ರ ಹರೆಯದ ನಿಕೊಲೊ ಹೇಳಿಕೆ ನೀಡಿದ್ದಾರೆ ಎಂದು ಇಟಲಿಯ ಪತ್ರಿಕೆಯೊಂದು ತನ್ನ ವರದಿಯಲ್ಲಿ ತಿಳಿಸಿದೆ.

ಆಕೆಯ ಹೇಳಿಕೆಯ ಪ್ರಕಾರ ಪ್ರಧಾನಿಯ ಜತೆ ಒಟ್ಟು ಮೂವರು ಯುವತಿಯರು ಮಂಚದಲ್ಲಿದ್ದರು. ಒಬ್ಬಳು ಸ್ವತಃ ನಾನು, ಮತ್ತಿಬ್ಬರು ರೋಮ್‌ನವರು. ಬೆರ್ಲೂಸ್ಕೋನಿಯವರ ರೋಮ್‌ನಲ್ಲಿನ ಪಾಲಾಜೋ ಗ್ರಾಜಿಯೋಲಿಯಲ್ಲಿನ ನಿವಾಸದಲ್ಲಿ ಈ ಪ್ರಸಂಗ ನಡೆದಿತ್ತು ಎಂದಿದ್ದಾಳೆ.

ಗಿಯಾನಪೌಲೋ ತಾರಾಂಟಿನಿ ಎಂಬ ಉದ್ಯಮಿ ಪಾರ್ಟಿಗಾಗಿ ನಿಕೊಲೊಳನ್ನು ಆಹ್ವಾನಿಸಿದ್ದರು.

ನನಗೆ ತಾರಾಂಟಿನಿಯವರು ಕರೆ ಮಾಡಿ, ತಕ್ಷಣವೇ ಹೊರಟು ಬಾ ಎಂದು ನನಗೆ 30 ನಿಮಿಷಗಳ ಕಾಲಾವಕಾಶ ನೀಡಿದ್ದರು. ಈ ರಾತ್ರಿ ಬೆರ್ಲೂಸ್ಕೋನಿಯವರ ಜತೆ ಪಾರ್ಟಿ ಇದೆ ಎಂದಿದ್ದರು ಎಂದು ನಿಕೊಲೊ ವಿವರಣೆ ನೀಡಿದ್ದಾಳೆ.

ಆರಂಭದಲ್ಲಿ ಇದು ಜೋಕ್ ಆಗಿರಬಹುದು ಎಂದುಕೊಂಡಿದ್ದೆ. ಆದರೆ ನಂತರ ಈ ಕುರಿತು ವಿವರ ನೀಡಿದ್ದ ತಾರಾಂಟಿನಿ, ಸೆಕ್ಸಿಯಾಗಿ ಡ್ರೆಸ್ ಧರಿಸುವಂತೆ ಸೂಚಿಸಿದ್ದರು. ಬಳಿಕವಷ್ಟೇ ನಾನು ಇದು ವಾಸ್ತವ ಎಂಬ ಅರಿವಿಗೆ ಬಂದಿದ್ದೆ ಎಂದಿದ್ದಾಳೆ.
ಸಂಬಂಧಿತ ಮಾಹಿತಿ ಹುಡುಕಿ