ಸ್ಯಾನ್ ಫ್ರಾನ್ಸಿಸ್ಕೋ, ಗುರುವಾರ, 5 ಆಗಸ್ಟ್ 2010( 19:55 IST )
ಸಲಿಂಗಿಗಳ ಮದುವೆ ಸಂವಿಧಾನಬದ್ಧವಾದ ಹಕ್ಕು ಎಂದು ಅಮೆರಿಕದ ಸುಪ್ರೀಂಕೋರ್ಟ್ ತಿಳಿಸಿದೆ. ಅಲ್ಲದೇ ಸಲಿಂಗಿಗಳ ವಿವಾಹ ನಿಷೇಧಿಸುವುದು ಸಂವಿಧಾನಬಾಹಿರವಾಗಲಿದೆ ಎಂದು ಫೆಡರಲ್ ನ್ಯಾಯಾಧೀಶರು ಮಹತ್ವದ ತೀರ್ಪು ನೀಡುವ ನೀಡುವ ಮೂಲಕ ಕ್ಯಾಲಿಫೋರ್ನಿಯಾದಲ್ಲಿ ಸಲಿಂಗಿಗಳ ಮುದುವೆ ನಿಷೇಧಿಸಬೇಕೆಂಬ ಬೇಡಿಕೆಗೆ ಮುಖಭಂಗವಾಗಿದೆ ಎಂಬುದಾಗಿ ಸಲಿಂಗಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ಕ್ಯಾಲಿಫೋರ್ನಿಯಾದಲ್ಲಿ ಸಲಿಂಗಿಗಳ ವಿವಾಹಕ್ಕೆ ನಿಷೇಧ ಹೇರಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಅಮೆರಿಕದ ಜಿಲ್ಲಾ ನ್ಯಾಯಾಧೀಶ ವೌಗನ್ ವಾಕರ್, ಸಲಿಂಗಿಗಳ ವಿವಾಹ ಸಂವಿಧಾನಬದ್ಧವಾದದ್ದು ಎಂದು ತೀರ್ಪು ನೀಡಿದ ಬೆನ್ನಲ್ಲೇ ಕೋರ್ಟ್ ಆವರಣದ ಹೊರಗಿದ್ದ ಸಲಿಂಗಿಗಳು ಸಂತಸ ವ್ಯಕ್ತಪಡಿಸಿದರು.
ನೂರಾರು ಸಂಖ್ಯೆಯಲ್ಲಿ ಸೇರಿದ್ದ ಸಲಿಂಗಿಗಳು ಅಮೆರಿಕನ್ ಬಾವುಟ ಹಿಡಿದು, ಜೈಕಾರ ಹಾಕಿದರು. ಅಷ್ಟೇ ಅಲ್ಲ ಈ ನಗರ ಸಲಿಂಗಿಗಳಿಗೆ ಸ್ವರ್ಗವಾದಂತಾಗಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದರು.
ನ್ಯೂಯಾರ್ಕ್ ನಗರದ ಮ್ಯಾನ್‌ಹಟ್ಟನ್‌ನ ಕೆಳ ಕೋರ್ಟ್‌ನ ಆವರಣದ ಹೊರಭಾಗದಲ್ಲಿ ನೆರೆದಿದ್ದ ಸುಮಾರು 150 ಸಲಿಂಗಿಗಳು, ಇದು ನಮ್ಮ ಪ್ರೀತಿಗೆ ಸಂದ ಗೌರವ ಎಂದು ಘೋಷಣೆ ಕೂಗಿದರು.
ಸಲಿಂಗಿಗಳ ವಿವಾಹವನ್ನು ನಿಷೇಧಿಸಬೇಕೆಂಬ ವಾದವನ್ನು ತಿರಸ್ಕರಿಸಿದ ನ್ಯಾಯಾಧೀಶ ವಾಕರ್, ಆ ರೀತಿ ನಿಷೇಧ ಹೇರಿದರೆ ಅದು ಮಾನವ ಹಕ್ಕುಗಳ ಉಲ್ಲಂಘನೆಯಾಗಲಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದರು.