ಜೀವಂತವಾಗಿದ್ದ ತನ್ನ ಅಜ್ಜಿಯ ದೇಹದ ವಿವಿಧ ಭಾಗಗಳನ್ನು ಕತ್ತರಿಸಿ ತಿಂದ 26ರ ಹರೆಯದ ಮೊಮ್ಮಗ, ಉಕ್ರೈನ್‌ನ ಕಂಪ್ಯೂಟರ್ ಪ್ರೋಗ್ರಾಮರ್‌ನೊಬ್ಬ ಇದೀಗ ಪೊಲೀಸರ ಅತಿಥಿಯಾಗಿರುವ ಘಟನೆ ನಡೆದಿದೆ.
ಇದೊಂದು ಭಯಾನಕ ಘಟನೆಯಾಗಿದ್ದು, ತನ್ನ ಸ್ವಂತ ಅಜ್ಜಿ (60ವ) ಜೀವಂತವಿರುವಾಗಲೇ ಆಕೆಯ ಅಂಗಾಂಗಗಳನ್ನು ಮುಕ್ಕುತ್ತಿದ್ದಾತನ ಹೆಸರು ಸೆರ್ಗೈ ಜಾಮರ್‌ಯೊವ್ ಎಂದು ಗುರುತಿಸಲಾಗಿದೆ. ಮಾನವ ರೂಪದ ಈ ನರರಾಕ್ಷಸ, ಅಜ್ಜಿಯ ಕಣ್ಣನ್ನು ಗಾಜಿನಿಂದ ಕಿತ್ತು ತಿನ್ನುತ್ತಿದ್ದ. ಈ ಸಂದರ್ಭದಲ್ಲಿ ಅಜ್ಜಿ ಸಹಾಯಕ್ಕಾಗಿ ಅಂಗಲಾಚುತ್ತಿದ್ದಳು. ಆದರೂ ಕ್ರೂರಿ ಮೊಮ್ಮಗ ಆಕೆಯ ನಾಲಗೆ ಕತ್ತರಿಸಿ ತಿನ್ನುತ್ತಿದ್ದ ಎಂದು ಡೈಲಿ ಮೇಲ್ ವರದಿ ವಿವರಿಸಿದೆ.
ತನ್ನ ತಂದೆ-ತಾಯಿಗಳನ್ನು ಬೇರೆ ಮಾಡಿರುವುದೇ ಅಜ್ಜಿಯ ಬಗ್ಗೆ ಇಷ್ಟು ಕೋಪ ಬರಲು ಕಾರಣವಂತೆ. ಹಾಗಾಗಿ ಮೊಮ್ಮಗ ಅಜ್ಜಿಯ ತುಟಿ, ಕಿವಿ, ಕಣ್ಣು ಸೇರಿದಂತೆ ಪ್ರಮುಖ ಅಂಗ ಕತ್ತರಿಸಿ ತಿಂದಿದ್ದನಂತೆ!.ಇಷ್ಟೆಲ್ಲಾ ಆಘಾತದಲ್ಲಿ ಅಜ್ಜಿ ಸಾವನ್ನಪ್ಪಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕೊನೆಗೂ ಈ ಕ್ರೂರಿ ಮೊಮ್ಮಗನನ್ನು ಪೊಲೀಸರು ಪ್ಲ್ಯಾಟ್‌ನೊಳಗೆ ಅನಿಲ ಪ್ರಯೋಗಿಸಿ ಸೆರೆ ಹಿಡಿದಿದ್ದಾರೆ. ಕೊಲೆ ಮಾಡಿದ ಆರೋಪದ ಮೇಲೆ 26ರ ಹರೆಯದ ಯುವಕನನ್ನು ಬಂಧಿಸಿದ್ದೇವೆ. ಇದೊಂದು ಅತ್ಯಂತ ಕ್ರೂರ ಕೃತ್ಯವಾಗಿದೆ. ಅಲ್ಲದೇ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡವುದಿಲ್ಲ, ತನಿಖೆ ಮುಂದುವರಿದಿರುವುದಾಗಿ ಸ್ಥಳೀಯ ಪೊಲೀಸ್ ಅಧಿಕಾರಿ ಓಲ್ಗಾ ಕೊನ್‌ಡ್ರಾಶೋವಾ ತಿಳಿಸಿರುವುದಾಗಿ ವರದಿ ಹೇಳಿದೆ.
ಯುವಕನನ್ನು ಕೊಲೆ ಆಪಾದನೆ ಮೇಲೆ ಬಂಧಿಸಲಾಗಿದೆ. ಒಂದು ವೇಳೆ ಆತನ ಆರೋಪ ಸಾಬೀತಾದಲ್ಲಿ ಯುವಕನಿಗೆ 20ವರ್ಷಗಳ ಕಾಲ ಜೈಲುಶಿಕ್ಷೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.