ತನ್ನ ವೈದ್ಯಕೀಯ ವಿದ್ಯಾಭ್ಯಾಸಕ್ಕಾಗಿ ಹಣ ಹೊಂದಿಸಲು ವೆಬ್‌ಸೈಟೊಂದರಲ್ಲಿ ಕನ್ಯತ್ವವನ್ನು ಹರಾಜಿಗಿಟ್ಟಿದ್ದ ಹಂಗೇರಿಯಾದ ಯುವತಿಯೊಬ್ಬಳು 200,000 ಪೌಂಡುಗಳಿಗೆ ಮಾರಾಟ ಮಾಡಿದ್ದಾಳೆ.
ಆರಂಭದಲ್ಲಿ 'ಇಬೇ' ವೆಬ್‌ಸೈಟಿನಲ್ಲಿ ಜಾಹೀರಾತು ಪ್ರಕಟಿಸಿ ಬಿಡ್ಡಿಂಗ್ ಆಹ್ವಾನಿಸಲಾಗಿತ್ತಾದರೂ, ಬಳಿಕ ಅದನ್ನು ಇಮೇಲ್ ಮೂಲಕವೂ ಪ್ರಚಾರ ಮಾಡಲಾಗಿತ್ತು. ಅದರಲ್ಲಿ 18ರ ಹರೆಯದ ಹುಡುಗಿ ತನ್ನನ್ನು ತಾನು 'ಮಿಸ್ ಸ್ಪ್ರಿಂಗ್' ಎಂದಷ್ಟೇ ಗುರುತಿಸಿಕೊಂಡಿದ್ದಳು ಮತ್ತು ತಾನೀಗ ಬ್ರಿಟನ್‌ಗೆ ಬರುತ್ತಿರುವುದಾಗಿ ಹೇಳಿಕೊಂಡಿದ್ದಳು ಎಂದು ಪತ್ರಿಕೆಗಳು ವರದಿ ಮಾಡಿವೆ.
ವರದಿಗಳ ಪ್ರಕಾರ ಆಕೆಯ ಕನ್ಯತ್ವವನ್ನು ಬ್ರಿಟನ್ ಯುವಕನೊಬ್ಬ £ 2,00,000ಗಳಿಗೆ (1.47 ಕೋಟಿ ರೂಪಾಯಿ) ಖರೀದಿಸುವಲ್ಲಿ ಯಶಸ್ವಿಯಾಗಿದ್ದಾನೆ.
ಯುನಿವರ್ಸಿಟಿಯಲ್ಲಿ ವಿದ್ಯಾಭ್ಯಾಸ ಮಾಡಿ ವೈದ್ಯೆಯಾಗಬೇಕೆಂದು ಕನಸು ಕಾಣುತ್ತಿರುವ ಯುವತಿ ಈಗಾಗಲೇ ಅದಕ್ಕಾಗಿನ ಅರ್ಹತೆಯನ್ನು ಗಿಟ್ಟಿಸಿಕೊಂಡಿದ್ದಾಳೆ. ಆದರೆ ನನ್ನ ಕುಟುಂಬಕ್ಕೂ ಇದರಿಂದ ಸಹಾಯ ಮಾಡುತ್ತೇನೆ ಎಂದು ತಿಳಿಸಿದ್ದಾಳೆ.
ನನ್ನ ಕುಟುಂಬ ಸಾಕಷ್ಟು ಸಾಲ ಹೊಂದಿದ್ದು, ಅದನ್ನು ಯಾವುದೇ ರೀತಿಯಲ್ಲೂ ಮರು ಪಾವತಿ ಮಾಡಲು ಕಷ್ಟವಾಗುತ್ತಿದೆ. ನನ್ನ ತಾಯಿ 'ಸ್ವಿಸ್ ಫ್ರಾಂಕ್'ನಿಂದ ಭಾರೀ ಮೊತ್ತದ ಹಣವನ್ನು ಸಾಲ ಮಾಡಿದ್ದಾರೆ. ಅದೀಗ ಬಡ್ಡಿ ಸೇರಿ ಮೂರು ಪಟ್ಟು ಹೆಚ್ಚಾಗಿದೆ. ವಾಪಸ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಕನ್ಯತ್ವ ಮಾರಿಕೊಂಡಿರುವ ಯುವತಿ ವಿವರಣೆ ನೀಡಿದ್ದಾಳೆ.
ಭಾರೀ ಸಾಲದ ಪರಿಣಾಮ ನಾವು ಮನೆ ಕಳೆದುಕೊಂಡು ಬೀದಿಗೆ ಬೀಳುವ ಭೀತಿಯಲ್ಲಿದ್ದೇವೆ. ಸಾಲವನ್ನು ಮರು ಪಾವತಿ ಮಾಡಬೇಕೆಂದು ನಾನು ಬಯಸಿದ್ದೆ. ಅದೇ ಕಾರಣಕ್ಕಾಗಿ ನಾನು ಕನ್ಯತ್ವ ಹರಾಜು ಹಾಕುವ ಯೋಚನೆ ಮಾಡಿದೆ. ಇದೇ ಭಾರೀ ದೊಡ್ಡ ಮೊತ್ತವಲ್ಲ. ಹರಾಜಿನ ಹಣದಲ್ಲಿ ಅರ್ಧಕ್ಕರ್ಧ ತೆರಿಗೆಗೆ ಹೋಗುತ್ತದೆ. ಆದರೆ ಕೈಗೆ ಸಿಗುವ ಹಣದಿಂದ ಸಾಲವನ್ನು ತೀರಿಸಬಹುದಾಗಿದೆ ಎಂದಿದ್ದಾಳೆ.
ಈ ಸಂಬಂಧ ನಾನು ಇಬ್ಬರು ಬಿಡ್ಡರುಗಳ ಜತೆ ನಾನು ಸಂಪರ್ಕದಲ್ಲಿದ್ದೆ. ಓರ್ವ ಐರ್ಲೆಂಡ್ ಮತ್ತು ಇನ್ನೊಬ್ಬ ಬ್ರಿಟೀಷ್. ಇಬ್ಬರೂ ನನ್ನನ್ನು ಇಷ್ಟಪಟ್ಟಿದ್ದರು. ಅವರಲ್ಲಿ ಬ್ರಿಟೀಷ್ ಯುವಕನನ್ನು ಆರಿಸಿದ್ದೇನೆ. ಹರಾಜಿಗೆ ನಾನು ನೀಡಿರುವ ಕಾರಣ ಆತನಿಗೆ ಹೆಚ್ಚು ಮೆಚ್ಚುಗೆಯಾಗಿದೆ. ಇಬ್ಬರೂ ನನ್ನನ್ನು ಮದುವೆಯಾಗಿ, ನನ್ನ ಕುಟುಂಬದ ಯೋಗಕ್ಷೇಮವನ್ನು ನೋಡಿಕೊಳ್ಳಲು ಬಯಸಿದ್ದರು. ಆದರೆ ನನಗೆ ಮದುವೆ ಮತ್ತು ಇನ್ನೊಬ್ಬರ ಜತೆ ಸಹಜೀವನ ನಡೆಸುವ ಬಗ್ಗೆ ಈಗಲೇ ಯಾವುದೇ ನಂಬಿಕೆಯಿಲ್ಲ ಮತ್ತು ನಾನು ಅದಕ್ಕೆ ಸಿದ್ಧಳಾಗಿಲ್ಲ ಎಂದು ತಿಳಿಸಿದ್ದಾಳೆ.