ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ನೇಪಾಳ ತ್ರಿಶಂಕು ಸ್ಥಿತಿ: ಪ್ರಚಂಡ, ಪೌಡ್ಯಾಲ್‌ಗೆ ಸೋಲು (Prachanda | Poudyal | PM poll | Shyam Saran | Kathmandu,)
Bookmark and Share Feedback Print
 
ನೂತನ ಪ್ರಧಾನಿ ಆಯ್ಕೆಗಾಗಿ ನೇಪಾಳ ಸಂಸತ್ ನಿರ್ಧರಿಸಿದ್ದ ನಾಲ್ಕನೆ ಬಾರಿಯೂ ಚುನಾವಣೆಯಲ್ಲಿಯೂ ಸ್ಪಷ್ಟ ಬಹುಮತ ಪಡೆಯುವಲ್ಲಿ ಮಾವೋ ವರಿಷ್ಠ ಪ್ರಚಂಡ ಹಾಗೂ ಪ್ರತಿಸ್ಪರ್ಧಿ ನೇಪಾಳಿ ಕಾಂಗ್ರೆಸ್‌ನ ರಾಮ್ ಚಂದ್ರಾ ಪೌಡ್ಯಾಲ್ ವಿಫಲರಾಗುವ ಮೂಲಕ ಪ್ರಧಾನಿ ಆಯ್ಕೆ ಬಿಕ್ಕಟ್ಟು ಮುಂದುವರಿದಂತಾಗಿದೆ.

ನೂತನ ಪ್ರಧಾನಿ ಆಯ್ಕೆಗಾಗಿ ಈಗಾಗಲೇ ಮೂರು ಬಾರಿ ಚುನಾವಣೆ ನಡೆಸಲಾಗಿತ್ತು. ಆದರೆ ಮೂರು ಬಾರಿಯೂ ಇಬ್ಬರೂ ಅಭ್ಯರ್ಥಿಗಳು 601 ಸದಸ್ಯ ಬಲದ ಸಂಸತ್ ಸದಸ್ಯರಲ್ಲಿ ಬಹುಮತದ 301 ಸದಸ್ಯರ ಬೆಂಬಲ ಪಡೆಯುವಲ್ಲಿ ವಿಫಲರಾಗಿದ್ದರು. ಆ ನಿಟ್ಟಿನಲ್ಲಿ ಶುಕ್ರವಾರ ಕೂಡ ನಾಲ್ಕನೆ ಚುನಾವಣೆ ನಡೆಸಲಾಗಿತ್ತು. ಅದೂ ಕೂಡ ಫಲಪ್ರದವಾಗದ ಪರಿಣಾಮ ಆಗೋಸ್ಟ್ 18ರಂದು ಮತ್ತೆ ಪ್ರಧಾನಿ ಆಯ್ಕೆ ಚುನಾವಣೆ ನಡೆಯಲಿದೆ ಎಂದು ಸಂಸತ್ ಭವನದ ಮೂಲಗಳು ತಿಳಿಸಿವೆ.

ಇಂದು ನಡೆದ ಪ್ರಧಾನಿಗಾದಿ ಚುನಾವಣೆಯಲ್ಲಿ ಮಾಜಿ ಪ್ರಧಾನಿ 55ರ ಹರೆಯದ ಪ್ರಚಂಡ 213 ಮತಗಳನ್ನು ತನ್ನ ಬಗಲಿಗೆ ಹಾಕಿಕೊಂಡಿದ್ದರೆ, ಸುಮಾರು 99 ಸಂಸದರು ಅವರ ಅಭ್ಯರ್ಥಿತನವನ್ನು ವಿರೋಧಿಸಿದ್ದಾರೆ. ಇದರಲ್ಲಿ ಕುತೂಹಲಕಾರಿಯಾದದ್ದು 26 ಮಾವೋ ಸಂಸದರೇ ಪ್ರಚಂಡ ಪರ ಮತ ಚಲಾಯಿಸಿಲ್ಲ.

ಪ್ರತಿಸ್ಪರ್ಧಿ ನೇಪಾಳಿ ಕಾಂಗ್ರೆಸ್‌ನ ಪೌಡ್ಯಾಲ್ (65) ಅವರು ಮ್ಯಾಜಿಕ್ ಸಂಖ್ಯೆಯಾದ 301 ಸಂಸದರ ಬೆಂಬಲ ಪಡೆಯುವಲ್ಲಿ ಸೋತಿದ್ದು, ಅವರು ಕೇವಲ 122 ಮತ ಪಡೆದಿದ್ದರೆ, 245 ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ನೇಪಾಳ ಪ್ರಧಾನಿ ಆಯ್ಕೆ ತ್ರಿಶಂಕು ಸ್ಥಿತಿ ತಲುಪಿದ್ದು, ಆಗೋಸ್ಟ್ 18ರಂದು ನಡೆಯುವ ಚುನಾವಣೆಯಲ್ಲಿ ಯಾವ ಫಲಿತಾಂಶ ಬರಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ