ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಶಂಕಿತ ಪಾಕಿಸ್ತಾನ ಉಗ್ರ ಸ್ಪೈನ್‌ನಲ್ಲಿ ಬಂಧನ (Pakistan | Spain | terrorism | Tortosa | Interpol warrant)
Bookmark and Share Feedback Print
 
ಭಯೋತ್ಪಾದನೆ ಆರೋಪ ಹೊತ್ತಿರುವ ಪಾಕಿಸ್ತಾನ ಪ್ರಜೆಯನ್ನು ಸೆರೆ ಹಿಡಿದಿರುವುದಾಗಿ ಸ್ಪೈನ್ ಅಧಿಕಾರಿಗಳು ತಿಳಿಸಿದ್ದಾರೆ.

ಶಂಕಿತ ಆರೋಪಿಯನ್ನು ಎಂಝಡ್ ಎಂದು ಗುರುತಿಸಲಾಗಿದೆ. ಈತನನ್ನು ಮಂಗಳವಾರ ರಾತ್ರಿ ಸ್ಪೈನ್‌ನ ಟೊರ್‌ಟೋಸಾ ನಗರದ ಈಶಾನ್ಯ ಭಾಗದಲ್ಲಿ ಇಂಟರ್‌ಪೋಲ್ ವಾರಂಟ್ ಜಾರಿ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ ಎಂದು ವಿವರಿಸಿದ್ದಾರೆ.

ಶಂಕಿತ ಆರೋಪಿ ಪಾಕಿಸ್ತಾನದಲ್ಲಿ ಭಯೋತ್ಪಾದನೆ ಕೃತ್ಯ ನಡೆಸಿರುವ ಆರೋಪದ ಮೇಲೆ ಇಂಟರ್‌ಪೋಲ್ ವಾರಂಟ್ ಜಾರಿಗೊಳಿಸಿತ್ತು. ಈತ ಎರಡು ಮೂರು ದಿನಗಳ ಹಿಂದಷ್ಟೆ ಸ್ಪೈನ್‌ಗೆ ಆಗಮಿಸಿರುವುದಾಗಿ ತಿಳಿಸಿರುವ ಅಧಿಕಾರಿಗಳು, ಎಂಝಡ್ ಸ್ಪೈನ್‌ನಲ್ಲಿ ಯಾವುದೇ ಅಪರಾಧ ನಡೆಸಿರುವ ಬಗ್ಗೆ ಪುರಾವೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಏತನ್ಮಧ್ಯೆ, ಬಂಧಿತ ಎಂಝಡ್‌ನನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸುವ ಬಗ್ಗೆ ಸ್ಪೈನ್‌ನ ನ್ಯಾಷನಲ್ ಕೋರ್ಟ್‌ನಲ್ಲಿ ನಿರ್ಧಾರವಾಗಬೇಕಾಗಿದೆ. ಅಲ್ಲಿಯವರೆಗೆ ಎಂಝಡ್ ಬಂಧನದಲ್ಲಿಯೇ ಇರುವುದಾಗಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ