ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕಿಸ್ತಾನದ 47 ಜನಪ್ರತಿನಿಧಿಗಳದ್ದು ನಕಲಿ ಪದವಿ! (PPP | Pakistan | Election Commission | PML-N)
Bookmark and Share Feedback Print
 
ಪಾಕಿಸ್ತಾನದಲ್ಲೀಗ ನಕಲಿ ಪದವಿಗಳದ್ದೇ ಕಾರುಬಾರು. ಅದರಲ್ಲೂ ರಾಜಕಾರಣಿಗಳೇ ನಾಮುಂದು ತಾಮುಂದು ಎಂಬಂತೆ ನಕಲಿ ಪದವಿಗಳನ್ನು ಗಿಟ್ಟಿಸಿಕೊಂಡಿರುವುದು ಬೆಳಕಿಗೆ ಬಂದಿದ್ದು, ಒಟ್ಟಾರೆ 47 ಶಾಸಕರು-ಸಂಸದರು ಈ ಸಾಲಿನಲ್ಲಿದ್ದಾರೆ ಎಂದು ಪಾಕ್ ಸರಕಾರಿ ಮೂಲಗಳು ಹೇಳಿವೆ.

ಅಚ್ಚರಿಯೆಂದರೆ ಇದರಲ್ಲಿ ಪಾಕಿಸ್ತಾನ ಪ್ಯೂಪಲ್ಸ್ ಪಾರ್ಟಿ ಮುಂಚೂಣಿಯಲ್ಲಿರುವುದು. ಈ ಪಟ್ಟಿಯನ್ನು ಪಾಕಿಸ್ತಾನದ ಪ್ರೌಢ ಶಿಕ್ಷಣ ಆಯೋಗವು ಚುನಾವಣಾ ಆಯೋಗಕ್ಕೆ ಹಸ್ತಾಂತರಿಸಿದೆ.

ನಕಲಿ ಅಥವಾ ಮೌಲ್ಯರಹಿತ ಪದವಿ ಪ್ರಮಾಣಪತ್ರಗಳನ್ನು ನೀಡಿರುವ ಜನಪ್ರತಿನಿಧಿಗಳಿಗೆ ಚುನಾವಣಾ ಆಯೋಗವು ನೋಟೀಸ್ ಜಾರಿ ಮಾಡಲಿದ್ದು, ಅವರು ಮುಖ್ಯ ಚುನಾವಣಾ ಆಯುಕ್ತರೆದುರು ವಿವರಣೆಯನ್ನು ನೀಡಬೇಕಿದೆ. ಅವರ ಮೇಲೆ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಈ ಪಟ್ಟಿಯ ಪ್ರಕಾರ ಪಾಕಿಸ್ತಾನ್ ಪ್ಯೂಪಲ್ಸ್ ಪಾರ್ಟಿಯ 12, ಪಾಕಿಸ್ತಾನ್ ಮುಸ್ಲಿಂ ಲೀಗ್ ನವಾಜ್ ಶರೀಫ್ ಬಣ ಮತ್ತು ಪಾಕಿಸ್ತಾನ ಮುಸ್ಲಿಂ ಲೀಗ್ ಖ್ವೈದ್ ಇ ಅಜಂ ಬಣದ ತಲಾ 11 ಜನಪ್ರತಿನಿಧಿಗಳು ನಕಲಿ ಪದವಿ ಪ್ರಮಾಣ ಪತ್ರಗಳನ್ನು ಹೊಂದಿದ್ದಾರೆ.

2008ರ ಚುನಾವಣೆಗೆ ಸ್ಪರ್ಧಿಸುವ ಸಂದರ್ಭದಲ್ಲಿ ಗೆದ್ದಿರುವ 47 ಮಂದಿ ನಕಲಿ ಪದವಿ ಪ್ರಮಾಣಪತ್ರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದರು. ಇತ್ತೀಚೆಗಷ್ಟೇ ಇದನ್ನು ಪತ್ತೆ ಹಚ್ಚಲಾಗಿತ್ತು.

ಈ ಪಟ್ಟಿಯಲ್ಲಿ ಜಮಾತ್ ಉಲೇಮಾ ಇ ಇಸ್ಲಾಂ ಪಕ್ಷದ ಐವರು, ಅವಾಮಿ ನ್ಯಾಷನಲ್ ಪಾರ್ಟಿಯ ಇಬ್ಬರು ಹಾಗೂ ಬಲೂಚಿಸ್ತಾನ್ ನ್ಯಾಷನಲ್ ಪಾರ್ಟಿ ಮತ್ತು ಪಿಎಂಎಲ್-ಫಂಕ್ಷನಲ್‌ನ ತಲಾ ಒಬ್ಬೊಬ್ಬರು ಹಾಗೂ ನಾಲ್ವರು ಸ್ವತಂತ್ರ ಅಭ್ಯರ್ಥಿಗಳು ಕೂಡ ಸ್ಥಾನ ಪಡೆದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ