ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮೊದಲು ವಿದ್ಯಾಭ್ಯಾಸ, ನಂತ್ರ ರಾಜಕೀಯ: ಬಿಲಾವಲ್ (Bilawal | Asif Ali Zardari | Islamabad | London | Pakistan,)
Bookmark and Share Feedback Print
 
ಶೀಘ್ರದಲ್ಲಿಯೇ ರಾಜಕೀಯ ಪ್ರವೇಶಿಸುವ ಯೋಜನೆ ಹೊಂದಿಲ್ಲ ಎಂದು ಪಾಕಿಸ್ತಾನ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಪುತ್ರ ಬಿಲಾವಲ್ ಸ್ಪಷ್ಟಪಡಿಸಿದ್ದು, ತಾನು ವಿದ್ಯಾಭ್ಯಾಸ ಪೂರ್ಣಗೊಳಿಸಿದ ನಂತರವಷ್ಟೇ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಬರ್ಮಿಂಗ್‌ಹ್ಯಾಮ್‌ನಲ್ಲಿ ಶನಿವಾರ ರಾಜಕೀಯ ಸಭೆಯನ್ನು ಆಯೋಜಿಸಿತ್ತು. ಇದು ಜರ್ದಾರಿ ಪುತ್ರ ಬಿಲಾವಲ್‌ನನ್ನು ರಾಜಕೀಯಕ್ಕೆ ಕರೆತರಲು ನಡೆಸಿದ ಸಭೆಯಾಗಿತ್ತು ಎಂದು ಮಾಧ್ಯಮಗಳು ವರದಿ ಮಾಡಿದ್ದವು.

ಆ ನಿಟ್ಟಿನಲ್ಲಿ ತಾನು ರಾಜಕೀಯ ಪ್ರವೇಶಿಸಲು ಸಿದ್ದತೆ ನಡೆಸುತ್ತಿದ್ದೇನೆ ಎಂಬ ಮಾಧ್ಯಮಗಳ ವರದಿ ನಿಖರವಾದದ್ದಲ್ಲ ಎಂದು ಲಂಡನ್‌ನಲ್ಲಿರುವ ಬಿಲಾವಲ್ ಪ್ರಕಟಣೆ ನೀಡಿದ್ದಾರೆ.

21ರ ಹರೆಯದ ಬಿಲಾವಲ್ ಪಾಕಿಸ್ತಾನ ಆಡಳಿತಾರೂಢ ಪಿಪಿಪಿ ಪಕ್ಷದ ಅಧ್ಯಕ್ಷ ಕೂಡ ಹೌದು. ನಾನು ರಾಜಕೀಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿದ್ದೇನೆ ಎಂಬ ವರದಿ ಸತ್ಯಕ್ಕೆ ದೂರವಾದದ್ದು. ಅಲ್ಲದೆ, ಬರ್ಮಿಂಗ್‌ಹ್ಯಾಮ್‌ನಲ್ಲಿ ಪಕ್ಷದ ವತಿಯಿಂದ ನಡೆದ ಸಭೆಯಲ್ಲಿಯೂ ನಾನು ಭಾಗವಹಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

'ಮೊದಲು ನಾನು ನನ್ನ ವಿದ್ಯಾಭ್ಯಾಸ ಪೂರ್ಣಗೊಳಿಸುವ ಗುರಿ ಹೊಂದಿದ್ದೇನೆ. ಕಾನೂನು ವಿದ್ಯಾಭ್ಯಾಸ ಮಾಡುವ ಇಚ್ಚೆ ಹೊಂದಿದ್ದೇನೆ. ಆದರೆ ರಾಜಕೀಯಕ್ಕೆ ಬರುವ ಬಗ್ಗೆ ಮುಂದೆ ನಿರ್ಧಾರ ಕೈಗೊಳ್ಳಲಾಗುವುದು' ಎಂದು ಬಿಲಾವಲ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ