ಲಂಡನ್: ಭಯೋತ್ಪಾದನೆಗೆ ಪಾಕಿಸ್ತಾನ ಬೆಂಬಲ ನೀಡುತ್ತಿದೆ ಎಂದು ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಭಾರತದಲ್ಲಿ ನೀಡಿದ್ದ ಹೇಳಿಕೆಯ ವಿವಾದ ಈಗ ಬಗೆಹರಿದಿದೆ. ಆ ನಿಟ್ಟಿನಲ್ಲಿ ಪಾಕಿಸ್ತಾನ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಮತ್ತು ಡೇವಿಡ್ ಕಳೆದ ರಾತ್ರಿ ಒಟ್ಟಿಗೆ ಬೋಜನ ಕೂಟದಲ್ಲಿ ಪಾಲ್ಗೊಂಡು ಕುಶಲೋಪರಿ ನಡೆಸಿದರು.