ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ವಿಮಾನ ದುರಂತದಲ್ಲಿ ಮಡಿದ ಹಿಂದೂ 'ಕಾಫಿರ'ನಂತೆ! (Hindu victim | Pak air crash | kafir | Premchand)
Bookmark and Share Feedback Print
 
ಭಾರತದಲ್ಲಿ ಅಲ್ಪಸಂಖ್ಯಾತರಾಗಿರುವ ಮುಸ್ಲಿಮರ ಬಗ್ಗೆ ಒಂದಕ್ಷರ ಹೇಳುವಾಗಲೂ ಸದಾ ಪ್ರತಿಯೊಬ್ಬರೂ ಎಚ್ಚರಿಕೆ ವಹಿಸುತ್ತೇವೆ. ಅದೇ ರೀತಿ ಪಾಕಿಸ್ತಾನದಲ್ಲೂ ನಡೆಯುತ್ತದೆ ಎನ್ನುವುದನ್ನು ನಿರೀಕ್ಷಿಸಲಾಗದು. ಇದಕ್ಕೆ ಪುಷ್ಠಿ ನೀಡುವ ಘಟನೆಯೊಂದು ಇದೀಗ ವರದಿಯಾಗಿದೆ. ಇತ್ತೀಚೆಗಷ್ಟೇ ನಡೆದಿರುವ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿರುವ ಹಿಂದೂ ವ್ಯಕ್ತಿಯೊಬ್ಬನನ್ನು ಅಲ್ಲಿನ ಆಡಳಿತ 'ಕಾಫಿರ' ಎಂದು ಅವಮಾನಿಸಿದೆ.

ಕೆಲದಿನಗಳ ಹಿಂದಷ್ಟೇ ಇಸ್ಲಾಮಾಬಾದ್ ಸಮೀಪ ಪತನಗೊಂಡಿದ್ದ ವಿಮಾನದಲ್ಲಿದ್ದ ಪ್ರೇಮ್‌ಚಂದ್ ಎಂಬ ವ್ಯಕ್ತಿಯೂ ಸಾವನ್ನಪ್ಪಿದ್ದರು. ಸಿಂಧ್ ಪ್ರಾಂತ್ಯದ ಸಂಘಾರ್ ಎಂಬಲ್ಲಿನ ಸಾಮಾಜಿಕ ಕಾರ್ಯಕರ್ತನಾಗಿರುವ ಇವರು, ಘಟನೆಯಲ್ಲಿ ಬಲಿಯಾದ ಆರು ಯುವ ಸಂಸತ್ ಸದಸ್ಯರಲ್ಲಿ ಒಬ್ಬರಾಗಿದ್ದರು.

ಈ 'ಕಾಫಿರ್' ವಿವಾದ ಹುಟ್ಟಿಕೊಂಡಿರುವುದು ಪ್ರೇಮ್‌ಚಂದ್ ಶವಪೆಟ್ಟಿಗೆ ತಲುಪಿದ ನಂತರ. ಪಾಕಿಸ್ತಾನದಲ್ಲಿ ಕಾಫಿರ್ (ಇಸ್ಲಾಮೇತರ ಅಥವಾ ದೇವರಲ್ಲಿ ನಂಬಿಕೆಯಿಲ್ಲದವನು ಎಂಬ ಅರ್ಥವೂ ಇದೆ) ಎನ್ನುವುದನ್ನು ಗಂಭೀರತರದ ನಿಂದನೆ ಪದವಾಗಿ ಬಳಸಲಾಗುತ್ತಿದ್ದು, ಇದೇ ಪದವನ್ನು ಶವಪೆಟ್ಟಿಗೆಯ ಮೇಲೂ ನಮೂದಿಸಲಾಗಿತ್ತು.

ಈ ಕುರಿತು ತೀವ್ರ ಆಕ್ಷೇಪಗಳು ಬರುತ್ತಿದ್ದಂತೆ ಸ್ಪಷ್ಟನೆ ನೀಡಿರುವ ಸಂಬಂಧಪಟ್ಟವರು, ಇದು ಅಧಿಕಾರಿಗಳಿಂದ ನಡೆದಿರುವ ಪ್ರಮಾದ ಎಂದಿದ್ದಾರೆ.

ಇದು ಆಘಾತಕಾರಿಯಾಗಿದೆ. ಆತನನ್ನು ಹಿಂದೂ ಅಥವಾ ಮುಸ್ಲಿಮೇತರ ಎಂದು ಗುರುತಿಸಬೇಕಾಗಿತ್ತು. ಆದರೆ ಕಾಫಿರ ಎಂಬ ಶಬ್ದವನ್ನು ಬಳಸಿರುವುದು ಅಸಹಿಷ್ಣುತೆಯ ಅತ್ಯಂತ ಕೆಟ್ಟ ಉದಾಹರಣೆ ಎಂದು ಯುವ ಸಂಸತ್ತಿನ ಸದಸ್ಯ ಮುನೀಬ್ ಅಫ್ಜಲ್ ಹೇಳಿದ್ದಾರೆ.

ಪ್ರೇಮ್‌ಚಂದ್ ಗೆಳೆಯರು ಕೂಡ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದುರ್ಘಟನೆಯಲ್ಲಿ ಸಾವನ್ನಪ್ಪಿದ ಪ್ರಯಾಣಿಕರನ್ನು ಜಾತಿ, ವರ್ಣ ಮತ್ತು ಧರ್ಮವನ್ನು ಹೊರತುಪಡಿಸಿ ರಾಷ್ಟ್ರೀಯ ದುರಂತ ಪ್ರಕರಣ ಎಂದು ಪರಿಗಣಿಸಬೇಕಾಗಿತ್ತು ಎಂದಿದ್ದಾರೆ.

ಅಧಿಕಾರಿಗಳ ದುರುಳತನದ ನಡೆಯನ್ನು ಖಂಡಿಸಿರುವ ಯುವ ಸಂಸತ್ ಸದಸ್ಯರು ಕೊನೆಗೆ ತಮ್ಮದೇ ರೀತಿಯಲ್ಲಿ ಪ್ರೇಮ್‌ಚಂದ್‌ಗೆ ಗೌರವ ಸಲ್ಲಿಸಿದ್ದಾರೆ. ಆತನ ಶವಪೆಟ್ಟಿಗೆಯ ಮೇಲೆ, 'ನಾವು ನಿನ್ನನ್ನು ಯಾವತ್ತೂ ಪ್ರೀತಿಸುತ್ತೇವೆ' ಎಂದು ಯೂತ್ ಪಾರ್ಲಿಮೆಂಟ್ ಪರವಾಗಿ ಸಂದೇಶವನ್ನು ಬರೆಯಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ